ಉಡುಪಿ: ಕ್ರೀಡಾ ಭಾರತಿ ಉಡುಪಿಜಿಲ್ಲೆ ಆಶ್ರಯದಲ್ಲಿ ಅಜ್ಜರಕಾಡು ಮಹಾತ್ಮಾ ಗಾಂಧಿ ಕ್ರೀಡಾಂಗಣದಲ್ಲಿ ಜ. 2ರಂದು ನಡೆಯಲಿರುವ “ಜಿಲ್ಲಾ ಕ್ರೀಡಾ ಸಮ್ಮೇಳನ’ದಲ್ಲಿ ಸಂಜೆ 5ಕ್ಕೆ ಜರಗಲಿರುವ ಸಮಾರೋಪದಲ್ಲಿ ವಿಶೇಷ ಅಭ್ಯಾಗತರಾಗಿ ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ ಪದ್ಮಶ್ರೀ ಸಯ್ಯದ್ ಕಿರ್ಮಾನಿ
ಭಾಗವಹಿಸಲಿದ್ದಾರೆ.
Advertisement
ಇದೇ ವೇಳೆ ಸಂಜೆ 5ರಿಂದ 2 ಗಂಟೆ ಕಾಲ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ಜಿಲ್ಲಾ ಕ್ರೀಡಾ ಸಮ್ಮೇಳನದ ಕಾರ್ಯಾಧ್ಯಕ್ಷ ಮಹೇಶ್ ಠಾಕೂರ್ ತಿಳಿಸಿದ್ದಾರೆ.