Advertisement

ಇಂದು ವಿವಿಧೆಡೆ ಪೇಜಾವರ ಶ್ರೀಗಳ ಆರಾಧನೋತ್ಸವ

11:29 PM Jan 08, 2020 | Team Udayavani |

ಉಡುಪಿ: ನಾಡಿನ ವಿವಿಧೆಡೆ ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಶ್ರೀಪಾದರ ಆರಾಧನೋತ್ಸವ, ಅನ್ನಸಂತರ್ಪಣೆ ಗುರುವಾರದಂದು ನಡೆಯಲಿದೆ. ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ಪರ್ಯಾಯ ಪಲಿಮಾರು ಮಠದ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು ಅನ್ನಸಂತರ್ಪಣೆಯನ್ನು ಏರ್ಪಡಿಸಿದ್ದಾರೆ. ಬೆಳಗ್ಗೆ ವಿಶೇಷ ಪಾರಾಯಣ, ಪೂಜೆಗಳನ್ನು ನಡೆಸಲಾಗುತ್ತದೆ.

Advertisement

ಉಡುಪಿ ಪೇಜಾವರ ಮಠ, ಮಂಗಳೂರು ತಲಪಾಡಿ ಸಮೀಪದ ಕಣ್ವತೀರ್ಥ ಮಠ, ಮಂಗಳೂರು ತಾಲೂಕಿನ ಪೇಜಾವರ ಮೂಲಮಠ, ಮುಚ್ಚಲಕೋಡು ಮತ್ತು ಪೆರ್ಣಂಕಿಲ ದೇವಸ್ಥಾನಗಳಲ್ಲಿ ಪೇಜಾವರ ಮಠದ ವತಿಯಿಂದ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ. ಉಡುಪಿಯ ವಿದ್ಯೋದಯ ಸಮೂಹ ಸಂಸ್ಥೆ, ಪಾಜಕದ ಆನಂದತೀರ್ಥ ವಿದ್ಯಾಲಯ, ರಾಮಕುಂಜದ ವಿದ್ಯಾಸಂಸ್ಥೆ, ಕುಕ್ಕಿಕಟ್ಟೆಯ ಶ್ರೀಕೃಷ್ಣ ಬಾಲನಿಕೇತನ ಮತ್ತು ಉಚಿತ ಹಾಸ್ಟೆಲ್‌ನಲ್ಲಿ ಭೋಜನದ ವ್ಯವಸ್ಥೆ ಮಾಡಲಾಗಿದೆ.

ಶ್ರೀಗಳನ್ನು ವೃಂದಾವನ ಮಾಡಿದ ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ವಿಶೇಷ ಪಾರಾ ಯಣ, ಪೂಜೆಗಳನ್ನು ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದರ ನೇತೃತ್ವದಲ್ಲಿ ನಡೆಸಲಾಗುತ್ತದೆ. ಬೆಂಗಳೂರು, ಧಾರವಾಡ, ಮೈಸೂರು, ಬೆಳಗಾವಿ, ಚಿಕ್ಕಮಗ ಳೂರು, ಬಳ್ಳಾರಿ ಮೊದಲಾದೆಡೆ ಇರುವ ಮಠದ ನೇರ ಸಂಪರ್ಕದ ಸಂಸ್ಥೆಗಳಲ್ಲಿ, ಚೆನ್ನೈ, ಮುಂಬಯಿ, ದಿಲ್ಲಿ, ನಾಶಿಕ್‌ ಮೊದಲಾದೆಡೆ ಇರುವ ಶಾಖಾ ಮಠಗಳಲ್ಲಿ ಆರಾಧನೋತ್ಸವದ ಅಂಗವಾಗಿ ಭೋಜನ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ.

ಇದಲ್ಲದೆ ಬೆಂಗಳೂರು ಪೀಣ್ಯದಲ್ಲಿರುವ ಪುತ್ತೂರು ಮೂಲದ ಸೌಂದರ್ಯ ಮಂಜಪ್ಪನವರಂತಹ ಗಣ್ಯರು ಅವರವರ ದೇವಸ್ಥಾನ, ಸಂಸ್ಥೆಗಳಲ್ಲಿ ಸಂತರ್ಪಣೆ ಮಾಡು ತ್ತಿದ್ದಾರೆ. ಸ್ಥಳಾಭಾವದಿಂದಾಗಿ ಪೊಲೀಸ್‌ ಇಲಾಖೆಯ ಸಲಹೆಯಂತೆ ಬೆಂಗಳೂರಿನ ಸಾರ್ವಜನಿಕ ರಿಗೆ ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ಜ. 11ರಂದು ಅನ್ನಸಂತರ್ಪಣೆ ಮಾಡಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next