Advertisement
ವಿರಾಟ್ ಕೊಹ್ಲಿ ಪಾಲಿಗೂ ಇದೊಂದು ಮಹತ್ವದ ಪಂದ್ಯ. ಅವರು 50ನೇ ಟೆಸ್ಟ್ ನಲ್ಲಿ ಭಾರತವನ್ನು ಮುನ್ನಡೆಸಲಿದ್ದಾರೆ. ಇದನ್ನು ಜಯಿಸಿದರೆ ಭಾರತ ಮತ್ತು ಕೊಹ್ಲಿ ಪಾಲಿಗೆ ಪುಣೆ ಟೆಸ್ಟ್ ಪಂದ್ಯ ಸ್ಮರಣೀಯವಾಗಲಿದೆ.
ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಕೆಲವು ದಿಟ್ಟ ನಿರ್ಧಾರಗಳನ್ನು ತೆಗೆದುಕೊಂಡಿತ್ತು. ರೋಹಿತ್ ಶರ್ಮ ಅವರನ್ನು ಆರಂಭಿಕನನ್ನಾಗಿ ಕಣಕ್ಕಿಳಿಸಿದ್ದು ಹಾಗೂ ಬಹಳ ಸಮಯದ ಬಳಿಕ ಆರ್. ಅಶ್ವಿನ್ ಅವರನ್ನು ಆಡುವ ಬಳಗಕ್ಕೆ ಸೇರಿಸಿಕೊಂಡದ್ದು ಇದರಲ್ಲಿ ಪ್ರಮುಖವಾದುದು. ರೋಹಿತ್ ಎರಡೂ ಇನ್ನಿಂಗ್ಸ್ ಗಳಲ್ಲಿ ಶತಕ ಬಾರಿಸಿ ಮೆರೆದರೆ, ಅಶ್ವಿನ್ ಮೊದಲ ಸರದಿಯಲ್ಲಿ 7 ವಿಕೆಟ್ ಉಡಾಯಿಸಿ ಪ್ರವಾಸಿಗರಿಗೆ ಏಳYತಿ ಇಲ್ಲದಂತೆ ಮಾಡಿದ್ದು ಈಗ ಇತಿಹಾಸ. ಉಳಿದಂತೆ ಮಾಯಾಂಕ್ ಅಗರ್ವಾಲ್ ಅವರ ಡಬಲ್ ಸೆಂಚುರಿ, ರವೀಂದ್ರ ಜಡೇಜ ಅವರ ಆಲ್‌ರೌಂಡ್ ಪ್ರದರ್ಶನ, ಮೊಹಮ್ಮದ್ ಶಮಿ ಅವರ ಘಾತಕ ಸ್ಪೆಲ್ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಕೊಹ್ಲಿ, ರಹಾನೆ, ವಿಹಾರಿ ಬ್ಯಾಟಿಂಗ್‌ನಲ್ಲಿ ಮಿಂಚಿದರೆ ಹರಿಣಗಳ ಸ್ಥಿತಿ ಇನ್ನಷ್ಟು ಬಿಗಡಾಯಿಸುವುದರಲ್ಲಿ ಅನುಮಾನವಿಲ್ಲ.
ಪುಣೆ ಪಂದ್ಯಕ್ಕಾಗಿ ಭಾರತದ ಆಡುವ ಬಳಗದಲ್ಲಿ ಬದಲಾವಣೆ ಗೋಚರಿಸುವ ಸಾಧ್ಯತೆ ಕಡಿಮೆ.
Related Articles
ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ದಕ್ಷಿಣ ಆಫ್ರಿಕಾದ ಬ್ಯಾಟಿಂಗ್ ಅಮೋಘವಾಗಿಯೇ ಇತ್ತು. ಭಾರತದ ಬೃಹತ್ ಮೊತ್ತಕ್ಕೆ ದಿಟ್ಟ ಉತ್ತರ ನೀಡಿದಾಗ ಪಂದ್ಯ ಡ್ರಾಗೊಳ್ಳುವ ಸಾಧ್ಯತೆ ಗೋಚರಿಸಿತ್ತು. ಆದರೆ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಭಾರತ ತೋರ್ಪಡಿಸಿದ ಬಿರುಸಿನ ಬ್ಯಾಟಿಂಗ್ ಹಾಗೂ ಶಮಿ ಅವರ ಶರವೇಗದ ಬೌಲಿಂಗ್ ಹರಿಣಗಳನ್ನು ದಿಕ್ಕಾಪಾಲಾಗಿಸಿತು. ಆಮ್ಲ, ಎಬಿಡಿ, ಸ್ಟೇನ್ ಅವರಂಥ ವಿಶ್ವ ದರ್ಜೆಯ ಆಟಗಾರರ ವಿದಾಯ ಎನ್ನುವುದು ಆಫ್ರಿಕಾದ ಒಟ್ಟು ಸಾಮರ್ಥ್ಯವನ್ನು ಕುಗ್ಗಿಸಿದ್ದು ಇದರಿಂದ ಸಾಬೀತಾಗಿದೆ.
Advertisement
ಸರಣಿಯನ್ನು ಸಮಬಲಕ್ಕೆ ತರಬೇಕಾದರೆ ಡು ಪ್ಲೆಸಿಸ್ ಪಡೆ ಭಾರತದ ಸ್ಪಿನ್ ದಾಳಿಯನ್ನು ದಿಟ್ಟ ರೀತಿಯಲ್ಲಿ ನಿಭಾಯಿಸುವುದು ಮುಖ್ಯ. ಹಾಗೆಯೇ ರಬಾಡ, ಫಿಲಾಂಡರ್, ಎನ್‌ಗಿಡಿ, ಮಹಾರಾಜ್, ಮುತ್ತುಸ್ವಾಮಿ ಸೇರಿಕೊಂಡು ಜಾಣ್ಮೆಯ ಬೌಲಿಂಗ್ ಸಂಘಟಿಸಬೇಕಾದುದೂ ಅಗತ್ಯ.
ಹೇಗಿದೆ ಪುಣೆ ಟ್ರ್ಯಾಕ್?ಇದು ಪುಣೆಯ “ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್ ಸ್ಟೇಡಿಯಂ’ನಲ್ಲಿ ನಡೆಯುವ ಕೇವಲ 2ನೇ ಟೆಸ್ಟ್ ಪಂದ್ಯ. 2017ರಂದು ನಡೆದ ಭಾರತ-ಆಸ್ಟ್ರೇಲಿಯ ನಡುವಿನ ಮೊದಲ ಟೆಸ್ಟ್ ಮೂರೇ ದಿನಗಳಲ್ಲಿ ಮುಗಿದಿತ್ತು. ನಥನ್ ಲಿಯೋನ್, ಸ್ಟೀವ್ ಓ’ಕೀಫ್ ದಾಳಿಗೆ ಉತ್ತರಿಸುವಲ್ಲಿ ವಿಫಲವಾದ ಭಾರತ 333 ರನ್ನುಗಳ ಭಾರೀ ಸೋಲನುಭವಿಸಿತ್ತು. ಅಂದು ಪುಣೆ ಪಿಚ್ ಐಸಿಸಿಯ ಕೆಂಗಣ್ಣಿಗೆ ಗುರಿಯಾಗಿತ್ತು. ಬಿಸಿಸಿಐಗೆ ನೋಟಿಸ್ ಕೂಡ ನೀಡಿತ್ತು. ಈ ಬಾರಿ “ನ್ಪೋರ್ಟಿವ್’ ಆಗಿದೆ ಎಂದು ಕ್ಯುರೇಟರ್ ಪಾಂಡುರಂಗ ಸಲ್ಗಾಂವ್ಕರ್ ಭರವಸೆ ನೀಡಿದ್ದಾರೆ. ಆದರೆ ಪಂದ್ಯಕ್ಕೆ ಆಗಾಗ ಮಳೆಯಿಂದ ಅಡಚಣೆಯಾಗುವ ಸಾಧ್ಯತೆ ಇದೆ. ಸತತ 11ನೇ ಸರಣಿ ಗೆಲುವಿನತ್ತ…
ವಿಶಾಖಪಟ್ಟಣ ಟೆಸ್ಟ್ ಪಂದ್ಯವನ್ನು 203 ರನ್ನುಗಳಿಂದ ಗೆದ್ದ ಭಾರತ, ಪುಣೆಯಲ್ಲೂ ಜಯ ಸಾಧಿಸಿದರೆ ತವರಲ್ಲಿ ಸತತ 11ನೇ ಸರಣಿ ಗೆದ್ದು ನೂತನ ದಾಖಲೆ ಸ್ಥಾಪಿಸಲಿದೆ. ಸದ್ಯ ಭಾರತ ತಂಡ ತವರಲ್ಲಿ ಸತತ 10 ಸರಣಿಗಳನ್ನು ಗೆದ್ದು ಆಸ್ಟ್ರೇಲಿಯದೊಂದಿಗೆ ಅಗ್ರಸ್ಥಾನದಲ್ಲಿದೆ. ಆಸ್ಟ್ರೇಲಿಯ 2 ಸಲ ಈ ಸಾಧನೆ ಮಾಡಿದೆ. ಒಮ್ಮೆ ನ. 1994ರಿಂದ ನ. 2000ದ ತನಕ; ಇನ್ನೊಮ್ಮೆ ಜು. 2004ರಿಂದ ನ. 2008ರ ತನಕ. ಭಾರತ ತನ್ನ ತವರಿನ ಗೆಲುವಿನ ಅಭಿಯಾನ ಆರಂಭಿಸಿದ್ದು 2013ರ ಪ್ರವಾಸಿ ಆಸ್ಟ್ರೇಲಿಯ ವಿರುದ್ಧದ ಸರಣಿ ಮೂಲಕ. ಅಂದಿನ 4 ಪಂದ್ಯಗಳ ಸರಣಿಯನ್ನು ಭಾರತ 4-0 ಅಂತರದಿಂದ ವಶಪಡಿಸಿಕೊಂಡಿತ್ತು. ಕೊಹ್ಲಿ ನಾಯಕತ್ವದ 50ನೇ ಟೆಸ್ಟ್
ವಿರಾಟ್ ಕೊಹ್ಲಿ ಪಾಲಿಗೆ ಪುಣೆ ಟೆಸ್ಟ್ ಪಂದ್ಯ ಸ್ಮರಣೀಯ ವಾಗಿದೆ. ಇದು ಅವರ ನಾಯಕತ್ವದ 50ನೇ ಟೆಸ್ಟ್ ಪಂದ್ಯವೆಂಬುದು ವಿಶೇಷ. ಈವರೆಗಿನ 49 ಟೆಸ್ಟ್ ಗಳಲ್ಲಿ ಕೊಹ್ಲಿ 29ರಲ್ಲಿ ಗೆಲುವು ಕಂಡಿದ್ದಾರೆ. 10 ಪಂದ್ಯಗಳಲ್ಲಿ ಸೋಲು ಎದುರಾಗಿದೆ. ಉಳಿದ 10 ಪಂದ್ಯ ಡ್ರಾಗೊಂಡಿದೆ. ಕೊಹ್ಲಿ 50 ಟೆಸ್ಟ್ ಪಂದ್ಯಗಳಲ್ಲಿ ನಾಯಕತ್ವ ವಹಿಸಲಿರುವ ವಿಶ್ವದ 17ನೇ ಹಾಗೂ ಭಾರತದ 2ನೇ ನಾಯಕ. ಭಾರತೀಯ ದಾಖಲೆ ಹೊಂದಿರುವವರು ಮಹೇಂದ್ರ ಸಿಂಗ್ ಧೋನಿ (60 ಟೆಸ್ಟ್). ಧೋನಿ ನಾಯಕತ್ವದಲ್ಲಿ 27 ಗೆಲುವು ಒಲಿದಿದೆ. ಸದ್ಯ ಕೊಹ್ಲಿ ಮತ್ತು ಸೌರವ್ ಗಂಗೂಲಿ ಭಾರತೀಯ ಕಪ್ತಾನರ ದಾಖಲೆಯಲ್ಲಿ ಜಂಟಿ 2ನೇ ಸ್ಥಾನದಲ್ಲಿದ್ದಾರೆ. ಗಂಗೂಲಿ ಕೂಡ 49 ಟೆಸ್ಟ್ ಗಳಲ್ಲಿ ಭಾರತವನ್ನು ಮುನ್ನಡೆಸಿದ್ದು, 21ರಲ್ಲಿ ಜಯ ಕಂಡಿದ್ದಾರೆ. ಸಂಭಾವ್ಯ ತಂಡಗಳು
ಭಾರತ: ರೋಹಿತ್ ಶರ್ಮ, ಮಾಯಾಂಕ್ ಅಗರ್ವಾಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ, ಹನುಮ ವಿಹಾರಿ, ವೃದ್ಧಿಮಾನ್ ಸಾಹಾ, ಆರ್. ಅಶ್ವಿನ್, ರವೀಂದ್ರ ಜಡೇಜ, ಮೊಹಮ್ಮದ್ ಶಮಿ, ಇಶಾಂತ್ ಶರ್ಮ. ದಕ್ಷಿಣ ಆಫ್ರಿಕಾ: ಐಡನ್ ಮಾರ್ಕ್‌ರಮ್, ಡೀನ್ ಎಲ್ಗರ್, ಥಿಯುನಿಸ್ ಡಿ ಬ್ರುಯಿನ್, ಟೆಂಬ ಬವುಮ, ಫಾ ಡು ಪ್ಲೆಸಿಸ್ (ನಾಯಕ), ಕ್ವಿಂಟನ್ ಡಿ ಕಾಕ್, ಸೇನುರಣ್ ಮುತ್ತುಸ್ವಾಮಿ, ವೆರ್ನನ್ ಫಿಲಾಂಡರ್, ಕೇಶವ್ ಮಹಾರಾಜ್, ಲುಂಗಿ ಎನ್‌ಗಿಡಿ, ಕಾಗಿಸೊ ರಬಾಡ. ಆರಂಭ: 9.30 ಪ್ರಸಾರ: ಸ್ಟಾರ್ ನ್ಪೋರ್ಟ್ಸ್