Advertisement
1,121 ವಿಶ್ವದ ತಾಣಗಳುಈವರೆಗೆ ವಿಶ್ವದ 167 ರಾಷ್ಟ್ರಗಳ ಒಟ್ಟು 1,121 ತಾಣಗಳಿಗೆ ವಿಶ್ವ ಪರಂಪರೆಯ ತಾಣದ ಮಾನ್ಯತೆ ನೀಡಲಾಗಿದೆ. ಇವುಗಳ ಪೈಕಿ 869 ಸಾಂಸ್ಕೃತಿಕ ನೆಲೆಗಳಾಗಿದ್ದರೆ 213 ಪ್ರಾಕೃತಿಕ ತಾಣಗಳು ಮತ್ತು 39 ತಾಣಗಳು ಈ ಎರಡರ ಮಹತ್ವವನ್ನೂ ಹೊಂದಿವೆ.
“ಸಂಕೀರ್ಣ ಇತಿಹಾಸ, ವೈವಿಧ್ಯಮಯ ಭವಿಷ್ಯ’-ಎಲ್ಲ ಧರ್ಮದ ಜನರು ಭಿನ್ನಾಭಿಪ್ರಾಯಗಳೆಲ್ಲವನ್ನೂ ಬದಿಗಿರಿಸಿ ಒಗ್ಗೂಡಿ ಏಕತೆಯ ಸಂದೇಶವನ್ನು ಸಾರೋಣ ಎಂಬ ಧ್ಯೇಯದೊಂದಿಗೆ ಈ ಬಾರಿಯ ವಿಶ್ವ ಪರಂಪರೆ ದಿನವನ್ನು ಆಚರಿಸಲಾಗುತ್ತಿದೆ. ಸೇರ್ಪಡೆ ಪ್ರಕ್ರಿಯೆ
ವಿಶ್ವ ಪರಂಪರೆಯ ತಾಣಗಳ ಪಟ್ಟಿಗೆ ಸೇರ್ಪಡೆಯಾದ ಸ್ಥಳಗಳು ಆಯಾಯ ದೇಶದ ಭಾಗವಾಗಿ ಉಳಿಯುತ್ತದೆ ಮತ್ತು ಅಂತಾರಾಷ್ಟ್ರೀಯ ಸಮುದಾಯದ ಹಿತದೃಷ್ಟಿಯಿಂದ ಅದರ ರಕ್ಷಣೆಗೆ ಯುನೆಸ್ಕೋ ನೆರವಾಗುತ್ತದೆ. ವಿಶ್ವ ಪಾರಂಪರಿಕ ತಾಣಗಳೆಂದು ಘೋಷಿಸಲ್ಪಡುವ ತಾಣಗಳು ಅರಣ್ಯ, ಪರ್ವತ, ಸರೋವರ, ಮರುಭೂಮಿ, ಸ್ಮಾರಕ, ಕಟ್ಟಡ, ಸಂಕೀರ್ಣ ಅಥವಾ ನಗರವೂ ಆಗಿರಬಹುದು. ಮೊದಲಿಗೆ ವಿಶ್ವ ಪಾರಂಪರಿಕ ಸಮಿತಿಗೆ ಪಟ್ಟಿಗೆ ಸೇರಿಸಬೇಕೆಂದಿರುವ ಸ್ಥಳದ ನಾಮ ನಿರ್ದೇಶನವನ್ನು ಮಾಡಬೇಕಾಗುತ್ತದೆ. ಇದನ್ನು ಆಯಾಯ ದೇಶಗಳು ಮಾಡುತ್ತವೆ. 21 ಸದಸ್ಯ ರಾಷ್ಟ್ರಗಳನ್ನೊಳಗೊಂಡ ಯುನೆಸ್ಕೋದ ವಿಶ್ವ ಪರಂಪರೆಯ ತಾಣ ಸಮಿತಿಯು ಈ ತಾಣಗಳ ಅರ್ಹತೆಯನ್ನು ಪರಿಶೀಲಿಸಿ ಸೂಕ್ತವಾದವುಗಳನ್ನು ವಿಶ್ವ ಪರಂಪರೆಯ ತಾಣಗಳ ಪಟ್ಟಿಗೆ ಸೇರ್ಪಡೆಗೊಳಿಸುತ್ತದೆ. ಈ ಸಮಿತಿಯ ಸದಸ್ಯತ್ವವು ನಿಗದಿತ ಅವಧಿಯದಾಗಿದ್ದು ಸದಸ್ಯರಾಷ್ಟ್ರಗಳು ಬದಲಾಗುತ್ತಿರುತ್ತವೆ.
Related Articles
ವಿಶ್ವ ಪರಂಪರೆಯ ತಾಣಗಳನ್ನು ನೈಸರ್ಗಿಕ ಅಥವಾ ಮಾನವ ನಿರ್ಮಿತ ಪ್ರದೇಶಗಳು ಅಥವಾ ಅಂತಾರಾಷ್ಟ್ರೀಯ ಪ್ರಾಮುಖ್ಯದ ಮತ್ತು ವಿಶೇಷ ರಕ್ಷಣೆಯ ಅಗತ್ಯವಿರುವ ಸಾಂಸ್ಕೃತಿಕ, ನೈಸರ್ಗಿಕ ಮತ್ತು ಐತಿಹಾಸಿಕ ಸ್ಥಳ ಅಥವಾ ಕಟ್ಟಡಗಳೆಂದು ವರ್ಗೀಕರಿಸಲಾಗಿದೆ.
Advertisement
ಈ ತಾಣಗಳನ್ನು ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಮಂಡಳಿ (ಯುನೆಸ್ಕೋ) ಅಧಿಕೃತವಾಗಿ ಗುರುತಿಸಿ ವಿಶ್ವ ಪಾರಂಪರಿಕ ತಾಣಗಳೆಂದು ಘೋಷಿಸುತ್ತದೆ. ಈ ಐತಿಹಾಸಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ರಕ್ಷಿಸಿ ಅದನ್ನು ಮುಂದಿನ ತಲೆಮಾರಿಗೆ ಪರಿಚಯಿಸುವ ಉದ್ದೇಶದೊಂದಿಗೆ ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳನ್ನು ಗುರುತಿಸುವ ಪ್ರಕ್ರಿಯೆಯನ್ನು ಆರಂಭಿಸಿತು.
ಯುನೆಸ್ಕೋ ನೆರವುಪ್ರತಿ ವರ್ಷ ಪಟ್ಟಿಯಲ್ಲಿರುವ ತಾಣಗಳಿಗೆ ಅಂದಾಜು 20 ಕೋ. ರೂ. ನಿಧಿಯನ್ನು ಯುನೆಸ್ಕೋ ವ್ಯಯಿಸುತ್ತದೆ. ಈ ನಿಧಿ ಬಿಡುಗಡೆಯಾಗಬೇಕಾದರೆ ಸ್ಥಳೀಯ ಸರಕಾರ, ಖಾಸಗಿ ದಾನಿಗಳು ಆರ್ಥಿಕ ನೆರವು ನೀಡುವುದು ಕಡ್ಡಾಯವಾಗಿದೆ. ಯುನೆಸ್ಕೋ ಮಾರ್ಗಸೂಚಿಯಂತೆಯೇ ಈ ತಾಣಗಳಲ್ಲಿ ಎಲ್ಲ ಅಭಿವೃದ್ಧಿ ಅಥವಾ ಸಂರಕ್ಷಣ ಕಾಮಗಾರಿಗಳು ನಡೆಯಬೇಕು. 6ನೇ ಸ್ಥಾನದಲ್ಲಿ ಭಾರತ
ಪ್ರಸ್ತುತ ಭಾರತವು 38 ವಿಶ್ವ ಪಾರಂಪರಿಕ ತಾಣಗಳನ್ನು ಹೊಂದಿದೆ. ಈ ಮೂಲಕ ಭಾರತ ವಿಶ್ವದಲ್ಲಿಯೇ ಆರನೇ ಸ್ಥಾನದಲ್ಲಿದೆ. 38 ತಾಣಗಳ ಪೈಕಿ 30 ಸಾಂಸ್ಕೃತಿಕ, 7 ಪ್ರಾಕೃತಿಕ ಮತ್ತು ಒಂದು ಇವೆರಡರ ಮಹತ್ವವನ್ನೂ ಹೊಂದಿರುವ ತಾಣಗಳಾಗಿವೆ. “ವಿಶ್ವ ಪಾರಂಪರಿಕ ತಾಣ’ಗಳ ಪಟ್ಟಿಗೆ ಸೇರ್ಪಡೆಗೊಳಿಸಲು ಭಾರತದಿಂದ ಶಾಂತಿನಿಕೇತನ ಮತ್ತು ಹೊಯ್ಸಳ ದೇವಾಲಯ ಸಮೂಹಗಳನ್ನು ಸೇರಿಸಲು ನಾಮನಿರ್ದೇಶನಕ್ಕೆ ಸಂಬಂಧಿಸಿದಂತೆ ಪೂರಕ ದಾಖಲೆಗಳನ್ನು ಯುನೆಸ್ಕೋಗೆ ಕಳುಹಿಸಲಾಗಿದೆ. ಇದಲ್ಲದೆ ದೇಶದ 42 ತಾಣಗಳನ್ನು ತಾತ್ಕಾಲಿಕ ಪಟ್ಟಿಯಲ್ಲಿ ಸೇರ್ಪಡೆಗೊಳಿಸಲಾಗಿದೆ.