Advertisement
ಇನ್ನೊಂದೆಡೆ ಕೆಲವು ಸಂಘಟನೆಗಳು ಪ್ರೇಮಿಗಳ ದಿನವನ್ನು ದೇಶಪ್ರೇಮಿಗಳ ದಿನಾಚರಣೆಯಾಗಿ ಆಚರಿಸುವ ಮೂಲಕ ಅದನ್ನು ಅವಗಣಿಸಲಾಗುತ್ತಿ¤ದೆ. ವಿದೇಶದಲ್ಲಿ ಪ್ರೇಮಿಗಳಿಗಾಗಿ ಆಚರಣೆಗೆ ಬಂದ ಈ ದಿನವು ಕೆಲವು ವರ್ಷಗಳಿಂದ ದೇಶದಲ್ಲಿಯೂ ಮಹತ್ವ ಪಡೆಯಿತು. ಆದರೆ ಆ ದಿನದಂದು ಅಹಿತಕರ ಘಟನೆಗಳು ನಡೆಯಬಾರದು ಎಂಬ ಕಾರಣಕ್ಕಾಗಿ ಕೆಲವು ಸಂಘಟನೆಗಳು ಇದಕ್ಕೆ ವಿರೋಧ ಮಾಡುತ್ತಲೇ ಬಂದಿದ್ದವು. ಹಾಗಾಗಿ ಪ್ರೇಮಿಗಳ ದಿನ ಆಚರಣೆ ಕಡಿಮೆಯಾಗುತ್ತಿದ್ದು, ಬೆಂಗಳೂರಿನಂಥ ಮಹಾನಗರಗಳಿಗೆ ಹೋಲಿಸಿದರೆ ಮಂಗಳೂರಿಲ್ಲಿ ಈ ಆಚರಣೆ ಅಷ್ಟೊಂದು ಮನ್ನಣೆ ಪಡೆದುಕೊಂಡಿಲ್ಲ.
ಭಾರತೀಯ ಪರಂಪರೆಯಲ್ಲಿ ಪ್ರೇಮಿಗಳ ದಿನಾಚರಣೆ ಸರಿಯಲ್ಲ ಮತ್ತು ಇದರಿಂದ ಅಹಿತಕರ ಘಟನೆ ಗಳು ನಡೆಯುವ ಸಾಧ್ಯತೆಗಳೂ ಇಲ್ಲದಿಲ್ಲ ಎಂಬ ಕಾರಣಕ್ಕಾಗಿ ಕೆಲವು ಸಂಘಟನೆಗಳು ಹಿಂದಿನಿಂದಲೇ ಈ ದಿನವನ್ನು ವಿರೋಧಿಸುತ್ತಾ ಬಂದಿವೆ. ಈ ಬಾರಿಯೂ ಪ್ರೇಮಿಗಳ ದಿನವನ್ನು ಆಚರಿಸಬಾರದು ಎಂದು ಸಂಘಟನೆಗಳು ತಿಳಿಸಿವೆ. ಪ್ರೇಮಿಗಳ ದಿನಾಚರಣೆ ಸಂಬಂಧಿಸಿದ ಯಾವುದೇ ಗ್ರೀಟಿಂಗ್ಸ್, ವಸ್ತುಗಳನ್ನು ಮಾರಾಟ ಮಾಡಬಾರದು ಎಂದು ಅಂಗಡಿ ಮಾಲಕರಲ್ಲಿ ಬಜರಂಗದಳ ವಿನಂತಿಸಿದೆ. ಕೆಂಬಣ್ಣದ ಸಿಂಗಾರ
ನಗರದಲ್ಲಿ ಪ್ರೇಮಿಗಳ ದಿನ ಆಚರಣೆ ಇಲ್ಲವಾದರೂ ಕೆಲವೊಂದು ಅಂಗಡಿಗಳಲ್ಲಿ ಈಗಾಗಲೇ ಆ ದಿನವನ್ನು ಸಾರುವ ಕೆಂಪು ಬಣ್ಣ ರಾರಾಜಿಸುತ್ತಿದೆ. ವ್ಯಾಲೆಂಟೈನ್ಸ್ ಡೇ ಹಿನ್ನೆಲೆಯಲ್ಲಿ ವ್ಯಾಪಾರ ತಾಣಗಳಿಗೆ ಯುವ ಸಮು ದಾಯವನ್ನು ಆಕರ್ಷಿಸುವ ಸಲುವಾಗಿ ಅಂಗಡಿಗಳನ್ನು ಕೆಂಬಣ್ಣದಿಂದ ಸಿಂಗಾರಗೊಳಿಸಲಾಗಿದೆ. ಕೆಲವು ಬಟ್ಟೆ ಅಂಗಡಿಗಳಲ್ಲಿ ಕೆಂಬಣ್ಣದ ಬಟ್ಟೆಗಳನ್ನೇ ಜೋಡಿಸಿ ತೂಗು ಹಾಕಲಾಗಿದೆ. ಫ್ಯಾನ್ಸಿ ಅಂಗಡಿ ಗಳಲ್ಲಿ ಕೆಂಬಣ್ಣದ ಗೊಂಬೆಗಳನ್ನು ಜೋಡಿಸಿದ್ದು, ಆಕರ್ಷಕವಾಗಿ ಕಾಣುತ್ತಿವೆ. ಹೂವಿನಂಗಡಿಗಳಲ್ಲಿಯೂ ಇದೇ ರೀತಿಯ ಜೋಡಣೆ ಗಮನ ಸೆಳೆ ಯುತ್ತಿದೆ. ಅಂಗಡಿಯೊಂದರಲ್ಲಿ ಹೃದಯಾಕಾರದಲ್ಲಿ ಹೂವು ಮತ್ತು ಚಾಕೋಲೇಟ್‌ಗಳನ್ನು ಜೋಡಿ ಸಿಟ್ಟಿರುವುದು ಆಕರ್ಷಣೆಯ ಕೇಂದ್ರ ಬಿಂದುವಾಗಿದೆ.
Related Articles
ಪ್ರೇಮಿಗಳ ದಿನ ಆಚರಿಸುವುದು, ಆಚರಿಸದೇ ಇರುವುದು ಅವರವರಿಗೆ ಬಿಟ್ಟ ವಿಚಾರ. ಆದರೆ ಯಾವುದೇ ಆಚರಣೆಗಳು ಕೂಡ ಯುವ ಸಮುದಾಯವನ್ನು ತಪ್ಪು ದಾರಿಗೆ ಕೊಂಡೊಯ್ಯಬಾರದು. ಆಚರಣೆ ಹೆಸರಿನಲ್ಲಿ ದುರುಪಯೋಗ ನಡೆಯಬಾರದು. ಇಷ್ಟೇ ನಾನು ಹೇಳುವುದು.
- ಚಿರಶ್ರೀ ಅಂಚನ್, ನಟಿ
Advertisement
ಸಾಮಾಜಿಕ ತಾಣಗಳಲ್ಲೇ ಶುಭಾಶಯಹಿಂದೆಲ್ಲ ಯಾವುದೇ ವಿಶೇಷ ದಿನಾಚರಣೆ ಶುಭಾಶಯ ವಿನಿಮಯ ಮಾಡಿಕೊಳ್ಳಲು ಪತ್ರದ ಮುಖೇನ ಅಥವಾ ನೇರವಾಗಿ ಭೇಟಿಯಾಗಬೇಕಿತ್ತು. ಆದರೆ ಈಗ ಹಾಗಿಲ್ಲ. ಸಾಮಾಜಿಕ ಜಾಲತಾಣಗಳು ಇಡೀ ವಿಶ್ವದಲ್ಲೇ ಪಸರಿಸಿರುವುದರಿಂದ ಶುಭಾಶಯ ವಿನಿಮಯಕ್ಕೂ ವೇದಿಕೆಯಾಗುತ್ತಿದೆ. ಅದರಂತೆ ಪ್ರೇಮಿಗಳ ದಿನಾಚರಣೆ ಹಿನ್ನೆಲೆಯಲ್ಲಿ ಅಂಗಡಿಗಳಿಗೆ ತೆರಳಿ ಗ್ರೀಟಿಂಗ್ಸ್ ತಂದು ಶುಭಾಶಯ ವಿನಿಮಯ ಮಾಡಬೇಕಾದ ಅಗತ್ಯ ಈಗಿಲ್ಲ. ಕೈಯಲ್ಲಿರುವ ಸ್ಮಾರ್ಟ್‌ಫೋನ್‌ನಲ್ಲಿಯೇ ಶುಭಾಶಯ ವಿನಿಮಯ ಮಾಡಲಾಗುತ್ತದೆ. - ಧನ್ಯಾ ಬಾಳೆಕಜೆ