Advertisement

Horoscope: ಈ ರಾಶಿಯವರಿಗಿಂದು ಉದ್ಯೋಗ ಕ್ಷೇತ್ರದಲ್ಲಿ ಅಗ್ರಸ್ಥಾನದಲ್ಲಿ ಮನ್ನಣೆ ಸಿಗಲಿದೆ

07:33 AM Jun 04, 2024 | Suhan S |

ಮೇಷ: ಉದ್ಯೋಗ ಸ್ಥಾನದಲ್ಲಿ  ನಿಗದಿತ ಕೆಲಸಗಳು ಮುಕ್ತಾಯ. ಉದ್ಯಮದಲ್ಲಿ ಉಭಯ ಪಕ್ಷಗಳಿಗೂ ಹುಮ್ಮಸ್ಸು. ಮಹಿಳೆಯರ  ಸ್ವಾವಲಂಬನೆ ಯೋಜನೆ ಮುನ್ನಡೆ. ಪಾಲುದಾರಿಕೆ ವ್ಯವಹಾರದಲ್ಲಿ ಸುಧಾರಣೆ.

Advertisement

ವೃಷಭ: ಉದ್ಯೋಗದಲ್ಲಿ ಯಥಾಸ್ಥಿತಿ.  ಕೃಷಿ ನೀರಾವರಿಗೆ ಪರ್ಯಾಯ ವ್ಯವಸ್ಥೆ. ಸರಕಾರಿ ಯೋಜನೆಗಳ ಸೌಲಭ್ಯ ಪಡೆಯಲು ಮತ್ತೆ ಪ್ರಯತ್ನ. ಮಾತಿನಲ್ಲಿ ಮೃದುತ್ವ ಇರಲಿ. ಗೃಹದಲ್ಲಿ ಸಂತೃಪ್ತಿಯ ವಾತಾವರಣ.

ಮಿಥುನ:  ಪಟ್ಟುಹಿಡಿದ ಪ್ರಯತ್ನದಿಂದ ಯಶಸ್ಸು. ಉದ್ಯೋಗದಲ್ಲಿ  ಕಾರ್ಯ ಸಾಮರ್ಥ್ಯ ಪ್ರದರ್ಶನ. ಉದ್ಯಮ ಅಭಿವೃದ್ಧಿಗೆ  ತಾತ್ಕಾಲಿಕ ತಡೆ. ಆಭರಣ ವ್ಯಾಪಾರಿಗಳಿಗೆ  ಉತ್ತಮ  ಲಾಭ. ಮನೆಯಲ್ಲಿ  ಸಂತೋಷದ ವಾತಾವರಣ.

ಕರ್ಕಾಟಕ:  ಕಾಲಕಳೆದಂತೆ ಉದ್ಯೋಗದಲ್ಲಿ  ಉನ್ನತಿ. ಅಕಸ್ಮಾತ್‌ ಧನಾಗಮ ಯೋಗ.ಕೃಷ್ಯುತ್ಪನ್ನ ಮಾರಾಟದಿಂದ ತೃಪ್ತಿಕರ ಲಾಭ.  ಧಾರ್ಮಿಕ ಕ್ರಿಯೆಯಿಂದ ಇಷ್ಟಾರ್ಥ ಸಿದ್ಧಿ. ಎಲ್ಲರಿಗೂ ಉತ್ತಮ ಆರೋಗ್ಯ.

ಸಿಂಹ: ಕಾರ್ಯರಂಗದಲ್ಲಿ ಪೂರ್ಣ ಪ್ರಮಾಣದಲ್ಲಿ ಶಕ್ತಿಯ ಬಳಕೆ. ಉದ್ಯೋಗ ಕ್ಷೇತ್ರದಲ್ಲಿ ಅಗ್ರಸ್ಥಾನದಲ್ಲಿ ಮನ್ನಣೆ. ಎಲ್ಲೆಯಿಲ್ಲದ ಉದ್ಯಮದ ಪ್ರಗತಿ. ಕೃಷಿ  ಕಾರ್ಮಿಕರಿಗೆ ಅನುಕೂಲದ ವಾತಾವರಣ.

Advertisement

ಕನ್ಯಾ: ವೃತ್ತಿಯಲ್ಲಿ ಸ್ಥಿರವಾಗಿ ಸ್ಥಾಪನೆ. ಸಹೋ ದ್ಯೋಗಿಗಳಿಂದ ಪ್ರತಿಭೆಗೆ  ಗೌರವ. ಸಣ್ಣ ಉದ್ಯಮಿ ಗಳಿಗೆ ಅನುಕೂಲದ ದಿನ. ಕುಶಲಕರ್ಮಿಗಳಿಗೆ ಯೋಗ್ಯ ಸ್ಥಾನದಲ್ಲಿ ಉದ್ಯೋಗಾವಕಾಶ. ಕನ್ಯೆಯ ಶರ್ತದಿಂದ ವಿವಾಹ ಪ್ರಯತ್ನ ಭಂಗ.

ತುಲಾ:  ನಿಸ್ಸಂಕೋಚ ನಡವಳಿಕೆಯಿಂದ ಗೌರವ. ಹಿತಶತ್ರುಗಳ ಸಂಚಿಗೆ ಸೋಲು. ಗುರುಸ್ಥಾನದಲ್ಲಿರುವ ಹಿರಿಯರ ಭೇಟಿಯಿಂದ ಸಮಾಧಾನ.  ದೇವತಾ ಸಾನ್ನಿಧ್ಯ ದರ್ಶನ.  ವ್ಯವಹಾರ ಸಂಬಂಧ ಪೂರ್ವದ ಕಡೆಗೆ ಸಣ್ಣ ಪ್ರಯಾಣ ಸಂಭವ.

ವೃಶ್ಚಿಕ:   ಉದ್ಯೋಗ ಸ್ಥಾನದಲ್ಲಿ ಅನಿಶ್ಚಿತ ಪರಿಸ್ಥಿತಿ. ಉದ್ಯಮಿಗಳಿಗೆ ಎದುರಾಳಿಗಳಿಂದ ಸಹಜ ಪೈಪೋಟಿ. ಸರಕಾರಿ ಅಧಿಕಾರಿಗಳಿಗೆ ದುಷ್ಟ ರಾಜಕಾರಣಿಗಳ ಕಾಟ. ಗೃಹಿಣಿಯರ ಸ್ವಾವಲಂಬನೆ ಯೋಜನೆಗಳು ಯಶಸ್ಸಿನ ಪಥದಲ್ಲಿ.

ಧನು: ನೇರ ಮಾರ್ಗದಲ್ಲಿ ಸಂಪಾದನೆ. ಸಹಕಾರಿಗಳಿಂದ  ಸಂಪೂರ್ಣ ಸಹಕಾರ.  ಖಾದಿ ಉಡುಪು ಉತ್ಪಾದಕರಿಗೆ ಆದಾಯ ವೃದ್ಧಿ. ಜೇನು ಸಾಕಣೆಯಲ್ಲಿ ಪ್ರಗತಿ. ಮಹಿಳೆಯರ ನೇತೃತ್ವದ ಖಾದ್ಯವಸ್ತು  ಘಟಕಕ್ಕೆ ಅಭೂತಪೂರ್ವ ಲಾಭ.

ಮಕರ:  ಉದ್ಯೋಗ ಸ್ಥಾನದಲ್ಲಿ ಸಕಾಲದಲ್ಲಿ ಕಾರ್ಯ ಮುಕ್ತಾಯ. ಉದ್ಯಮ ಉತ್ಪನ್ನಗಳ  ಮಾರಾಟ ವೃದ್ಧಿ. ಆಭರಣ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿದ ಪ್ರಮಾಣದಲ್ಲಿ ವರಮಾನ ವೃದ್ಧಿ.  ಪ್ರಾಪ್ತ ವಯಸ್ಕ ಹುಡುಗರಿಗೆ ವಿವಾಹ ಯೋಗ.

ಕುಂಭ: ಉದ್ಯೋಗ ಸ್ಥಾನದಲ್ಲಿ ನಿಗದಿತ ಕಾರ್ಯಗಳು ಮುಕ್ತಾಯ. ಉದ್ಯಮದ ಉತ್ಪನ್ನಗಳ ಗ್ರಾಹಕರಿಂದ ನಿರೀಕ್ಷೆ ಮೀರಿದ ಬೇಡಿಕೆಗಳು. ಮುದ್ರಣ ಸಾಮಗ್ರಿ,  ಸ್ಟೇಶನರಿ ವಿತರಕರ ಮಾರುಕಟ್ಟೆ ಜಾಲ ವಿಸ್ತರಣೆ. ಟೈಲರಿಂಗ್‌ ವೃತ್ತಿ ಬಲ್ಲವರಿಗೆ ಉದ್ಯೋಗಾವಕಾಶ.

ಮೀನ:  ಸಪ್ತಾಹದ ಆರಂಭದಲ್ಲೇ  ಇನ್ನಷ್ಟು ಕಾರ್ಯಗಳ  ಒತ್ತಡ. ಏಕಕಾಲಕ್ಕೆ ಹಲವು ವಿಭಾಗಗಳ ಕಡೆಗೆ ಗಮನ ಹರಿಸಬೇಕಾದ ಸಂದರ್ಭ. ಸರಕಾರಿ ಇಲಾಖೆಗಳವರಿಂದ ಸಹಕಾರ. ಕೃಷಿಭೂಮಿ ಕೊಳ್ಳಲು ಪ್ರಯತ್ನ. ಉದ್ಯೋಗ ಅರಸುತ್ತಿರುವವರಿಗೆ  ಮಾರ್ಗದರ್ಶನ.

Advertisement

Udayavani is now on Telegram. Click here to join our channel and stay updated with the latest news.

Next