Advertisement

ಇಂದು ಸೇನಾ ದಿನ: ಬೆಂಗಳೂರಿನಲ್ಲಿ ಸೇನಾ ಶಕ್ತಿ ಪ್ರದರ್ಶನ

12:59 AM Jan 15, 2023 | Team Udayavani |

ರಾಷ್ಟ್ರ ರಾಜಧಾನಿ ದಿಲ್ಲಿಯಿಂದ ಇದೇ ಮೊದಲ ಬಾರಿ ಹೊರಗೆ ಬೆಂಗಳೂರಿನಲ್ಲಿ ನಡೆಯಲಿರುವ ಭಾರತೀಯ ಸೇನಾ ದಿನಕ್ಕೆ ಕ್ಷಣಗಣನೆ ಆರಂಭವಾಗಿದ್ದು, ರವಿವಾರ ಐತಿಹಾಸಿಕ ದಿನಕ್ಕೆ ಸಾಕ್ಷಿಯಾಗಲಿದೆ.

Advertisement

ಸೇನಾ ಶಕ್ತಿ ಅನಾವರಣ
ಮದ್ರಾಸ್‌ ಎಂಜಿನಿಯರಿಂಗ್‌ ಗ್ರೂಪ್‌ (ಎಂಇಜಿ)ನ ಪರೇಡ್‌ ಮೈದಾನದಲ್ಲಿ ಬೆಳಗ್ಗೆ ಸರಿಯಾಗಿ 8ಕ್ಕೆ ಚಾಲನೆ ದೊರೆಯಲಿದೆ. ಝಡ್‌ ಪ್ಲಸ್‌ ಭದ್ರತೆಯಲ್ಲಿ ನಡೆಯುವ ಸೇನಾ ಸಾಮರ್ಥ್ಯ ಪ್ರದ ರ್ಶನಕ್ಕೆ ಚೀಫ್ ಆಫ್ ಆರ್ಮಿ ಸ್ಟಾಫ್ ಜನರಲ್‌ ಮನೋಜ್‌ ಪಾಂಡೆ ಅತಿಥಿಯಾಗಿ ಭಾಗವಹಿಸುವರು. ಎಂಟು ರೆಜಿಮೆಂಟ್‌ಗಳ ಆಕರ್ಷಕ ಪಥಸಂಚಲನ, ದೇಶೀಯ ನಿರ್ಮಿತ ರಕ್ಷಣಾ ಉಪ ಕರಣಗಳ ಪ್ರದರ್ಶನ, ಸೇನಾ ಸಾಮರ್ಥ್ಯ ಪ್ರದರ್ಶನ ನಡೆಯಲಿದೆ.

ಈ ಬಾರಿಯ ವೈಶಿಷ್ಟ್ಯ
ಫೀಲ್ಡ್‌ ಮಾರ್ಷಲ್‌ ಕಾರಿಯಪ್ಪ ಅವರು ಅಧಿಕೃತ ವಾಗಿ ಅಧಿಕಾರ ವಹಿಸಿದ ದಿನದ ಸಂಕೇತವಾಗಿ ಸೇನಾ ದಿನ ಆಚರಿಸಲಾಗುತ್ತದೆ. ಈ ವರ್ಷ ಅವರ ತವರಾಗಿರುವ ಕರ್ನಾಟಕದಲ್ಲೇ ಸೇನಾ ದಿನ ನಡೆಯುತ್ತಿರುವುದು ಒಂದು ವಿಶೇಷವಾದರೆ, ಇದೇ ಮೊದಲ ಬಾರಿಗೆ ದಿಲ್ಲಿಯಿಂದ ಹೊರಗೆ ಸೇನಾ ದಿನದ ಕಾರ್ಯಕ್ರಮ ನಡೆಯುತ್ತಿರುವುದು ಮತ್ತೂಂದು ವಿಶೇಷ.

-ಸೇನಾದಿನಕ್ಕೆ ಚಾಲನೆ ಸಮಯ – ಬೆಳಗ್ಗೆ 8 ಗಂಟೆ
-ಪಥಸಂಚಲನದಲ್ಲಿ ಪಾಲ್ಗೊಳ್ಳುವ ಯೋಧರು- 500ಕ್ಕೂ ಹೆಚ್ಚು
-ಭಾಗಯಾಗಲಿರುವ ಒಟ್ಟು ರೆಜಿಮೆಂಟ್‌ಗಳು – 8
-ಪ್ರತಿ ರೆಜಿಮೆಂಟ್‌ನಲ್ಲಿರುವ ಯೋಧರು- 50-60
-ಸೇನಾ ಸಾಮರ್ಥ್ಯ ಪ್ರದರ್ಶನದ ಅವಧಿ- 2:30 ಗಂಟೆ

 

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next