Advertisement
ಸೇನಾ ಶಕ್ತಿ ಅನಾವರಣಮದ್ರಾಸ್ ಎಂಜಿನಿಯರಿಂಗ್ ಗ್ರೂಪ್ (ಎಂಇಜಿ)ನ ಪರೇಡ್ ಮೈದಾನದಲ್ಲಿ ಬೆಳಗ್ಗೆ ಸರಿಯಾಗಿ 8ಕ್ಕೆ ಚಾಲನೆ ದೊರೆಯಲಿದೆ. ಝಡ್ ಪ್ಲಸ್ ಭದ್ರತೆಯಲ್ಲಿ ನಡೆಯುವ ಸೇನಾ ಸಾಮರ್ಥ್ಯ ಪ್ರದ ರ್ಶನಕ್ಕೆ ಚೀಫ್ ಆಫ್ ಆರ್ಮಿ ಸ್ಟಾಫ್ ಜನರಲ್ ಮನೋಜ್ ಪಾಂಡೆ ಅತಿಥಿಯಾಗಿ ಭಾಗವಹಿಸುವರು. ಎಂಟು ರೆಜಿಮೆಂಟ್‌ಗಳ ಆಕರ್ಷಕ ಪಥಸಂಚಲನ, ದೇಶೀಯ ನಿರ್ಮಿತ ರಕ್ಷಣಾ ಉಪ ಕರಣಗಳ ಪ್ರದರ್ಶನ, ಸೇನಾ ಸಾಮರ್ಥ್ಯ ಪ್ರದರ್ಶನ ನಡೆಯಲಿದೆ.
ಫೀಲ್ಡ್ ಮಾರ್ಷಲ್ ಕಾರಿಯಪ್ಪ ಅವರು ಅಧಿಕೃತ ವಾಗಿ ಅಧಿಕಾರ ವಹಿಸಿದ ದಿನದ ಸಂಕೇತವಾಗಿ ಸೇನಾ ದಿನ ಆಚರಿಸಲಾಗುತ್ತದೆ. ಈ ವರ್ಷ ಅವರ ತವರಾಗಿರುವ ಕರ್ನಾಟಕದಲ್ಲೇ ಸೇನಾ ದಿನ ನಡೆಯುತ್ತಿರುವುದು ಒಂದು ವಿಶೇಷವಾದರೆ, ಇದೇ ಮೊದಲ ಬಾರಿಗೆ ದಿಲ್ಲಿಯಿಂದ ಹೊರಗೆ ಸೇನಾ ದಿನದ ಕಾರ್ಯಕ್ರಮ ನಡೆಯುತ್ತಿರುವುದು ಮತ್ತೂಂದು ವಿಶೇಷ. -ಸೇನಾದಿನಕ್ಕೆ ಚಾಲನೆ ಸಮಯ – ಬೆಳಗ್ಗೆ 8 ಗಂಟೆ
-ಪಥಸಂಚಲನದಲ್ಲಿ ಪಾಲ್ಗೊಳ್ಳುವ ಯೋಧರು- 500ಕ್ಕೂ ಹೆಚ್ಚು
-ಭಾಗಯಾಗಲಿರುವ ಒಟ್ಟು ರೆಜಿಮೆಂಟ್‌ಗಳು – 8
-ಪ್ರತಿ ರೆಜಿಮೆಂಟ್‌ನಲ್ಲಿರುವ ಯೋಧರು- 50-60
-ಸೇನಾ ಸಾಮರ್ಥ್ಯ ಪ್ರದರ್ಶನದ ಅವಧಿ- 2:30 ಗಂಟೆ
Related Articles
Advertisement