Advertisement

ಇಂದು ಬಾಲಮಿತ್ರರ ಬೃಹತ್‌ ಮೊಸರು ಕುಡಿಕೆ ಉತ್ಸವ 

09:22 AM Sep 14, 2017 | Team Udayavani |

ಉಡುಪಿ: ಶ್ರೀ ಕೃಷ್ಣಾಷ್ಟಮಿ ಪ್ರಯುಕ್ತ ಶ್ರೀಕೃಷ್ಣ ಮಠದಲ್ಲಿ ನಡೆಯುವ ವಿಟ್ಲ ಪಿಂಡಿ ಉತ್ಸವದಲ್ಲಿ ಪಾಲ್ಗೊಳ್ಳುವ ಮುಂಬಯಿಯ ಬಾಲಮಿತ್ರರ ತಂಡ ಕೃಷ್ಣನ ಲೀಲೋತ್ಸವದ ಮೆರುಗನ್ನು ಮತ್ತಷ್ಟು ಹೆಚ್ಚಿಸಲಿದೆ.

Advertisement

ಕೆ. ಉದಯ ಕುಮಾರ್‌ ಶೆಟ್ಟಿ ನೇತೃತ್ವದಲ್ಲಿ ಕಿದಿಯೂರು ಉದಯ ಕುಮಾರ್‌ ಶೆಟ್ಟಿ ಫ್ಯಾಮಿಲಿ ಟ್ರಸ್ಟ್‌ನ ಅಂಗ ಸಂಸ್ಥೆಯಾಗಿರುವ “ಆಲಾರೆ ಗೋವಿಂದ’ ಸಾಂಸ್ಕೃತಿಕ ವೇದಿಕೆ ವತಿಯಿಂದ ಮುಂಬಯಿಯ ಬಾಲಮಿತ್ರ ವ್ಯಾಯಾಮ ಶಾಲೆಯ ಯುವಕರಿಂದ ಮಾನವ ಪಿರಮಿಡ್‌ ನಿರ್ಮಿಸಿ ಬೃಹತ್‌ ಮೊಸರು ಕುಡಿಕೆ ಒಡೆಯುವ ಕಾರ್ಯಕ್ರಮ ನಡೆಯಲಿದೆ.

ಕೃಷ್ಣಮಠದ ತಾತ್ಕಾಲಿಕ ರಾಜಾಂಗಣದಲ್ಲಿ ಸೆ. 14ರ ಬೆಳಗ್ಗೆ 9 ಗಂಟೆಗೆ ಪರ್ಯಾಯ ಶ್ರೀ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಚಾಲನೆ ನೀಡಲಿದ್ದು, ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು, ನಾಡೋಜ ಡಾ| ಜಿ. ಶಂಕರ್‌, ಸಚಿವರು, ಸಂಸದರು, ಶಾಸಕರು ಭಾಗವಹಿಸಲಿದ್ದಾರೆ. ಆ ಬಳಿಕ ಶ್ಯಾಮಿಲಿ ಸಭಾಭವನ, ಮಲ್ಪೆ, ಬ್ರಹ್ಮಾವರ, ರಥಬೀದಿ, ರಾಧಾ ಮೆಡಿಕಲ್‌ ಹಾಗೂ ಕಿದಿಯೂರು ಹೊಟೇಲ್‌ ಮುಂಭಾಗ ಮೊಸರು ಕುಡಿಕೆ ಒಡೆಯಲಿದ್ದಾರೆ.

ಸಮಾಜಮುಖೀ ಕಾರ್ಯ
ಕಿದಿಯೂರು ಉದಯ ಕುಮಾರ್‌ ಶೆಟ್ಟಿ ಫ್ಯಾಮಿಲಿ ಟ್ರಸ್ಟ್‌ ಹತ್ತು ಹಲವು ಸಾಂಸ್ಕೃತಿಕ, ಸಮಾಜಮುಖೀ ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳುತ್ತಿದೆ. ಯುವಕರಲ್ಲಿ ಸಾಮಾಜಿಕ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಬೀದಿ ನಾಟಕ, ಬಡವರಿಗೆ ಆರ್ಥಿಕ ಸಹಾಯದ ಜತೆಗೆ ಪ್ರಧಾನಮಂತ್ರಿ ಜೀವ ವಿಮಾ ಯೋಜನೆ ಹಾಗೂ ಪ್ರಧಾನಮಂತ್ರಿ ಜೀವನ್‌ ಜ್ಯೋತಿ ಯೋಜನೆಯ 24,000 ಫ‌ಲಾನುಭವಿಗಳ ಸುಮಾರು 50 ಲಕ್ಷ ರೂ. ವರೆಗಿನ ವಿಮಾ ಕಂತನ್ನು ಟ್ರಸ್ಟ್‌ ಭರಿಸಲಿದೆ ಎಂದು ಕೆ. ಉದಯ ಕುಮಾರ್‌ ಶೆಟ್ಟಿ  ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next