Advertisement

Mangaluru: ಇಂದು ನೈಋತ್ಯ ಪದವೀಧರರ, ಶಿಕ್ಷಕರ ಕ್ಷೇತ್ರದ ಚುನಾವಣೆ…

11:32 PM Jun 02, 2024 | Team Udayavani |

ಮಂಗಳೂರು/ಉಡುಪಿ: ನೈಋತ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆ ಜೂ. 3ರಂದು ಬೆಳಗ್ಗೆ 8ರಿಂದ ಸಂಜೆ 4ರ ನಡೆಯಲಿದೆ. ಬ್ಯಾಲೆಟ್‌ ಪೇಪರ್‌ನಲ್ಲಿ “ಪ್ರಾಶಸ್ತ್ಯದ ಮತ ಹಾಕುವ ಮೂಲಕ ಮತದಾನ ಮಾಡಬೇಕಾಗಿರುತ್ತದೆ. ಮಸ್ಟರಿಂಗ್‌ ಕಾರ್ಯ ರವಿವಾರ ನಡೆಯಿತು.

Advertisement

ದ.ಕ. ಜಿಲ್ಲೆಯಲ್ಲಿ ಪದವೀಧರರ ಕ್ಷೇತ್ರದಲ್ಲಿ 24 ಹಾಗೂ ಶಿಕ್ಷಕರ ಕ್ಷೇತ್ರಕ್ಕೆ ಎಲ್ಲ ತಾಲೂಕು ಕಚೇರಿಗಳಲ್ಲಿ ಸೇರಿ 16 ಕಡೆಗಳಲ್ಲಿ ಮತದಾನ ಕೇಂದ್ರ ತೆರೆಯಲಾಗಿದೆ. ಪದವೀಧರರ ಕ್ಷೇತ್ರಕ್ಕೆ ದ.ಕ. ಜಿಲ್ಲೆಯಲ್ಲಿ 8,375 ಪುರುಷ ಹಾಗೂ 11,596 ಮಹಿಳೆ ಸಹಿತ 19,971 ಮತದಾರರಿ ದ್ದಾರೆ. 2,650 ಪುರುಷ ಹಾಗೂ 5,539 ಮಹಿಳೆ ಸೇರಿದಂತೆ 8,189 ಶಿಕ್ಷಕ ಕ್ಷೇತ್ರದ ಮತದಾರರಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ 10 ಕಡೆ ಮತದಾನ ಕೇಂದ್ರ ಗಳಿವೆ. ಪದವೀಧರರ ಕ್ಷೇತ್ರಕ್ಕೆ ಉಡುಪಿ ಜಿಲ್ಲೆಯಲ್ಲಿ 17,033 (ಪುರುಷರು 7,857, ಮಹಿಳೆಯರು 9,176) ಮತದಾರರಿದ್ದಾರೆ. ಶಿಕ್ಷಕರ ಕ್ಷೇತ್ರದಲ್ಲಿ 4,067 (ಪುರುಷರು1,717, ಮಹಿಳೆಯರು 2,350) ಮತದಾರರಿದ್ದಾರೆ.

ನೈಋತ್ಯ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣ ಕಣ ಈಗಾಗಲೇ ರಂಗೇರಿದೆ. ಕಾಂಗ್ರೆಸ್‌ ಹಾಗೂ ಬಿಜೆಪಿ-ಜೆಡಿಎಸ್‌ ಮೈತ್ರಿಕೂಟಕ್ಕೆ ಇದು ಪ್ರತಿಷ್ಠೆಯ ಕಣವಾಗಿದೆ.

ಪದವೀಧರ ಕ್ಷೇತ್ರದಲ್ಲಿ 10 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬಂಡಾಯ ಅಭ್ಯರ್ಥಿಗಳು ಕಣ ದಲ್ಲಿರುವುದರಿಂದ ಇಲ್ಲಿ ಕುತೂಹಲ ಮೂಡಿದೆ. ಶಿಕ್ಷಕರ ಕ್ಷೇತ್ರದಲ್ಲಿಯೂ ಬಂಡಾಯದ ಬಿಸಿ ಇದ್ದು ಒಟ್ಟು 8 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next