Advertisement

ಇಂದಿನ ದಿನ ಭವಿಷ್ಯ: ಈ ರಾಶಿಯವರಿಗಿಂದು ದಾಂಪತ್ಯದಲ್ಲಿ ತಾಳ್ಮೆ ಅಗತ್ಯ!

08:32 AM Aug 01, 2021 | Team Udayavani |

01-08-2021

Advertisement

ಮೇಷ: ಭೂಮಿ, ವಾಹನ, ಆಸ್ತಿ ವಿಚಾರದಲ್ಲಿ ಅನುಕೂಲಕರ ಪರಿಸ್ಥಿತಿ. ದಾಂಪತ್ಯ ಸುಖ ವೃದ್ಧಿ. ಮಕ್ಕಳ ವಿಚಾರದಲ್ಲಿ ಧನ ವೃದ್ಧಿ ಹಾಗೂ ವ್ಯಯ. ವ್ಯವಹಾರ ಉದ್ಯೋಗದಲ್ಲಿ ಪ್ರಯಾಣ ಬದಲಾವಣೆ.

ವೃಷಭ: ಉತ್ತಮ ಧನಾರ್ಜನೆ. ಆರೋಗ್ಯ ಗಮನಿಸಿ. ಸಂಸಾರದಲ್ಲಿ ಪರಸ್ಪರ ಪ್ರೋತ್ಸಾಹ. ಮಕ್ಕಳ ವಿಚಾರದಲ್ಲಿ ಜವಾಬ್ದಾರಿ. ದೇವತಾ ಕಾರ್ಯಗಳಲ್ಲಿ ತಲ್ಲೀನತೆ. ವ್ಯವಹಾರ, ಉದ್ಯೋಗದಲ್ಲಿ ಏಕಾಗ್ರತೆ ವೃದ್ಧಿ.

ಮಿಥುನ: ದಾಂಪತ್ಯ ವಿಚಾರದಲ್ಲಿ ಸಮಾಧಾನ ತಾಳ್ಮೆ ಅಗತ್ಯ. ಭೂಮಿ ಕೃಹ ವಾಹನಾದಿ ವಿಚಾರದಲ್ಲಿ ಹೆಚ್ಚಿನ ಜವಾಬ್ದಾರಿ. ಧಾರ್ಮಿಕ ಕಾರ್ಯಗಳಿಗೆ ಪ್ರಯಾಣ. ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ. ಅನಿರೀಕ್ಷಿತ ಸ್ಥಾನ ಸುಖ

ಕರ್ಕ: ಗೌರವಯುತ ಧನಾರ್ಜನೆ. ಸಹೋದ್ಯೋಗಿ, ಸಹೋದರಾದಿ ವರ್ಗದವರಿಂದ ಉತ್ತಮ ಸುಖ. ಮಕ್ಕಳ ಬಗ್ಗೆ ಸ್ಥಿರವಾದ ನಿರ್ಣಯ. ಭೂಮಿ ವಾಹನಾದಿ ವಿಚಾರದಲ್ಲಿ ಪ್ರಗತಿ. ಹಿರಿಯರ ಆರೋಗ್ಯ ಗಮನಿಸಿ.

Advertisement

ಸಿಂಹ: ಬಂಧುವರ್ಗದವರಿಂದಲೂ, ಸಹೋದ್ಯೋಗಿಗಳಿಂದಲೂ ಉತ್ತಮ ಸಹಕಾರ. ದಾಂಪತ್ಯ ಸುಖ ವೃದ್ಧಿ. ಭೂಮಿ ವಾಹನ ಗೃಹಾದಿ ವಿಚಾರದಲ್ಲಿ ಎಚ್ಚರಿಕೆ ಅಗತ್ಯ. ಗುರು ಹಿರಿಯರ ವಿಚಾರ ಸಂತೋಷಪ್ರದ. ಧಾರ್ಮಿಕ ವಿಚಾರದಲ್ಲಿ ಏರಿಳಿತ.

ಕನ್ಯಾ; ಕಫ‌ದಿಂದ ಕೂಡಿದ ಶಾರೀರಿಕ ಸ್ಥಿತಿ. ಉತ್ತಮ ಚತುರತೆಯಿಂದ ಕೂಡಿದ ಧನಾರ್ಜನೆ. ಅನ್ಯರ ಸಹಾಯದ ಅವಲಂಬನೆ ಸಲ್ಲದು. ವಿದ್ಯಾರ್ಥಿಗಳಿಗೆ ಉತ್ತಮ ಗೌರವಯುತ ಸ್ಥಾನ ಸುಖ. ಹಿರಿಯರಿಂದ ಸುಖ.

ತುಲಾ; ಧನಾಗಮ ವಿಚಾರದಲ್ಲಿ ಉತ್ತಮ ಅಭಿವೃದ್ಧಿ. ಸಹೋದ್ಯೋಗಿಗಳಿಂದಲೂ ಸಹೋದರ ವರ್ಗದವರಿಂದಲೂ ಉತ್ತಮ ಸಹಕಾರ. ದಾಂಪತ್ಯದಲ್ಲಿ ತಾಳ್ಮೆ ಅಗತ್ಯ. ಧಾರ್ಮಿಕ ಕಾರ್ಯಗಳಲ್ಲಿ ನೇತೃತ್ವ ಗೌರವಾದಿ ಸುಖ.

ವೃಶ್ಚಿಕ; ಗುರು, ಹಿರಿಯರ, ಸಹೋದರ, ಸಹೋ ದ್ಯೋಗಿಗಳ ಪ್ರೋತ್ಸಾಹ. ಭೂಮಿ, ಗೃಹ, ವಾಹನಾದಿ ಲಾಭ. ಸಾಂಸಾರಿಕ ಜವಾಬ್ದಾರಿ ಮಕ್ಕಳ ವಿಚಾರದಲ್ಲಿ ಸಂತೋಷ. ಶ್ರಮ ಪ್ರಯಾಣ. ದೇವತಾ ಕಾರ್ಯಗಳಲ್ಲಿ ಶ್ರದ್ಧೆ ನಿಷ್ಠೆ

ಧನು; ಸ್ವಪ್ರಯತ್ನದಿಂದ ಕೂಡಿದ ಉತ್ತಮ ಧನಾರ್ಜನೆ. ಸಹೋದ್ಯೋಗಿಗಳಿಂದ ಉತ್ತಮ ಸಹಕಾರ. ಹಿರಿಯರ ಆರೋಗ್ಯ ಗಮನಹರಿಸಿ. ಉದ್ಯೋಗ ವ್ಯವಹಾರದಲ್ಲಿ ಮುಂದಾಳತ್ವ ಅಭಿವೃದ್ಧಿ. ಗೌರವ ಸುಖ.

ಮಕರ; ಧನಾರ್ಜನೆಗೆ ಸಮನಾದ ಖರ್ಚು. ಸಹೋದರ, ಸಹೋದ್ಯೋಗಿ ವರ್ಗದವರಿಂದ ಸಾಮಾನ್ಯ ಸುಖ. ದಾಂಪತ್ಯದಲ್ಲಿ ತಾಳ್ಮೆ ಅಗತ್ಯ. ಉದ್ಯೋಗ ವ್ಯವಹಾರದಲ್ಲಿ ಪ್ರಯಾಣ ಪ್ರಗತಿ. ಹಿರಿಯರ ಆರೋಗ್ಯದಲ್ಲಿ ತೃಪ್ತಿ.

ಕುಂಭ; ಉದ್ಯೋಗ ವ್ಯವಹಾರದಲ್ಲಿ ಸ್ಥಿರತ್ವ . ದಾಂಪತ್ಯ ಸುಖ ತೃಪ್ತಿದಾಯಕ. ಧಾರ್ಮಿಕ ಕಾರ್ಯಗಳಿಗೆ ಧನವ್ಯಯ. ವಿದ್ಯಾರ್ಥಿಗಳಿಗೆ ಭಾಗ್ಯೋದಯ. ಕಫ‌ ವಾತದಿಂದ ಕೂಡಿದ ದೇಹ ಪ್ರಕೃತಿ. ಧನಾರ್ಜನೆ ಅಭಿವೃದ್ಧಿದಾಯಕ

ಮೀನ; ಮಕ್ಕಳ ವಿಚಾರದಲ್ಲಿ ಮನಃಸಂತೋಷ. ಗುರುಹಿರಿಯರಿಂದ ಸಂತಸ ವಾರ್ತೆ. ಉದ್ಯೋಗ ವ್ಯವಹಾರದಲ್ಲಿ ವಾಕ್‌ ಚತುರತೆ ಪ್ರಾಮಾಣಿಕ ಮನ್ನಣೆ. ವಿದ್ಯಾರ್ಥಿ ಗಳಿಗೆ ಶ್ರಮಕ್ಕೆ ತಕ್ಕ ಫ‌ಲ. ಗೌರವಯುತ ಧನಸಂಪತ್ತಿನ ವೃದ್ಧಿ.

Advertisement

Udayavani is now on Telegram. Click here to join our channel and stay updated with the latest news.

Next