Advertisement

Daily horoscope: ಈ ರಾಶಿಯವರಿಗೆ ಪಾಲುದಾರಿಕೆ ವ್ಯವಹಾರದಲ್ಲಿ ಮಧ್ಯಮ ಲಾಭ ಉಂಟಾಗಲಿದೆ

07:20 AM Mar 26, 2024 | Suhan S |

ಮೇಷ: ಆಪ್ತರಿಂದ ನಿರೀಕ್ಷಿತ ಸಹಾಯ ಸಕಾಲದಲ್ಲಿ ಕೈಸೇರಿ ನೆಮ್ಮದಿ. ಉದ್ಯೋಗ ಕ್ಷೇತ್ರದಲ್ಲಿ ಪರಿಪೂರ್ಣತೆಗೆ ಪೈಪೋಟಿ. ಕಟ್ಟಡ ನಿರ್ಮಾಣ ಗುತ್ತಿಗೆದಾರರಿಗೆ ಸಮಯದೊಂದಿಗೆ ಸೆಣಸಾಟ. ಕೃಷಿ ಬೆಳೆಗಳ ರಕ್ಷಣೆಯ ಚಿಂತೆ.

Advertisement

ವೃಷಭ: ಉದ್ಯೋಗ ಸ್ಥಾನದಲ್ಲಿ ಯಥಾಸ್ಥಿತಿ.ಸರಕಾರಿ ನೌಕರರಿಗೆ ಕೆಲಸದ ಒತ್ತಡ. ವಿದೇಶಗಳಲ್ಲಿ ನೌಕರಿಯಲ್ಲಿರುವವರಿಗೆ ತಾಯ್ನಾಡಿಗೆ ಬರುವ ಯೋಗ. ಮುದ್ರಣ ಕ್ಷೇತ್ರದವರಿಗೆ ಸಮಯದೊಂದಿಗೆ ಮೇಲಾಟ.

ಮಿಥುನ: ಸರಕಾರಿ  ಉದ್ಯೋಗಸ್ಥರಿಗೆ ಹೆಚ್ಚುವರಿ ಜವಾಬ್ದಾರಿಗಳು. ಪತ್ರಕರ್ತರಿಗೆ ರಾಜಕಾರಣಿಗಳ ಒತ್ತಡ. ಕೃಷಿ ಸಾಧನಗಳು, ಕೃಷ್ಯುತ್ನನ್ನ ಗಳು, ರಸಗೊಬ್ಬರಗಳು ಮೊದಲಾದ ಸಾಮಗ್ರಿಗಳು ಮೊದಲಾದವುಗಳ  ವಿತರಕರಿಗೆ ಉತ್ತಮ ಲಾಭ.

ಕಟಕ: ಪಾಲುದಾರಿಕೆ ವ್ಯವಹಾರದಲ್ಲಿ ಮಧ್ಯಮ ಲಾಭ. ತಾಂತ್ರಿಕ ವಿಭಾಗಗಳಲ್ಲಿ ದುಡಿಯುವವರಿಗೆ  ಕೆಲಸದ ಒತ್ತಡ. ಮೇಲಧಿಕಾರಿ ಗಳಿಂದ ಉತ್ತೇಜನ. ಸ್ವಂತ ವ್ಯವಹಾರಸ್ಥರಿಗೆ  ಸಮಯ ದೊಂದಿಗೆ ಸ್ಪರ್ಧೆ.

ಸಿಂಹ: ಉತ್ಪಾದನೆಗಳಿಗೆ ಒಳ್ಳೆಯ ಬೇಡಿಕೆ. ಸಮಾಜದಲ್ಲಿ ಸ್ಥಾನಮಾನ ವೃದ್ಧಿ. ಸಂಸಾರ ಸುಖ ಉತ್ತಮ. ಅವಿವಾಹಿತರಿಗೆ ವಿವಾಹ ಯೋಗ. ಹಿರಿಯರಿಗೆ, ಗೃಹಿಣಿಯರಿಗೆ, ಮಕ್ಕಳಿಗೆ ಸಂತೋಷದ ವಾತಾವರಣ.

Advertisement

ಕನ್ಯಾ: ಆಪ್ತರಿಂದ ಸಕಾಲಿಕ ಸಹಾಯ ಪ್ರಾಪ್ತಿ.  ನಿಯೋಜಿತ ಕಾರ್ಯ ಮುಗಿಸಲು ಸಹೋದ್ಯೋಗಿಯ ಸಹಾಯ. ಅಪರೂಪದ ಗೆಳೆಯರ ಆಗಮನ. ವಿದೇಶದಿಂದ ಶುಭ ವಾರ್ತೆ.ಉದ್ಯೋಗಾಕಾಂಕ್ಷಿಗಳಿಗೆ ಅವಕಾಶಗಳು ಗೋಚರ.

ತುಲಾ: ಉದ್ಯೋಗಸ್ಥರಿಂದ ಜವಾಬ್ದಾರಿಗಳ ಸಮರ್ಥ ನಿರ್ವಹಣೆ. ಸ್ವಂತ ವ್ಯವಹಾರಸ್ಥರಿಗೆ ಅನಿರೀಕ್ಷಿತ ಯಶಸ್ಸು. ಮಹಾಪುರುಷರ ದರ್ಶನ ಯೋಗ. ಮಕ್ಕಳ ಭವಿಷ್ಯದ ಚಿಂತನೆ. ಪರಿಸರ ಅಭಿವೃದ್ಧಿ ಯಲ್ಲಿ ಆಸಕ್ತಿ. ಅಪರೂಪದ ಬಂಧುಗಳ ಭೇಟಿ.

ವೃಶ್ಚಿಕ: ಮನೆಯಲ್ಲಿ ಹಿತಕರ ವಾತಾವರಣ. ಉದ್ಯೋಗ, ವ್ಯವಹಾರ ಕ್ಷೇತ್ರಗಳಲ್ಲಿ ಅನುಕೂಲ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿದ ಲಾಭ. ಪೀಠೊಪಕರಣ ನಿರ್ಮಾಪಕರಿಗೆ  ಉತ್ತಮ ಬೇಡಿಕೆ. ದೇವಾಲಯಕ್ಕೆ ಭೇಟಿ.

ಧನು:  ಅನಿರೀಕ್ಷಿತ ಧನಪ್ರಾಪ್ತಿ. ವ್ಯಾಪಾರ ವಿಸ್ತರಣೆಗೆ ಚಿಂತನೆ. ಕೈ ಕಸಬುದಾರರಿಗೆ  ಕೈತುಂಬಾ ಕೆಲಸ. ಬೌದ್ಧಿಕ ಕಾರ್ಯಗಳಲ್ಲಿ ತೊಡಗಿ ರುವವರ ಮೇಲೆ ವಿವಿಧ ಕ್ಷೇತ್ರಗಳವರಿಂದ ಒತ್ತಡ. ಮನೆಯಲ್ಲಿ ನೆಮ್ಮದಿಯ ವಾತಾವರಣ.

ಮಕರ: ಸಹೋದ್ಯೋಗಿಗಳಿಂದ  ಅಪೇಕ್ಷಿತ ಸಹಕಾರ. ಗೃಹೋಪಯೋಗಿ ಸಾಮಗ್ರಿಗಳ ಖರೀದಿ. ರೂಪದರ್ಶಿಗಳ ವ್ಯವಹಾರದಲ್ಲಿ ಹಿನ್ನಡೆ. ಲೇವಾದೇವಿ ವ್ಯವಹಾರಸ್ಥರಿಗೆ ನಷ್ಟ.  ಫ್ಯಾಶನ್‌ ಡಿಸೈನಿಂಗ್‌ ಪರಿಣತರಿಗೆ ಉದ್ಯೋಗಾವಕಾಶ.

ಕುಂಭ: ಸೇವಾ ಕಾರ್ಯಗಳ ವಿಸ್ತರಣೆಗೆ ಸಮಾನ ಮನಸ್ಕರಿಂದ  ಸಹಕಾರ. ಶಿಕ್ಷಣ ಕ್ಷೇತ್ರ ದಲ್ಲಿ ಉದ್ಯೋಗಸ್ಥರಿಗೆ ಹೊಸ ಜವಾಬ್ದಾರಿಗಳು ಸನ್ನಿಹಿತ. ಸರಕಾರಿ ನೌಕರರಿಗೆ  ವರ್ಗಾವಣೆಯ ಚಿಂತೆ. ಹಿರಿಯ ಅಧಿಕಾರಿಗಳಿಗೆ ರಾಜಕಾರಣಿಗಳ ಕಾಟ.

ಮೀನ: ನಿತ್ಯದ ವ್ಯವಹಾರಗಳು ಸುಗಮ. ಉದ್ಯೋಗಸ್ಥರಿಗೆ ನಿರಾತಂಕವಾದ ವಾತಾವರಣ. ಸರಕಾರಿ ಅಧಿಕಾರಿಗಳಿಂದ ಮತ್ತು ನೌಕರರಿಂದ ಉತ್ತಮ ಸ್ಪಂದನ. ಕೆಲವು ವರ್ಗಗಳ ವ್ಯವಹಾರಸ್ಥರಿಗೆ ಅನಿರೀಕ್ಷಿತ ಪ್ರಗತಿ. ವ್ಯವಹಾರ ನಿರ್ವಹಣೆಗೆ ಸಂಗಾತಿಯ ಸಹಕಾರ. ಮಕ್ಕಳ ಅಧ್ಯಯನಾಸಕ್ತಿ ವೃದ್ಧಿ.

Advertisement

Udayavani is now on Telegram. Click here to join our channel and stay updated with the latest news.

Next