Advertisement

ಇಂದು ವೈಶಾಲಿ, ಮೇಘನಾ ರಂಗ ಪ್ರವೇಶ

12:14 PM Jan 19, 2017 | Team Udayavani |

ಬೆಂಗಳೂರು: ಭರತನಾಟ್ಯ ಕ್ಷೇತ್ರದಲ್ಲಿ ತೀರಾ ಅಪರೂಪ ಎಂಬಂತೆ ತಾಯಿ ಹಾಗೂ ಮಗಳು ಇಬ್ಬರೂ ಒಂದೇ ವೇದಿಕೆಯಲ್ಲಿ, ಒಂದೇ ಬಾರಿಗೆ ಭರತನಾಟ್ಯ ರಂಗಪ್ರವೇಶ ಮಾಡಲಿರುವ ಅಪರೂಪದ ಕಾರ್ಯಕ್ರಮ ಶುಕ್ರವಾರ ನಗರದ ಚೌಡಯ್ಯ ಸ್ಮಾರಕ ಭವನದಲ್ಲಿ ನಡೆಯಲಿದೆ.

Advertisement

ಜ. 20 ರಂದು ವೈಶಾಲಿ (ವಿದ್ಯಾ) ಹಾಗೂ ಅವರ ಮಗಳು ಮೇಘನಾ ಇಬ್ಬರೂ ಮಲ್ಲೇಶ್ವರ ಚೌಡಯ್ಯ ಸ್ಮಾರಕ ಭವನದಲ್ಲಿ ಸಂಜೆ 6 ಗಂಟೆಗೆ ಹೇಮಾ ಕಲ್ಚರಲ್‌ ಅಕಾಡೆಮಿ ವತಿಯಿಂದ ಏರ್ಪಡಿಸಿರುವ “ಮೇಘ ವಿದ್ಯಾ ಸಮರ್ಪಣಂ’ ಶೀರ್ಷಿಕೆಯ ಕಾರ್ಯಕ್ರಮದಲ್ಲಿ ರಂಗ ಪ್ರವೇಶ ಮಾಡಲಿದ್ದಾರೆ.

35 ವರ್ಷದ ವೈಶಾಲಿ ಅವರು ಭರತನಾಟ್ಯ ಅಭ್ಯಾಸ ಮಾಡಿ ನಡುವೆ ಕೆಲ ಕಾಲ ಬಿಡುವು ನೀಡಿದ್ದರು. ಬಳಿಕ ತಮ್ಮ ಮಗಳಾದ ಮೇಘನಾಗೆ 5ನೇ ವಯಸ್ಸಿನಿಂದಲೂ ಭರತನಾಟ್ಯ ತರಬೇತಿ ಕೊಡಿಸುತ್ತಿದ್ದರು. ಸತತ 8 ವರ್ಷಗಳ ಕಾಲ ಹೇಮಾ ಪ್ರಕಾಶ್‌ ಅವರ ಬಳಿ ಭರತನಾಟ್ಯ ಅಭ್ಯಾಸದ ಬಳಿಕ ಇದೀಗ ರಂಗ ಪ್ರವೇಶ ಮಾಡುತ್ತಿದ್ದಾರೆ.

ಇದೇ ವೇಳೆ ಹಲವು ವರ್ಷಗಳ ಕಾಲ ಬಿಡುವು ನೀಡಿದ್ದ ವೈಶಾಲಿ ಅವರು ಇತ್ತೀಚೆಗೆ ಅಭ್ಯಾಸ ಮುಂದುವರೆಸಿ ಮಗಳ ಜತೆಗೆ ರಂಗ ಪ್ರವೇಶಕ್ಕೆ ಸಿದ್ಧಗೊಂಡಿದ್ದಾರೆ. ಅಪರೂಪದ ಕಾರ್ಯಕ್ರಮದಲ್ಲಿ ವಿಧಾನಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ, ಶಾಸಕ ವೈ.ಎ. ನಾರಾಯಣಸ್ವಾಮಿ, ರೇವಾ ವಿಶ್ವ ವಿದ್ಯಾಲಯದ ವಿಸಿ ಪಿ. ಶ್ಯಾಮರಾಜು, ಕಲಾವಿದರಾದ ಡಾ. ಶ್ರೀಧರ್‌, ಅನುರಾಧಾ ಶ್ರೀಧರ್‌ ಭಾಗವಹಿಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next