Advertisement

ಸೋಮವಾರದ ರಾಶಿ ಫಲ: ಈ ರಾಶಿ ಅವರಿಗೆ ಸಂಪತ್ತಿನಲ್ಲಿ ಅನುರಾಗ ವೃದ್ಧಿ

06:58 PM Jan 01, 2023 | Team Udayavani |

ಮೇಷ: ಅಧಿಕ ಜನ ಸಂಪರ್ಕ. ಸಾಂಸಾರಿಕ ಸುಖದಲ್ಲಿ ತಲ್ಲೀನತೆ. ನಾನಾ ರೀತಿಯ ಮನೋರಂಜನೆಯಲ್ಲೂ ಆಸಕ್ತಿ. ಅವಿವಾಹಿತರಿಗೆ ವಿವಾಹ ಯೋಗ. ದೀರ್ಘ‌ ಪ್ರಯಾಣ. ಪಾಲುಗಾರಿಕೆ ವ್ಯವಹಾರಗಳಲ್ಲಿ ಅಭಿವೃದ್ಧಿ.

Advertisement

ವೃಷಭ: ಅಧಿಕ ಧನ ಸಂಪಾದನೆಯ ಅಪೇಕ್ಷೆ. ಉತ್ತಮ ಜ್ಞಾನ ತಿಳುವಳಿಕೆಯಿಂದ ಕೂಡಿದ ಮಾತುಗಾರಿಕೆಗೆ ಪ್ರಯತ್ನ. ಉದ್ಯೋಗ ವ್ಯವಹಾರಗಳಲ್ಲಿ ಹೆಚ್ಚಿದ ಜವಾಬ್ದಾರಿ ಪರಿಶ್ರಮ. ಗುರುಹಿರಿಯರ ಪ್ರೋತ್ಸಾಹದಿಂದ ಕಾರ್ಯ ಸಫ‌ಲತೆ.

ಮಿಥುನ: ಆರೋಗ್ಯ ಗಮನಿಸಿ. ಸಾಹಸ ಪ್ರವೃತ್ತಿ ಮಾಡದಿರಿ. ಉದ್ಯೋಗದಲ್ಲಿ ಪರಿಶ್ರಮಕ್ಕೆ ತಕ್ಕ ಪ್ರತಿಫ‌ಲ ಲಭಿಸಲಿದೆ. ಅಧ್ಯಯನದಲ್ಲಿ ಆಸಕ್ತಿ. ದಾಂಪತ್ಯ ಸುಖಕರ. ಸಂದರ್ಭಕ್ಕೆ ಸರಿಯಾಗಿ ಪಾಲುಗಾರರ ಸಹಕಾರ ಲಭ್ಯ.

ಕರ್ಕ:  ನಕಾರಾತ್ಮಕ ಚಿಂತನೆಗೆ ಆದ್ಯತೆ ನೀಡದಿರಿ. ತಾಳ್ಮೆ ಸಹನೆಯಿಂದ ಕಾರ್ಯ ಪ್ರವೃತ್ತರಾಗಿ. ದೂರದ ಬಂಧುಮಿತ್ರರಿಂದ ಸಹಕಾರ ಲಭಿಸುವುದು. ದಾಂಪತ್ಯ ಸುಖ ವೃದ್ಧಿ. ಕ್ಷಮಾಗುಣಕ್ಕೆ ಆದ್ಯತೆ ನೀಡುವುದರಿಂದ ಜನರಿಂದ ಬಹು ಪ್ರಶಂಸೆ ಲಭಿಸುವುದು.

ಸಿಂಹ: ಭೂಮಿ ವಾಹನ ಆಸ್ತಿ ಇತ್ಯಾದಿ ವಿಚಾರಗಳಲ್ಲಿ ಪ್ರಗತಿ. ನಿರೀಕ್ಷಿತ ಧನಾದಾಯ ಲಭಿಸುವುದು. ಸಂಪತ್ತಿನಲ್ಲಿ ಅನುರಾಗ ವೃದ್ಧಿ. ಪರಸ್ಪರ ಸಹಕಾರ. ಉದ್ಯೋಗ ವ್ಯವಹಾರಗಳಲ್ಲಿ ಜಾಣತನದ ಪ್ರದರ್ಶನದಿಂದ ಅತೀ ಸಫ‌ಲತೆ.

Advertisement

 ಕನ್ಯಾ: ಆರೋಗ್ಯ ವೃದ್ಧಿ. ಗುರುಹಿರಿಯರ ಆಶೀರ್ವಾದ ಬಲದಿಂದ ಕೆಲಸ ಕಾರ್ಯಗಳಲ್ಲಿ ಅಭಿವೃದ್ಧಿ. ಕೀರ್ತಿ ಸಂಪಾದನೆ. ಹಣಕಾಸಿನ ವಿಚಾರದಲ್ಲಿ ಖರ್ಚಿಗೆ ಸರಿಯಾಗಿ ವ್ಯಯ ಸಂಭವ. ಮಾತಿನಲ್ಲಿ ಜವಾಬ್ದಾರಿ ಹೆಚ್ಚಾಗಿ ಕಂಡೀತು.

ತುಲಾ: ಉದ್ಯೋಗ ವ್ಯವಹಾರಗಳಲ್ಲಿ ತಲ್ಲೀನತೆ. ಕಾರ್ಯ ಸಾಧಿಸಿದ ಸಂತೋಷ. ನಿರೀಕ್ಷಿತ ಸ್ಥಾನ ಗೌರವಾದಿ ಲಭ್ಯ. ದೂರದ ವ್ಯವಹಾರದಿಂದ ಅಧಿಕ ಧನಾರ್ಜನೆ. ಉತ್ತಮ ವಾಕ್‌ಚತುರತೆ. ಮನೆಯಲ್ಲಿ ಸಂತಸದ ವಾತಾವರಣ. ಗುರುಹಿರಿಯರಿಗೆ ಹೆಚ್ಚಿನ ಜವಾಬ್ದಾರಿ.

ವೃಶ್ಚಿಕ: ದೀರ್ಘ‌ ಪ್ರಯಾಣದಿಂದ ದೇಹಾಯಾಸ ಸಂಭವ. ಆರೋಗ್ಯದ ಬಗ್ಗೆ ಉದಾಸೀನ ಪ್ರವೃತ್ತಿ ಸಲ್ಲದು. ನೂತನ ಮಿತ್ರರ ಭೇಟಿ. ಸಹೋದ್ಯೋಗಿಗಳ ಸಹಕಾರದಿಂದ ಕೆಲಸ ಕಾರ್ಯಗಳಲ್ಲಿ ಪ್ರಗತಿ. ಅವಿವಾಹಿತರಿಗೆ ವಿವಾಹ ಭಾಗ್ಯ. ಗೃಹೋಪಕರಣಗಳ ವಸ್ತುಗಳ ಸಂಗ್ರಹ.

ಧನು:  ಸರಿಯಾದ ನಿಯಮ ಪಾಲನೆಯಿಂದ ಆರೋಗ್ಯ ವೃದ್ಧಿ. ಉತ್ತಮ ಧನಾರ್ಜನೆ. ನಿರೀಕ್ಷಿತ ಸಹಾಯ ಲಭ್ಯ. ಸಣ್ಣ ಪ್ರಯಾಣ ಯೋಗ. ಸಾಂಸಾರಿಕ ಸುಖ ಮಧ್ಯಮ. ವಿದ್ಯಾರ್ಥಿಗಳು ಪರರ ಸಹಾಯ ಪಡೆದು ನಿರೀಕ್ಷಿತ ಗುರಿ ಸಾಧಿಸಿರಿ. ಹಿರಿಯರ ಆರೋಗ್ಯ ಗಮನಿಸಿ.

ಮಕರ: ಆರೋಗ್ಯದಲ್ಲಿ ಸುಧಾರಣೆ. ದೂರದ ವ್ಯವಹಾರಗಳಿಂದ ಉತ್ತಮ ಧನಾರ್ಜನೆ. ಆಸ್ತಿ ಇತ್ಯಾದಿ ವಿಚಾರಗಳಲ್ಲಿ ಪ್ರಗತಿ. ಸಾಂಸಾರಿಕ ಸುಖ ಮಧ್ಯಮ. ಮಕ್ಕಳ ಬಗ್ಗೆ ಹೆಚ್ಚಿದ ಗಮನ. ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ ಒದಗುವ ಸಂಭವ.

ಕುಂಭ: ದೀರ್ಘ‌ ಪ್ರಯಾಣದಲ್ಲಿ ನಿರೀಕ್ಷಿತ ಸಫ‌ಲತೆ. ಉತ್ತಮ ಸ್ಥಾನ ಗೌರವಾದಿ ಲಭ್ಯ. ಅಧಿಕ ಧನಾರ್ಜನೆ. ನೂತನ ಮಿತ್ರರ ಭೇಟಿ. ಆಸ್ತಿ ವಿಚಾರಗಳಲ್ಲಿ ಹೆಚ್ಚಿದ ಜವಾಬ್ದಾರಿ. ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾದ ತೃಪ್ತಿ. ದಾಂಪತ್ಯ ಸುಖ ತೃಪ್ತಿ.

ಮೀನ: ಹಣಕಾಸಿನ ವಿಚಾರದಲ್ಲಿ ಜಾಗೃತೆಯ ನಡೆ ಅಗತ್ಯ. ಮಾತನಾಡುವಾಗ ದಾಕ್ಷಿಣ್ಯಕ್ಕೆ ಒಳಗಾಗದಿರಿ. ಸರಿಯಾದ ದಾಖಲೆಯೊಂದಿಗೆ ವ್ಯವಹರಿಸಿ. ದೂರದ ವ್ಯವಹಾರ ನಿಮಿತ್ತ ಪ್ರಯಾಣ ಸಂಭವ. ವಿದ್ಯಾರ್ಥಿಗಳಿಗೆ ಪರಿಶ್ರಮಕ್ಕೆ ತಕ್ಕ ಪ್ರತಿಫ‌ಲ.

Advertisement

Udayavani is now on Telegram. Click here to join our channel and stay updated with the latest news.

Next