Advertisement
ಹಲವು ವರ್ಷಗಳಿಂದ ಪ್ರತಿ ವರ್ಷ ಸರಾಸರಿ 10 ಲಕ್ಷ ಮಕ್ಕಳ ಜನನವಾಗುತ್ತಿದೆ. ವರ್ಷದಿಂದ ವರ್ಷಕ್ಕೆ ಸುಮಾರು 10,000 ಮಕ್ಕಳ ಜನನ ಸಂಖ್ಯೆ ಕುಸಿತವಾಗುತ್ತಿದೆ. ಇತ್ತೀಚಿನ ದಿನದಲ್ಲಿ ಫಲವತ್ತತೆ (ಫರ್ಟಿಲಿಟಿ) ದರ ಕುಸಿತಗೊಳ್ಳುತ್ತಿರುವುದು ಕಾರಣ ಎನ್ನಲಾಗುತ್ತಿದೆ. 20-32 ವರ್ಷದೊಳಗಿನ ಪುರುಷರು ಹಾಗೂ ಮಹಿಳೆಯರು ಸಂತಾ ನೋತ್ಪತ್ತಿಯ ಅವಧಿಯಲ್ಲಿ ಹೊಂದುವ ಶಿಶುಗಳ ಸಂಖ್ಯೆಯೂ ಕಡಿಮೆಯಾಗಿದೆ.
ಜನನ ಸಂಖ್ಯೆ ಇಳಿಕೆ ನಡುವೆ ರಾಜ್ಯದಲ್ಲಿ ಗ್ರಾಮೀಣ ಭಾಗಗಳಿಗೆ ಹೋಲಿಸಿದರೆ, ಆಧುನಿಕ ತಂತ್ರಜ್ಞಾನ ವ್ಯವಸ್ಥೆಯನ್ನು ಅಳವಡಿಸಿಕೊಂಡಿರುವ ನಗರ ಭಾಗದಲ್ಲಿ ಶಿಶುಗಳ ಮರಣ ಪ್ರಮಾಣ ಹೆಚ್ಚಾಗುತ್ತಿದೆ. ಸಮೀಕ್ಷೆ ಅನ್ವಯ ರಾಜ್ಯದಲ್ಲಿ ಗ್ರಾಮೀಣ ಭಾಗದಲ್ಲಿ ಜನನವಾದ 1000 ನವಜಾತ ಶಿಶುಗಳಲ್ಲಿ ಗರಿಷ್ಠ 26 ಶಿಶುಗಳು ಹಾಗೂ ನಗರ ಭಾಗದಲ್ಲಿ 27 ಶಿಶುಗಳ ಸಾವನ್ನಪ್ಪುತ್ತಿವೆ.
Related Articles
ರಾಷ್ಟ್ರೀಯ ಕೌಟುಂಬಿಕ ಆರೋಗ್ಯ ಸಮೀಕ್ಷೆಯಲ್ಲಿ ರಾಜ್ಯದಲ್ಲಿ ನಡೆಸಲಾದ ಸಮೀಕ್ಷೆಯಲ್ಲಿ ಬಹುತೇಕ ದಂಪತಿಗಳು ಗಂಡು ಮಗು ಬೇಕು ಎನ್ನುವ ಅಭಿಲಾಷೆಯನ್ನು ಹೊಂದಿದ್ದಾರೆ. ಶೇ. 79.3 ಪುರುಷರು ಹಾಗೂ ಶೇ. 73.6ರಷ್ಟು ಮಹಿಳೆಯರು ಗಂಡು ಮಗು ಪಡೆಯಬೇಕು ಎನ್ನುವ ಹಂಬಲವನ್ನು ಹೊಂದಿರುವುದು ವರದಿಯಾಗಿದೆ.
Advertisement
ಜನನ ಪ್ರಮಾಣ ಇಳಿಕೆಗೆ ಕಾರಣ ರಾಜ್ಯದಲ್ಲಿ ಜನನ ಪ್ರಮಾಣ ಇಳಿಕೆಗೆ ಆರೋಗ್ಯ ಇಲಾಖೆ ಜನಸಂಖ್ಯಾ ನಿಯಂತ್ರಣ ಕಾರ್ಯಕ್ರಮಗಳು ಸಹ ಕಾರಣವಾಗಿದೆ. ಇದರ ಜತೆಗೆ ಪ್ರಸ್ತುತ ಹೆಣ್ಣು ಮಕ್ಕಳು ಮದುವೆ ಅವಧಿಯನ್ನು 25ರಿಂದ 32 ವರ್ಷಕ್ಕೆ ಮುಂದೂಡುತ್ತಿರುವುದರಿಂದ ಮಕ್ಕಳಾಗುವ ಪ್ರಮಾಣ ಕುಸಿಯುತ್ತಿರುವುದು, ಒಂದು ಮಗುವಿನ ಸೂತ್ರ ಅಳವಡಿಕೆ ಹಾಗೂ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಮಹತ್ವ ನೀಡುತ್ತಿರುವುದು ಮಕ್ಕಳ ಜನನ ಇಳಿಕೆಗೆ ಕಾರಣ ಎನ್ನಲಾಗುತ್ತಿದೆ. – ತೃಪ್ತಿ ಕುಮ್ರಗೋಡು