Advertisement

Horoscope: ಹಿತಶತ್ರುಗಳು ಮತ್ತು ಸ್ವಾರ್ಥಿಗಳ ಬಗ್ಗೆ ಎಚ್ಚರವಿರಲಿ

07:35 AM Jun 03, 2024 | Suhan S |

ಮೇಷ: ಸಪ್ತಾಹಾರಂಭದಲ್ಲಿ  ಹೊಸ ಅನುಭವ. ಉದ್ಯೋಗ ಸ್ಥಾನದಲ್ಲಿ  ಉತ್ಸಾಹ ವರ್ಧನೆ.  ಉದ್ಯಮಗಳ ನಡುವೆ ಉತ್ಪನ್ನಗಳ ಪ್ರಚಾರದಲ್ಲಿ   ಮೇಲಾಟ. ಹಿರಿಯರ  ಆರೋಗ್ಯದ ಕಡೆಗೆ ಗಮನ ಇರಲಿ. ಸಣ್ಣ ಪ್ರಯಾಣ ಸಂಭವ.

Advertisement

ವೃಷಭ: ಸರಕಾರಿ ಅಧಿಕಾರಿಗಳಿಗೆ ಹೆಚ್ಚುವರಿ ಕೆಲಸದ ಹೊರೆ. ಖಾಸಗಿ ರಂಗದ ಉತ್ಪಾದನೆ ಹೆಚ್ಚಳ. ದೇವತಾ ಸಾನ್ನಿಧ್ಯಕ್ಕೆ  ಭೇಟಿ. ಹಿರಿಯರು, ಗೃಹಿಣಿಯರು ಮತ್ತು ಮಕ್ಕಳಿಗೆ  ಉಲ್ಲಾಸದ ವಾತಾವರಣ.

ಮಿಥುನ: ಹಿತಶತ್ರುಗಳು ಮತ್ತು ಸ್ವಾರ್ಥಿಗಳ ಬಗ್ಗೆ ಎಚ್ಚರ.  ಉದ್ಯೋಗ ಸ್ಥಾನದಲ್ಲಿ ಹೊಸ ಸವಾಲುಗಳು.  ಸ್ವಂತಉದ್ಯಮದ ಪ್ರಗತಿ ತೃಪ್ತಿಕರ.ಕೃಷ್ಯುತ್ಪನ್ನ ಮಾರಾಟದಿಂದ ಲಾಭ.  ಶಿಕ್ಷಣದಲ್ಲಿ  ಮಕ್ಕಳ  ಆಸಕ್ತಿ ವೃದ್ಧಿಗೆ ಶತಪ್ರಯತ್ನ.

ಕರ್ಕಾಟಕ:  ಉದ್ಯೋಗ ಸ್ಥಾನದಲ್ಲಿ ಪ್ರತಿಭೆ,  ಹಿರಿತನಕ್ಕೆ ಪ್ರಾಶಸ್ತ್ಯ  ಉದ್ಯಮದ ಉತ್ಪಾದನೆಗಳ ಜನಪ್ರಿಯತೆ ವೃದ್ಧಿ. ವಸ್ತ್ರ, ಸಿದ್ಧ ಉಡುಪು, ಆಭರಣ, ಶೋಕಿ ವಸ್ತುಗಳ ವ್ಯಾಪಾರ ಹೆಚ್ಚಳ. ದೀರ್ಘಾವಧಿ ಹೂಡಿಕೆಯಲ್ಲಿ ಲಾಭ.

ಸಿಂಹ: ಉದ್ಯೋಗಸ್ಥರಿಗೆ ಸಂತೃಪ್ತಿಯ ಭಾವನೆ. ಗ್ರಾಹಕರ ಪ್ರಚಾರದಿಂದ  ವ್ಯಾಪಾರಕ್ಕೆ ಪೋಷಣೆ. ಕಟ್ಟಡ ನಿರ್ಮಾಣ ಕಂಟ್ರಾಕ್ಟರರಿಗೆ ಕಾರ್ಮಿಕರ ಸಮಸ್ಯೆ.ಮನೆಯಲ್ಲಿ ಮಂಗಲ ಕಾರ್ಯದ ಪ್ರಸ್ತಾವ. ಲೇವಾದೇವಿ ವ್ಯವಹಾರದಲ್ಲಿ ನಷ್ಟ‌.

Advertisement

ಕನ್ಯಾ: ಉದ್ಯೋಗ ಸ್ಥಾನದಲ್ಲಿ ಹಿತಕರ ವಾತಾವರಣ.  ಸ್ವಂತ ಉದ್ಯಮದಲ್ಲಿ ಗಮನಾರ್ಹ ಪ್ರಗತಿ, ಹೊಸ ನೌಕರರ ಸೇರ್ಪಡೆ. ಉದ್ಯೋಗಾಸಕ್ತರಿಗೆ  ಅಯಾಚಿತ  ಅವಕಾಶಗಳು ಲಭ್ಯ. ಕೃಷಿ ಭೂಮಿಯಲ್ಲಿ ಉತ್ತಮ ಬೆಳೆ.

ತುಲಾ:  ಸಮಸ್ಯೆಗಳಿಗೆ ಸಕಾಲದಲ್ಲಿ ಪರಿಹಾರ. ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ. ಗೃಹೋಪಯೋಗಿ.  ಇಲೆಕ್ಟ್ರಾನಿಕ್ಸ್‌  ಸಾಮಗ್ರಿಗಳ ಖರೀದಿ.ಕುಶಲಕರ್ಮಿಗಳಿಗೆ ಉದ್ಯೋಗಾವಕಾಶ.ಕೀರ್ತನೆ, ಭಜನೆ, ಸತ್ಸಂಗಗಳಲ್ಲಿ  ಆಸಕ್ತಿ.

ವೃಶ್ಚಿಕ:  ಸಕಲ ಬಾಧೆಗಳಿಂದ  ಬಿಡುಗಡೆ. ಉದ್ಯೋಗ ಸ್ಥಾನದಲ್ಲಿ ವಿಶ್ವಾಸ ವೃದ್ಧಿ.  ಉದ್ಯಮ ಭರದಲ್ಲಿ ಮುನ್ನಡೆ.   ಉತ್ಪನ್ನಗಳ ಗುಣಮಟ್ಟಕ್ಕೆ ಸಾಮಾಜಿಕರ ಶ್ಲಾಘನೆ. ಹತ್ತಿರದ ದೇವತಾ ಕ್ಷೇತ್ರಕ್ಕೆ ಭೇಟಿ.

ಧನು: ಕುಟುಂಬದೊಳಗೆ ಸಾಮರಸ್ಯ ಸ್ಥಾಪನೆ. ಉದ್ಯೋಗ ಸ್ಥಾನದಲ್ಲಿ ಸಜ್ಜನರ ಸದ್ಭಾವನೆಗೆ ಪಾತ್ರರಾಗುವಿರಿ.  ಸಣ್ಣ ಪ್ರಮಾಣದ  ಉದ್ಯಮಗಳ ಅಭಿವೃದ್ಧಿ. ಹೈನುಗಾರಿಕೆ, ಜೇನು ವ್ಯವಸಾಯದಲ್ಲಿ ಪ್ರಗತಿ.

ಮಕರ:  ಉದ್ಯೋಗ ಸ್ಥಾನ ನವೀಕರಣ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿ ಲಾಭ. ಕೃಷ್ಯುತ್ಪನ್ನಗಳ ಮಾರಾಟದಿಂದ ಸಾಮಾನ್ಯ ಲಾಭ. ಹಣ್ಣು, ತರಕಾರಿ ಬೆಳೆಗಾರರಿಗೆ ಆದಾಯವೃದ್ಧಿ. ಸಂಸಾರದಲ್ಲಿ ಪ್ರೀತಿ, ಸಾಮರಸ್ಯ ವರ್ಧನೆ.

ಕುಂಭ: ಹೊಸ ಆದಾಯ ಮೂಲಗಳ ಉಪಯೋಗ. ಸರಕಾರಿ ನೌಕರರಿಗೆ ಅನುಕೂಲ. ಕೆಲವು ಉದ್ಯಮಗಳಲ್ಲಿ ನಿರೀಕ್ಷೆ ಮೀರಿದ ಪ್ರಗತಿ.  ಸೇವಾ ಕಾರ್ಯಗಳಲ್ಲಿ ಕೈಜೋಡಿಸಲು ಮನೆ ಮಂದಿಯ  ಸಹಕಾರ.

ಮೀನ: ಧರ್ಮ ಮಾರ್ಗದಲ್ಲಿ ನಡೆಯಲು ಸ್ಥಿರಬುದ್ಧಿ. ಉದ್ಯೋಗದಲ್ಲಿ ಅಜಾತಶತ್ರುತ್ವ.  ಸರಕಾರಿ ಇಲಾಖೆ ನೌಕರರಿಂದ ಸಹಕಾರ. ಪಾಲುದಾರಿಕೆಯಲ್ಲಿ  ಹೊಸ ವ್ಯವಹಾರ ಆರಂಭಿಸಲು ಚಿಂತನೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ.

Advertisement

Udayavani is now on Telegram. Click here to join our channel and stay updated with the latest news.

Next