ಈಡೇರಿಸುವಂತೆ ಒತ್ತಾಯಿಸಿ ವಿಧಾನ ಪರಿಷತ್ ಸದಸ್ಯರು ಕಳೆದ 6 ದಿನದಿಂದ ನಡೆಸುತ್ತಿರುವ ಅಹೋರಾತ್ರಿ ಧರಣಿ
ಶುಕ್ರವಾರವೂ ಮುಂದುವರಿಯಲಿದೆ. ಈ ಕುರಿತು ಮುಖ್ಯಮಂತ್ರಿಗಳು ವಿಧಾನಪರಿಷತ್ ಸದಸ್ಯರ ಪೂರ್ವಭಾವಿ ಸಮಾಲೋಚನೆಯನ್ನೂ ನಡೆಸಿದ್ದಾರೆ.
Advertisement
ಶುಕ್ರವಾರ ಸಂಜೆ 4 ಗಂಟೆ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಚರ್ಚೆಗೆ ಆಹ್ವಾನಿಸಿದ್ದು, ಮಾತುಕತೆವಿಫಲವಾದರೆ ರಾಜ್ಯಾದ್ಯಂತ ಮುಷ್ಕರ, ಎರಡು ಲಕ್ಷ ಶಿಕ್ಷಕರು, ಉಪನ್ಯಾಸಕರು, ಬೋಧಕೇತರ ಸಿಬ್ಬಂದಿಯಿಂದ ವಿಧಾನಸೌಧ ಮುತ್ತಿಗೆ, ಶಾಲಾ-ಕಾಲೇಜು ಬಂದ್ ಸೇರಿ ವಿವಿಧ ಹಂತದ ಪ್ರತಿಭಟನೆ ಸ್ವರೂಪ ಪಡೆಯುವ ಸಾಧ್ಯತೆಯಿದೆ. ಮುಖ್ಯಮಂತ್ರಿಗಳು ಚರ್ಚೆಗೆ ಆಹ್ವಾನಿಸಿರುವ ಹಿನ್ನೆಲೆಯಲ್ಲಿ ಗುರುವಾರ ಬಸವರಾಜ ಹೊರಟ್ಟಿ, ಪುಟ್ಟಣ್ಣ ಅವರ ನೇತೃತ್ವದಲ್ಲಿ 13 ವಿಧಾನಪರಿಷತ್ ಸದಸ್ಯರು ಪೂರ್ವಭಾವಿ ಸಮಾಲೋಚನೆ ನಡೆಸಿದರು.