Advertisement

ಕರ್ನಾಟಕ-ಅಸ್ಸಾಂ ಮುಖಾಮುಖೀ

12:30 AM Feb 21, 2019 | Team Udayavani |

ಕಟಕ್‌: ಸಯ್ಯದ್‌ ಮುಷ್ತಾಕ್‌ ಅಲಿ ಟಿ20 ಕ್ರಿಕೆಟ್‌ ಕೂಟಕ್ಕೆ ಗುರುವಾರ ಚಾಲನೆ ಸಿಗಲಿದೆ. ಕಟಕ್‌ನಲ್ಲಿ ನಡೆಯಲಿರುವ ಲೀಗ್‌ ಹಂತದ ಮೊದಲ ಪಂದ್ಯದಲ್ಲಿ ಮನೀಷ್‌ ಪಾಂಡೆ ನೇತೃತ್ವದ ಕರ್ನಾಟಕ ತಂಡ ಅಸ್ಸಾಂ ತಂಡವನ್ನು ಎದುರಿಸಲಿದೆ.

Advertisement

ಕರ್ನಾಟಕ ತಂಡ “ಡಿ’ ಗುಂಪಿನಲ್ಲಿದೆ. ಬಂಗಾಲ, ಛತ್ತೀಸ್‌ಗಢ, ಅರುಣಾಚಲ ಪ್ರದೇಶ, ಹರ್ಯಾಣ, ಮಿಜೋರಂ ಮತ್ತು ಒಡಿಶಾ ಈ ಗುಂಪಿನ ಉಳಿದ ತಂಡಗಳು.ಈವರೆಗಿನ 10 ಆವೃತ್ತಿಗಳ ಸಯ್ಯದ್‌ ಮುಷ್ತಾಕ್‌ ಅಲಿ ಟಿ20 ಕೂಟಗಳಲ್ಲಿ ಕರ್ನಾಟಕ ಒಮ್ಮೆಯೂ ಚಾಂಪಿಯನ್‌ ಪಟ್ಟ ಅಲಂಕರಿಸಿಲ್ಲ. ಕನಿಷ್ಠ ಫೈನಲ್‌ ತನಕವೂ ಬಂದಿಲ್ಲ. ಹೀಗಾಗಿ ಈ ಸಲವಾದರೂ ಫೈನಲ್‌ ಪ್ರವೇಶಿಸಿ ಕಪ್‌ ಗೆದ್ದೀತೇ ಎನ್ನುವುದು ಅಭಿಮಾನಿಗಳ ನಿರೀಕ್ಷೆ.

ರಾಜ್ಯ ತಂಡ ಬಲಿಷ್ಠ
ಕರ್ನಾಟಕ ತಂಡ ಲೀಗ್‌ನಲ್ಲಿ ಭರ್ಜರಿ ಬ್ಯಾಟಿಂಗ್‌ ಪ್ರದರ್ಶಿಸುವ ವಿಶ್ವಾಸದಲ್ಲಿದೆ. ಅಷ್ಟೇನೂ ಬಲಿಷ್ಠವಲ್ಲದ ಅಸ್ಸಾಂ ತಂಡವನ್ನು ಚೆಂಡಾಡಲು ರಾಜ್ಯ ಬ್ಯಾಟ್ಸ್‌ಮನ್‌ಗಳು ಸಿದ್ಧವಾಗಿದ್ದಾರೆ. ಮನೀಷ್‌ ಪಾಂಡೆ, ಕರುಣ್‌ ನಾಯರ್‌, ಮಾಯಾಂಕ್‌ ಅಗರ್ವಾಲ್‌ ರಾಷ್ಟ್ರೀಯ ತಂಡದಲ್ಲೂ ಬ್ಯಾಟ್‌ ಬೀಸಿದ ಅನುಭವ ಹೊಂದಿದ್ದಾರೆ. ಐಪಿಎಲ್‌ನಲ್ಲೂ ಈ ತ್ರಿಮೂರ್ತಿಗಳು ಸಾಕಷ್ಟು ಪಳಗಿದ್ದಾರೆ. ಇವರನ್ನು ನಿಯಂತ್ರಿಸುವುದು ಅಸ್ಸಾಂ ಬೌಲರ್‌ಗಳಿಗೆ ದೊಡ್ಡ ಸವಾಲಾಗಬಹುದು. ಬೌಲಿಂಗ್‌ನಲ್ಲಿ ಅನುಭವಿ ವಿನಯ್‌ ಕುಮಾರ್‌, ಅಭಿಮನ್ಯು ಮಿಥುನ್‌ ಸೇವೆ ರಾಜ್ಯ ತಂಡಕ್ಕೆ ಸಾಕಷ್ಟು ನೆರವಾಗಲಿದೆ.

ರಾಜ್ಯ ತಂಡದ ಸವಾಲನ್ನು ಎದುರಿಸುವಲ್ಲಿ ಅಸ್ಸಾಂಗೆ ಅನುಭವದ ಕಾಡುವ ಸಾಧ್ಯತೆ ಇದೆ. ಆದರೆ ಟಿ20 ಪಂದ್ಯಾವದ್ದರಿಂದ ಕರ್ನಾಟಕ ಎಚ್ಚರಿಕೆಯ ನಡೆ ಇಡಬೇಕಾದುದು ಅನಿವಾರ್ಯ.

ತಂಡಗಳು
ಕರ್ನಾಟಕ:
ಮನೀಷ್‌ ಪಾಂಡೆ (ನಾಯಕ), ಕರುಣ್‌ ನಾಯರ್‌ (ಉಪನಾಯಕ), ಮಾಯಾಂಕ್‌ ಅಗರ್ವಾಲ್‌, ರೋಹನ್‌ ಕದಮ್‌, ಬಿ.ಆರ್‌. ಶರತ್‌, ಜೆ. ಸುಚಿತ್‌, ಶ್ರೇಯಸ್‌ ಗೋಪಾಲ್‌, ಆರ್‌. ವಿನಯ್‌ ಕುಮಾರ್‌, ಪ್ರಸಿದ್ಧ್ ಎಂ. ಕೃಷ್ಣ, ಅಭಿಮನ್ಯು ಮಿಥುನ್‌, ಕೆ.ಸಿ. ಕಾರಿಯಪ್ಪ, ವಿ. ಕೌಶಿಕ್‌.

Advertisement

ಅಸ್ಸಾಂ: ಅಮಿತ್‌ ಸಿನ್ಹ (ನಾಯಕ), ಅಬು ನೆಚಿಮ್‌, ರಜಾಕುದ್ದೀನ್‌ ಅಹ್ಮದ್‌, ಅರೂಪ್‌ ದಾಸ್‌, ಪ್ರೀತಮ್‌ ದಾಸ್‌, ಪಲ್ಲವ ಕುಮಾರ್‌ ದಾಸ್‌, ರಿಷವ್‌ ದಾಸ್‌, ದೀಪಕ್‌ ಗೊಹೈನ್‌, ಜಿತುಮೊನಿ ಕಲಿಟ, ಮುಖಾ¤ರ್‌ ಹೊಸೈನ್‌, ರಿಯಾನ್‌ ಪರಾಗ್‌, ಸ್ವರೂಪಮ್‌ ಪುರಕಾಯಸ್ಥ, ಶಿವಶಂಕರ್‌ ರಾಯ್‌, ಹೃಷಿಕೇಶ್‌ ತಮುಲಿ, ವಾಸಿಕರ್‌ ರೆಹಮಾನ್‌.

Advertisement

Udayavani is now on Telegram. Click here to join our channel and stay updated with the latest news.

Next