Advertisement

ಐಪಿಎಲ್‌ ಫ್ರಾಂಚೈಸಿಗಳಿಗೆ ಇಂದು ಅಂತಿಮ ಗಡುವು

11:29 PM Nov 29, 2021 | Team Udayavani |

ಹೊಸದಿಲ್ಲಿ: ಮುಂದಿನ ವರ್ಷ ಜನವರಿಯಲ್ಲಿ ಐಪಿಎಲ್‌ ಬೃಹತ್‌ ಹರಾಜು ನಡೆ ಯಲಿದೆ. ಯಾವ್ಯಾವ ಆಟಗಾರರನ್ನು ಉಳಿಸಿ ಕೊಳ್ಳಲಾಗುತ್ತದೆ ಎಂದು ತಿಳಿಸಲು ಫ್ರಾಂಚೈಸಿ ಗಳಿಗೆ ಮಂಗಳವಾರ ಅಂತಿಮ ಗಡುವು.

Advertisement

ಈ ಹಿನ್ನೆಲೆಯಲ್ಲಿ ಹಲವು ಫ್ರಾಂಚೈಸಿಗಳು ಈಗಾಗಲೇ ಅಂತಿಮ ಪಟ್ಟಿಯನ್ನು ನೀಡಿವೆ. ಈ ಫ್ರಾಂಚೈಸಿಗಳು ಉಳಿಸಿಕೊಳ್ಳುವ ಆಟ ಗಾರರನ್ನು ನೋಡಿಕೊಂಡು ಹೊಸತಾಗಿ ಸೇರ್ಪಡೆಯಾಗಿರುವ ಅಹ್ಮದಾಬಾದ್‌ ಮತ್ತು ಲಕ್ನೋ ತಂಡಗಳು ತಲಾ ಮೂರು ಆಟಗಾರರನ್ನು ಕೊಳ್ಳುವ ನಿರ್ಧಾರ ಮಾಡಲಿವೆ. ಈ ಎರಡು ತಂಡಗಳು ಡಿ. 1-25ರ ನಡುವೆ ತಮ್ಮ ಖರೀದಿ ಪ್ರಕ್ರಿಯೆ ಮುಗಿಸಬೇಕು.

ಡೆಲ್ಲಿ ಕ್ಯಾಪಿಟಲ್ಸ್‌ ತಂಡ ರಿಷಭ್‌ ಪಂತ್‌, ಪೃಥ್ವಿ ಶಾ, ಅಕ್ಷರ್‌ ಪಟೇಲ್‌, ಅನ್ರಿಚ್‌ ನೋರ್ಜೆ ಅವರನ್ನು ಉಳಿಸಿಕೊಳ್ಳುವುದು ಖಚಿತ. ಹೀಗಾಗಿ ಆರ್‌. ಅಶ್ವಿ‌ನ್‌, ಶ್ರೇಯಸ್‌ ಐಯ್ಯರ್‌, ಕಾಗಿಸೊ ರಬಾಡ ಅವರಂತಹ ಖ್ಯಾತ ಆಟಗಾರರನ್ನು ಕೈಬಿಡಬೇಕಾಗುತ್ತದೆ.

ಇದನ್ನೂ ಓದಿ:ಟೀಮ್‌ ಇಂಡಿಯಾದ ಓಪನರ್‌ ಕೆ.ಎಲ್‌. ರಾಹುಲ್‌ ತುಳು ಕಮೆಂಟ್‌

ಕೆಕೆಆರ್‌ ತನ್ನ ನಾಯಕ ಇಯಾನ್‌ ಮಾರ್ಗನ್‌, ಶುಭಮನ್‌ ಗಿಲ್‌ ಅವರನ್ನು ಬಿಟ್ಟುಕೊಡುವ ಸಾಧ್ಯತೆಯಿದೆ. ಪಂಜಾಬ್‌ ಕಿಂಗ್ಸ್‌ ನಾಯಕ ಕೆ.ಎಲ್‌. ರಾಹುಲ್‌ ತಾವೇ ಹರಾಜಿಗೆ ಸಿದ್ಧರಾಗಿದ್ದಾರೆ. ಯುವ ಆಟಗಾರರಾದ ಆರ್ಷದೀಪ್‌ ಸಿಂಗ್‌, ರವಿ ಬಿಷ್ಣೋಯಿ ಅವರನ್ನು ಉಳಿಸಿಕೊಳ್ಳಬಹುದು. ಮಾಯಾಂಕ್‌ ಅಗರ್ವಾಲ್‌, ಮೊಹಮ್ಮದ್‌ ಶಮಿ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

Advertisement

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next