Advertisement

ನಿಮ್ಮ ಗ್ರಹಬಲ: ಈ ರಾಶಿಯವರಿಗಿಂದು ಹಣಕಾಸಿನ ವಿಚಾರದಲ್ಲಿ ದಾಕ್ಷಿಣ್ಯದಿಂದ ನಷ್ಟವಾಗಲಿದೆ!

08:27 AM Dec 21, 2021 | Team Udayavani |

21-12-2021

Advertisement

ಮೇಷ: ಸರಕಾರಿ ಕಾರ್ಯಗಳಲ್ಲಿ ಸಫ‌ಲತೆ. ಪ್ರಯಾಣ ದಿಂದ ಸಂತೋಷ. ಜನಮನ್ನಣೆ, ಹೆಚ್ಚಿದ ಸ್ಥಾನಮಾನ, ಕೀರ್ತಿ. ಅನಿರೀಕ್ಷಿತ ಧನಾಗಮನ. ಅವಿವಾಹಿತರಿಗೆ ಒಳ್ಳೆಯ ಸಂಬಂಧ ಒದಗಿ ಬರುವ ಅವಕಾಶ. ದಾಂಪತ್ಯ ಸುಖ ವೃದ್ಧಿ.

ವೃಷಭ: ಆರೋಗ್ಯ ವೃದ್ಧಿ. ಗೃಹ, ವಾಹನ, ಭೂಮಿ ಇತ್ಯಾದಿ ಆಸ್ತಿ ವಿಚಾರಗಳಲ್ಲಿ ಮುನ್ನಡೆ. ಶ್ರಮಕ್ಕೆ ತಕ್ಕ ಪ್ರತಿಫ‌ಲ ಸಿಕ್ಕಿದ್ದರಿಂದ ಸಂತೋಷ. ದಾಂಪತ್ಯದಲ್ಲಿ ಅನು ರಾಗ ವೃದ್ಧಿ. ಹಿರಿಯರಿಂದ ಉತ್ತಮ ಸಹಕಾರ, ಮಾರ್ಗದರ್ಶನ.

ಮಿಥುನ: ಸಣ್ಣ ಪ್ರಯಾಣ ಭಾಗ್ಯ. ಪರರಿಗೆ ಸಹಾಯ ಮಾಡುವಾಗ ಪೂರ್ವಾಪರ ತಿಳಿದು ನಿರ್ಣಯಿಸಿ. ಉದ್ಯೋಗ ವ್ಯವಹಾರಗಳಲ್ಲಿ ಸಣ್ಣ ಬದಲಾವಣೆ ಸಂಭವ. ತಾಳ್ಮೆಯಿಂದ ಕಾರ್ಯಪ್ರವೃತ್ತರಾಗುವುದರಿಂದ ಯಶಸ್ಸು ಸಂಭವ.

ಕರ್ಕ: ಆರೋಗ್ಯ ವಿಚಾರದಲ್ಲಿ ಸರಿಯಾದ ನಿಯಮ ಪಾಲಿಸುವುದರಿಂದ ಅಭಿವೃದ್ಧಿ. ದೀರ್ಘ‌ ಪ್ರಯಾಣಕ್ಕೆ ಅವಕಾಶ. ಧನಾರ್ಜನೆಗೆ ಸರಿಯಾಗಿ ಖರ್ಚಿನ ದಾರಿಗಳು ತೋರಿ ಬಂದಾವು. ಕುಟುಂಬಿಕರಿಂದ ಉತ್ತಮ ಪ್ರೋತ್ಸಾಹ.

Advertisement

ಸಿಂಹ: ಭೂಮಿ, ಆಸ್ತಿ ಇತ್ಯಾದಿ ವಿಚಾರಗಳಲ್ಲಿ ಮುನ್ನಡೆ. ಅನ್ಯರ ಮೇಲೆ ಅವಲಂಬಿತರಾಗದೆ ಕಾರ್ಯ ನಿರ್ವಹಿಸುವುದರಿಂದ ಪ್ರಗತಿ. ಸಾಂಸಾರಿಕ ಸುಖ ತೃಪ್ತಿದಾಯಕ. ವಿದ್ಯಾರ್ಥಿಗಳಿಗೆ ಹೆಚ್ಚಿನ ಶ್ರಮದಿಂದ ನಿರೀಕ್ಷಿತ ಸ್ಥಾನ ಲಾಭ.

ಕನ್ಯಾ: ಆರೋಗ್ಯದ ಬಗ್ಗೆ ಗಮನಿಸಿ. ದೀರ್ಘ‌ ಪ್ರಯಾಣ ದಿಂದ ದೇಹಾಯಾಸ. ಪಾಲುದಾರರಲ್ಲಿ ಪರಸ್ಪರ ಪ್ರೋತ್ಸಾಹದಿಂದ ನೆಮ್ಮದಿ, ಕಾರ್ಯ ಸಫ‌ಲತೆ. ಧನಾರ್ಜನೆಗೆ ಕೊರತೆಯಾಗದು. ಗುರುಹಿರಿಯರ ಆರೋಗ್ಯ ವೃದ್ಧಿ.

ತುಲಾ: ಪ್ರತಿಯೊಂದು ಕೆಲಸ ಕಾರ್ಯಗಳಲ್ಲಿ ಲಾಭ, ಗೌರವಾದಿ ವೃದ್ಧಿ. ಎಲ್ಲರೂ ನೆನಪಿಡುವಂತಹ ಕಾರ್ಯಶೈಲಿ. ಸ್ವಾರ್ಜಿತ ಧನ ಸಂಪತ್ತು ವೃದ್ಧಿ. ಅನ್ಯರಿಂದ ಸಹಾಯ ನಿರೀಕ್ಷಿಸದಿರಿ. ದೂರದ ವ್ಯವಹಾರಗಳಲ್ಲಿ ಪ್ರಗತಿ. ಆರೋಗ್ಯ ಉತ್ತಮ.

ವೃಶ್ಚಿಕ: ಅನಿರೀಕ್ಷಿತ ಧನ ಸಂಪತ್ತಿನ ವೃದ್ಧಿ. ಉತ್ತಮ ವಾಕ್‌ಚತುರತೆಯಿಂದ ಕೂಡಿದ ಕಾರ್ಯವೈಖರಿ. ಬಂಧುಮಿತ್ರರ ಸಹಾಯ ಲಭಿಸದು. ನಿಮ್ಮ ಪರಿಶ್ರಮದಲ್ಲಿ ವಿಶ್ವಾಸವಿಟ್ಟು ಕಾರ್ಯ ಸಾಧಿಸಿ. ಮಕ್ಕಳಿಂದ ಸಂತೋಷ.

ಧನು: ಕೆಲಸ ಕಾರ್ಯಗಳಲ್ಲಿ ಚಾಣಾಕ್ಷತನ, ಜವಾಬ್ದಾರಿಯಿಂದ ಯಶಸ್ಸು. ಹಣಕಾಸಿನ ವಿಚಾರದಲ್ಲಿ ದಾಕ್ಷಿಣ್ಯದಿಂದ ನಷ್ಟ. ವಿದ್ಯಾರ್ಥಿಗಳಿಗೆ ವಿಪುಲ ಅವಕಾಶ. ಪ್ರಗತಿ ಪರ ಬದಲಾವಣೆ. ದಾಂಪತ್ಯ ತೃಪ್ತಿಕರ. ಸರಕಾರಿ ಕಾರ್ಯಗಳಲ್ಲಿ ಪ್ರಗತಿ.

ಮಕರ: ಮಕ್ಕಳ ನಿಮಿತ್ತ ಹೆಚ್ಚಿದ ಜವಾಬ್ದಾರಿ. ಮನೆ ಯಲ್ಲಿ ಸಂತಸದ ವಾತಾವರಣಕ್ಕೆ ತೊಂದರೆ ಆಗದಂತೆ ಕಾರ್ಯಪ್ರವೃತ್ತರಾಗಿ. ಮಾತಿನಲ್ಲಿ ತಾಳ್ಮೆ, ಸಹಕಾರ ಅಗತ್ಯ. ಬಂಧುಮಿತ್ರರಲ್ಲಿ ನಿಷ್ಠುರ ವರ್ತನೆ ಸಲ್ಲದು. ದೀರ್ಘ‌ ಪ್ರಯಾಣ.

ಕುಂಭ: ಸಣ್ಣ ಪ್ರಯಾಣ ಸಂಭವ. ಅಧ್ಯಯನದಲ್ಲಿ ಮಗ್ನತೆ. ಆರೋಗ್ಯ ಗಮನಿಸಿ. ಸಾಂಸಾರಿಕ ಸುಖ ಮಧ್ಯಮ. ಉದ್ಯೋಗ ವ್ಯವಹಾರಗಳಲ್ಲಿ ಎಲ್ಲರ ಸಹಕಾರದಿಂದ ಪ್ರಗತಿ. ದೂರದ ಮಿತ್ರರ ಭೇಟಿ. ಗುರುಹಿರಿಯರ ಸಹಕಾರ.

ಮೀನ: ನಷ್ಟ ವಸ್ತುಗಳು ಪ್ರಯತ್ನಿಸಿದರೆ ಸಿಗುವ ಸಂಭವ. ಧನ ಸಂಪತ್ತಿನ ಅನಿರೀಕ್ಷಿತ ವೃದ್ಧಿ. ಉದ್ಯೋಗ ವ್ಯವಹಾರಗಳಲ್ಲಿ ಗೌರವ ಆದರದ ಮನ್ನಣೆ. ಸಹೋದ್ಯೋಗಿಗಳಿಂದ ಅಲ್ಪ ಸಹಾಯ. ದೇವತಾ ಸ್ಥಳ ಸಂದರ್ಶನ.

Advertisement

Udayavani is now on Telegram. Click here to join our channel and stay updated with the latest news.

Next