Advertisement

ಇಂದು ಯಡಿಯೂರಪ್ಪನವರ ಹುಟ್ಟುಹಬ್ಬ

11:11 PM Feb 26, 2020 | Lakshmi GovindaRaj |

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ 77ನೇ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಗುರುವಾರ ನಗರದ ಅರಮನೆ ಮೈದಾನದಲ್ಲಿ ಅಭಿನಂದನಾ ಸಮಾರಂಭ ಆಯೋಜನೆಯಾಗಿದೆ. ಬಿ.ಎಸ್‌.ಯಡಿಯೂರಪ್ಪ ಅಭಿನಂ ದನಾ ಸಮಿತಿಯು ಗುರುವಾರ ಸಂಜೆ 5 ಗಂಟೆಗೆ ಅರಮನೆ ಮೈದಾನದ ವೈಟ್‌ ಪೆಟಲ್ಸ್‌ (ಪ್ರವೇಶ ದ್ವಾರ -3) ಆವರಣದಲ್ಲಿ ಬೃಹತ್‌ ಅಭಿನಂದನಾ ಸಮಾರಂಭ ಹಮ್ಮಿಕೊಂಡಿದೆ.

Advertisement

ರಕ್ಷಣಾ ಸಚಿವ ರಾಜನಾಥ ಸಿಂಗ್‌ ಅವರು ಸಮಾರಂಭ ಉದ್ಘಾಟಿಸಲಿದ್ದಾರೆ. ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಅವರು ಅಭಿನಂದನಾ ಗ್ರಂಥ ಬಿಡುಗಡೆ ಮಾಡಲಿದ್ದಾರೆ. ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ವಿಶೇಷ ಕಾಫಿ ಟೇಬಲ್‌ ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಸಾಕ್ಷ್ಯಚಿತ್ರ ಬಿಡುಗಡೆ ಮಾಡಲಿದ್ದಾರೆ.

ಕೇಂದ್ರ ಸಚಿವರಾದ ಡಿ.ವಿ.ಸದಾನಂದ ಗೌಡ, ಪ್ರಹ್ಲಾದ್‌ ಜೋಶಿ, ಸುರೇಶ್‌ ಅಂಗಡಿ, ರಾಜ್ಯ ಬಿಜೆಪಿ ಅಧ್ಯಕ್ಷರಾದ ಸಂಸದ ನಳಿನ್‌ ಕುಮಾರ್‌ ಕಟೀಲ್‌ ಉಪಸ್ಥಿತರಿರಲಿದ್ದಾರೆ. ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಕವಿ ಡಾ.ಸಿದ್ದಲಿಂಗಯ್ಯ ಅವರು ಅಭಿನಂದನಾ ನುಡಿಗಳನ್ನಾಡಲಿದ್ದಾರೆ.

ಎಲ್ಲ ಶಾಸಕರಿಗೂ ಸಂವಿಧಾನ ಕೃತಿ ವಿತರಣೆ
ಕೊಪ್ಪಳ: ಎಲ್ಲ ಶಾಸಕರಿಗೂ ಸಂವಿಧಾನದ ಪುಸ್ತಕ ಕೊಡಲಾಗುತ್ತದೆ. ಅದನ್ನು ಓದಿ ಅಧಿವೇಶನದಲ್ಲಿ ಮಾತನಾಡಲು ಅವಕಾಶ ಕಲ್ಪಿಸಲಾಗುತ್ತದೆ ಎಂದು ಸಿಎಂ ಬಿ.ಎಸ್‌.ಯಡಿಯೂರಪ್ಪ ಹೇಳಿದರು. ಕುಕನೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಮಾ.5ರಂದು ಬಜೆಟ್‌ ಮಂಡನೆಗೆ ಎಲ್ಲ ಸಿದ್ಧತೆ ನಡೆದಿದೆ.

ಈ ಬಾರಿಯ ಬಜೆಟ್‌ ಅ ಧಿವೇಶನ ಐತಿಹಾಸಿಕವಾಗಲಿದೆ. ಬಜೆಟ್‌ ಅ ಧಿವೇಶನದಲ್ಲಿ ಈ ಬಾರಿ ಎಲ್ಲ ಶಾಸಕರು ಸಂವಿಧಾನದ ಬಗ್ಗೆ ಮಾತನಾಡಲಿದ್ದಾರೆ. ಸಂವಿಧಾನವನ್ನು ಕನ್ನಡಕ್ಕೆ ಅನುವಾದಿಸಿ, ಮುದ್ರಿಸಿ ಎಲ್ಲರಿಗೂ ಪುಸ್ತಕ ನೀಡುತ್ತೇವೆ. ಎಲ್ಲ ಶಾಸಕರು ಸಂವಿಧಾನದ ಬಗ್ಗೆ ಓದಿಕೊಂಡು ಬಂದು ಅ ಧಿವೇಶನದಲ್ಲಿ ಮಾತನಾಡಬೇಕು. ಇದೊಂದು ಐತಿಹಾಸಿಕ ನಿರ್ಧಾರ ಎಂದರು.

Advertisement

ದುಂದುವೆಚ್ಚ ಬೇಡ: ಯಡಿಯೂರಪ್ಪ
ಬೆಂಗಳೂರು: ಹುಟ್ಟುಹಬ್ಬದ ಸಂದರ್ಭದಲ್ಲಿ ಭೇಟಿಯಾಗುವ ಅಭಿಮಾನಿಗಳು ಹಾರ, ತುರಾಯಿ, ಉಡುಗೊರೆ ನೀಡುವುದು, ಪಟಾಕಿ ಸಿಡಿಸುವುದು ಸೇರಿದಂತೆ ಇತರ ದುಂದುವೆಚ್ಚ ಮಾಡಬಾರದು ಎಂದು ಸಿಎಂ ಬಿ.ಎಸ್‌. ಯಡಿಯೂರಪ್ಪ ಮನವಿ ಮಾಡಿದ್ದಾರೆ. ಅಭಿಮಾನಿಗಳ ಶುಭ ಹಾರೈಕೆಗಿಂತ ದೊಡ್ಡ ಉಡುಗೊರೆ ಯಾವುದೂ ಇಲ್ಲ. ಹಾಗಾಗಿ, ಹುಟ್ಟುಹಬ್ಬದ ಆಚರಣೆಗಾಗಿ ದುಂದು ವೆಚ್ಚ ಮಾಡಬಾರದು ಎಂದು ಅವರು ಕೋರಿದ್ದಾರೆ.

ಬಿಎಸ್‌ವೈ ಅವರಿಗೆ ವಯಸ್ಸಾಗಿದೆ. ಆಡಳಿತ ನಡೆಸುವುದು ಕಷ್ಟವಾಗು ತ್ತಿದೆ ಎನ್ನುವ ದೂರುಗಳನ್ನು ಹೈಕಮಾಂಡ್‌ಗೆ ತಲುಪಿಸಿದವರಿಗೆ ಒಳ್ಳೆಯದಾಗಲಿ.
-ಯಡಿಯೂರಪ್ಪ, ಸಿಎಂ

Advertisement

Udayavani is now on Telegram. Click here to join our channel and stay updated with the latest news.

Next