Advertisement

Horoscope: ಭಗವಂತನ ಮೇಲೆ ಪೂರ್ಣ ವಿಶ್ವಾಸವಿರಲಿ

07:02 PM Sep 22, 2024 | Team Udayavani |

ಮೇಷ: ಬಹುವಿಧ ವಿಷಯಗಳಲ್ಲಿ ಆಸಕ್ತಿ.  ಸ್ವಂತ ಉದ್ಯಮದಲ್ಲಿ ಹೊಸಬರಿಗೆ ತರಬೇತಿ ನೀಡುವವರಿಗಾಗಿ ಹುಡುಕಾಟ. ಉತ್ಪನ್ನ ಗಳ ಜನಪ್ರಿಯತೆ ಹೆಚ್ಚಳ. ಯುವಜನರಿಂದ ಹೊಸ ಉದ್ಯೋಗಕ್ಕೆ ಹುಡುಕಾಟ.

Advertisement

ವೃಷಭ: ಭಗವಂತನ ಮೇಲೆ ಪೂರ್ಣ ವಿಶ್ವಾಸವಿರಲಿ. ಉದ್ಯಮಶೀಲತೆಯಿಂದ ಸಮಾಜದಲ್ಲಿ ಗೌರವ ವೃದ್ಧಿ. ಕಟ್ಟಡ ನಿರ್ಮಾಣ ಕ್ಷೇತ್ರಕ್ಕೆ ಕಾಲಿಡಲು ಚಿಂತನೆ. ಸಂಸಾರದಲ್ಲಿ ಸಾಮರಸ್ಯ ವೃದ್ಧಿ. ವ್ಯವಹಾರ ಸಂಬಂಧ ಸಣ್ಣ ಪ್ರಯಾಣದ ಸಾಧ್ಯತೆ.

ಮಿಥುನ: ಧೈರ್ಯದಲ್ಲಿ ಮುಂದುವರಿದರೆ ಜಯ ಖಚಿತ. ಸ್ವಂತ ಉದ್ಯಮ ಉತ್ಕರ್ಷದ ದಾರಿಯಲ್ಲಿ. ಉತ್ಪನ್ನಗಳಿಗೆ ಬೇಡಿಕೆ ವೃದ್ಧಿ. ಭವಿಷ್ಯದ ಕುರಿತು ಚಿಂತೆ ಬೇಡ. ಹಳೆಯ ಮಿತ್ರರ ಭೇಟಿಯಿಂದ ಸಮಾಧಾನ. ದೇವಾಲಯಕ್ಕೆ ಭೇಟಿ.

ಕರ್ಕಾಟಕ: ಹೊಸ ಉದ್ಯೋಗಿಗಳಿಗೆ ಮಾರ್ಗ ದರ್ಶನದ ಜವಾಬ್ದಾರಿ.  ಉದ್ಯಮ ಉತ್ಕರ್ಷದ ಹಾದಿಯಲ್ಲಿ. ಗೃಹಿಣಿಯರ ಉದ್ಯಮ ಯಶಸ್ಸಿನ ಹಂತದಲ್ಲಿ. ಅಪರೂಪದ ನೆಂಟರ ಆಗಮನ. ಮಕ್ಕಳ ಕಲಿಕೆ ಆಸಕ್ತಿಯಲ್ಲಿ ಸುಧಾರಣೆ.

ಸಿಂಹ: ಉದ್ಯೋಗ ಸ್ಥಾನದಲ್ಲಿ ಅಯಾಚಿತ ಗೌರವ ಪ್ರಾಪ್ತಿ. ಉದ್ಯಮದ ಕಾರ್ಯವ್ಯಾಪ್ತಿಯನ್ನು ವಿಸ್ತರಿಸುವ ಯೋಚನೆ. ಪರಿಸರ ಸ್ವತ್ಛತ ಕಾರ್ಯಗಳನ್ನು ಕೈಗೊಳ್ಳಲು ಆಸಕ್ತಿ. ಸಾಮಾಜಿಕ ಕಾರ್ಯಗಳಲ್ಲಿ ನಾಯಕತ್ವ ಪ್ರಾಪ್ತಿ.

Advertisement

ಕನ್ಯಾ: ಉದ್ಯೋಗ ಸ್ಥಾನದಲ್ಲಿ ನಿರುತ್ಸಾಹದ ವಾತಾವರಣ. ಸ್ವಂತ ಉದ್ಯಮ ನಿಧಾನವಾಗಿ ಅಭಿವೃದ್ಧಿ. ಹಳೆಯ ಒಡನಾಡಿಗಳ ಅಕಸ್ಮಾತ್‌ ಭೇಟಿ. ಪ್ರಾಕೃತಿಕ ತಾಣದ ಸಂದರ್ಶನದಿಂದ  ಮನಶಾಂತಿ. ಆಪ್ತರ ಒಡನಾಟ. ಮನೆಯಲ್ಲಿ ಎಲ್ಲರ ಆರೋಗ್ಯ ಉತ್ತಮ ಸ್ಥಿತಿಯಲ್ಲಿ.

ತುಲಾ: ಉದ್ಯೋಗದಲ್ಲಿ ಸ್ಥಿರ ಪರಿಸ್ಥಿತಿ. ಉದ್ಯಮಿಗಳಿಗೆ ಅನುಕೂಲಕರ ವಾತಾವರಣ. ಕುಟುಂಬ ಕಲಹ ನಿವಾರಣೆ.  ವಿದ್ವಾಂಸರಿಗೆ ಗೌರವ ಪ್ರಾಪ್ತಿ. ಹಿರಿಯರಿಗೆ ಸಮಾಜದಲ್ಲಿ ಸಮ್ಮಾನ. ಮಕ್ಕಳಿಗೆ ಕಲಿಕೆಯಲ್ಲಿ ಪುರಸ್ಕಾರ.

ವೃಶ್ಚಿಕ: ಸಂತೃಪ್ತಿ, ಸಮಾಧಾನದ ದಿನ. ಆಪ್ತರಿಂದ ಪ್ರಶಂಸೆಯ ಮಾತುಗಳು.  ಆಸ್ತಿ ವಿವಾದ ಪರಿಹಾರ. ವಸ್ತ್ರ, ಸಿದ್ಧವಸ್ತ್ರ, ಪಾದರಕ್ಷೆ, ಶೋಕಿಸಾಮಗ್ರಿಗಳ ಮೂಲಕ ಅಧಿಕ ಲಾಭ. ಹಳೆಯ ಒಡನಾಡಿಗಳ ಭೇಟಿ.

ಧನು:  ಸಂಕಟಗಳನ್ನು ಎದುರಿಸಿ ಗಟ್ಟಿಯಾದ ಮನಸ್ಸು. ಉದ್ಯೋಗದ ಜವಾಬ್ದಾರಿಗಳ ನಿರ್ವಹಣೆಯಲ್ಲಿ ಯಶಸ್ವಿ. ಉದ್ಯಮ ಕ್ಷೇತ್ರದ ಪೈಪೋಟಿಗಳನ್ನು ಎದುರಿಸಲು ಹೊಸ ವಿಧಾನಗಳ ಬಳಕೆ. ದೈವಚಿಂತನೆಯಿಂದ ಧೈರ್ಯವೃದ್ಧಿ.

ಮಕರ: ತೀವ್ರವಾದ ಆತ್ಮವಿಮರ್ಶೆ ಮಾಡಿಕೊಳ್ಳಬೇಕಾದ ಸಂದರ್ಭ. ಉದ್ಯೋಗಸ್ಥರ. ಕಾರ್ಯಸಾಮರ್ಥ್ಯಕ್ಕೆ ಮೆಚ್ಚುಗೆ. ಸ್ವಂತ ಉದ್ಯಮದ ಉತ್ಪನ್ನಗಳ ಗುಣಮಟ್ಟ ಸುಧಾರಣೆಯತ್ತ ಗಮನ ಇರಲಿ. ಪಾಲುದಾರಿಕೆ ವ್ಯವಹಾರದಲ್ಲಿ ಪ್ರಗತಿ.

ಕುಂಭ: ಉದ್ಯೋಗ ಸ್ಥಾನದಲ್ಲಿ ಯಥಾಸ್ಥಿತಿ ಪಾಲನೆ.  ವೃತ್ತಿರಂಗದಲ್ಲಿ ಗುರುಸ್ಥಾನ ಪ್ರಾಪ್ತಿ. ಬಂಧುವರ್ಗದವರಿಂದ ಪ್ರೀತಿ ಪ್ರಕಟನೆ.ಕಾರ್ಯನಿಮಿತ್ತ ಸಣ್ಣ ಪ್ರಯಾಣ ಕೈಗೊಳ್ಳುವಿರಿ. ಮುದ್ರಣ ಸಾಮಗ್ರಿ, ಸ್ಟೇಶನರಿ ವಿತರಕರಿಗೆ ಆದಾಯ ವೃದ್ಧಿ.

ಮೀನ: ಅಪೇಕ್ಷಿತ ಕಾರ್ಯ ಸುಲಭವಾಗಿ ಈಡೇರಿಕೆ. ಆಪ್ತರಿಂದ ಸಕಾಲಿಕ ಮಾರ್ಗದರ್ಶನ. ಅಧಿಕಾರಿ ವರ್ಗದವರಿಂದ ಸಹಾಯ. ಹಿರಿಯ ಆಧ್ಯಾತ್ಮಿಕ ಸಾಧಕರ ಭೇಟಿ. ಸಂಸಾರದಲ್ಲಿ ಸಂಪೂರ್ಣ ಸಾಮರಸ್ಯ

Advertisement

Udayavani is now on Telegram. Click here to join our channel and stay updated with the latest news.

Next