Advertisement

ತಂಬಾಕು ಸೇವನೆ ಅಪಾಯಗಳು 

06:00 AM Jul 01, 2018 | |

ಹಿಂದಿನ ವಾರದಿಂದ- 2. ಅನಿಶ್ಚಿತತೆ ಹಂತ: ನಿಲ್ಲಿಸುವುದು ಖಚಿತವಾಗಿ ಹೇಳಲಾಗುವುದಿಲ್ಲ. ಈ ಹಂತದಲ್ಲಿರುವ ವ್ಯಕ್ತಿಗಳು ತಂಬಾಕು ಸೇವನೆಯನ್ನು ಬಿಡಬೇಕೆಂದು ಗಂಭೀರವಾಗಿ ಪರಿಗಣಿಸುತ್ತಿರುತ್ತಾರೆ; ಆದರೆ ಪೂರ್ತಿಯಾಗಿ ನಿರ್ಧಾರಕ್ಕೆ ಬರಲು ಹಿಂಜರಿಯುತ್ತಿರುತ್ತಾರೆ.

Advertisement

ಪರಿಹಾರ: ಮೇಲೆ ನಮೂದಿಸಿದ ಹಾಗೆ ವಿವರವಾಗಿ ಮಾಹಿತಿ ಕೊಡುವುದಲ್ಲದೆ, ಇದನ್ನು ಬಿಡಲು ಸಾಧ್ಯವೆಂದು ಮನವರಿಕೆ ಮಾಡಿಕೊಡಲಾಗುವುದು ಮತ್ತು ಇದಕ್ಕಾಗಿ ಕುಟುಂಬದ, ಸ್ನೇಹಿತರ, ಸಹೋದ್ಯೋಗಿಗಳ ಮತ್ತು ವೈದ್ಯರ ಸಹಾಯ ದೊರಕುವುದೆಂದು ಹೇಳಿಕೊಡಲಾಗುವುದು.

3. ಸಿದ್ಧರಾಗುವ ಹಂತ: ತಂಬಾಕು ನಿಲ್ಲಿಸಲು ಸಿದ್ಧರಾಗಿರುವುದು. ಈ ಹಂತದಲ್ಲಿರುವ ವ್ಯಕ್ತಿಯು ತಂಬಾಕು ಸೇವನೆ ನಿಲ್ಲಿಸಲು ಸಿದ್ಧನಾಗಿದ್ದು, ಕಳೆದ ಒಂದು ವರ್ಷದಲ್ಲಿ ಒಂದೆರಡು ಸಲ ಒಂದು ದಿನದ ಮಟ್ಟಿಗಾದರೂ ತಂಬಾಕು ಸೇವನೆ ನಿಲ್ಲಿಸಿರುತ್ತಾನೆ.

ಪರಿಹಾರ: ತಂಬಾಕು ಉಪಯೋಗಿ ಗಳು ಈ ಹಂತದಲ್ಲಿರುವುದು ಕಡಿಮೆ ಸಮಯಕ್ಕಾಗಿ ಮಾತ್ರ. ಈ ಹಂತವು ಚಿಕಿತ್ಸೆ ನೀಡುವುದಕ್ಕೆ ಅತ್ಯಂತ ಸೂಕ್ತ ಸಮಯವಾಗಿರುತ್ತದೆ. ಈ ಹಂತದಲ್ಲಿರುವವರು ಮೇಲೆ ನಮೂದಿಸಿದಂತೆ ತಂಬಾಕಿನ ಹಾನಿ-ಲಾಭಗಳ ಸರಿಯಾದ ಮಾಹಿತಿ ಪಡೆದು, ಇತರರ ಸಹಾಯ ಪಡೆದು, ಚಿಕಿತ್ಸೆ ಪಡೆದು ತಂಬಾಕು ಉಪಯೋಗ ನಿಲ್ಲಿಸಲು ಸಹಕರಿಸುತ್ತಾರೆ. ಇವುಗಳ ಬಗ್ಗೆ ಕೆಳಗೆ ವಿವರಿಸಲಾಗಿದೆ.

4. ಕಾರ್ಯಗತಗೊಳಿಸಿದ ಹಂತ: ತಂಬಾಕು ನಿಲ್ಲಿಸಿಯಾಗಿದೆ. ಈ ಹಂತದಲ್ಲಿರುವವರು ಸಾಧಾರಣವಾಗಿ ತಂಬಾಕು ನಿಲ್ಲಿಸಿ 6 ತಿಂಗಳುಗಳಾಗಿರುತ್ತವೆ. ಆದರೆ, ಈ ಹಂತದಲ್ಲಿ ತಂಬಾಕು ಪುನಃ ಆರಂಭಿಸುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ, ಅದೂ ಮೊದಲನೇ ವಾರದಲ್ಲಿ ತಂಬಾಕು ಪುನಃ ಆರಂಭಿಸುವ ಸಾಧ್ಯತೆ ಶೇ. 75ರಷ್ಟು ಇರುತ್ತದೆ. 
ಪರಿಹಾರ: ಈ ಹಂತದಲ್ಲಿ, ತಂಬಾಕು ನಿಲ್ಲಿಸದ ನಿರ್ಧಾರವನ್ನು ಕಾರ್ಯ ಗತಗೊಳಿಸಿ ದನ್ನು ಪ್ರೋತ್ಸಾಹಿಸಲಾಗುತ್ತದೆ . ಅದು ಮರುಕಳಿಸುವ ಸಾಧ್ಯತೆಗಳ ಬಗ್ಗೆ ಹೇಳಿ ಕೊಡಲಾಗುತ್ತದೆ. ಇದಲ್ಲದೇ, ಪುನಃ ಆರಂಭಿಸುವುದನ್ನು ತಡೆಗಟ್ಟಲು, ಆಸೆ ನಿಯಂತ್ರಿಸಲು ಕೇವಲ ವೈದ್ಯರ ದಲ್ಲದೇ, ಕುಟುಂಬದವರ, ಸ್ನೇಹಿತರ, ಸಹೋದ್ಯೋಗಿಗಳ ಸಹಾಯ ಹೇಗೆ ಪಡೆಯಬಹುದೆಂದು ತಿಳಿಸಿಕೊಡಲಾಗುತ್ತದೆ.

Advertisement

5. ನಿರ್ವಹಣಾ ಹಂತ: ನಿಲ್ಲಿಸಿಯಾಗಿ ಸುಮಾರು ಸಮಯವಾಗಿದೆ. ಈ ಹಂತದಲ್ಲಿರುವ ವ್ಯಕ್ತಿಯು ತಂಬಾಕು ಬಳಕೆ ನಿಲ್ಲಿಸಿ 6ಕ್ಕಿಂತ ಹೆಚ್ಚು ತಿಂಗಳು ಗಳಾಗಿರುತ್ತವೆ. ಸಮಯ ಕಳೆದಂತೆ ತಂಬಾಕು ಪುನಃ ಬಳಸುವ ಸಾಧ್ಯತೆಗಳು ಕಡಿಮೆಯಾಗುತ್ತಾ ಹೋಗುತ್ತವೆ. ಎರಡು ವರ್ಷಕ್ಕಿಂತ ಹೆಚ್ಚಿನ ಸಮಯ ತಂಬಾಕು ಉಪಯೋಗ ಬಿಟ್ಟವರಲ್ಲಿ ಕೇವಲ 4 ಪ್ರತಿಶತ ಜನ ಮಾತ್ರ ಮತ್ತೆ ತಂಬಾಕು ಸೇವನೆ ಆರಂಭಿಸುತ್ತಾರೆ.

ತಂಬಾಕು ಉಪಯೋಗ  ನಿಲ್ಲಿಸಲು ಸಹಾಯಕ  ಯೋಜನೆಗಳು
ವ್ಯಕ್ತಿಯೊಬ್ಬ ತಂಬಾಕು ನಿಲ್ಲಿಸಲು ನಿರ್ಧರಿಸಿದಾಗ/ ಸಿದ್ಧರಾಗಿರುವ ಹಂತದಲ್ಲಿ ಮನೋವೈದ್ಯರು ಈ ಕೆಳಗೆ ನಮೂದಿಸಿದ ರೀತಿಯಲ್ಲಿ ಚಿಕಿತ್ಸೆ ನೀಡುತ್ತಾರೆ:
ಮನೋವೈದ್ಯರು ತಂಬಾಕು ತ್ಯಜಿಸುವ ಯೋಜನೆ ನಿರೂಪಿಸಲು ಸಹಾಯ ಮಾಡುತ್ತಾರೆ. ಇದರಲ್ಲಿ ವಿವಿಧ ಹಂತಗಳಿವೆ.  ಮೊದಲನೆಯದಾಗಿ ತಂಬಾಕು ಬಿಡುವ ಸಿದ್ಧತೆಗೆ ಸಹಾಯ ಮಾಡಲಾಗುವುದು.
 – ನಂತರ ತಂಬಾಕು ಉಪಯೋಗ ಬಿಡುವ ದಿನ ನಿರ್ಧರಿಸುವುದು. ಸಾಧಾರಣವಾಗಿ ಈ ದಿನ ನಿರ್ಧರಿಸಿದ 2 ವಾರಗಳಲ್ಲಿರಬೇಕು.
– ಕುಟುಂಬದವರಿಗೆ, ಸ್ನೇಹಿತರಿಗೆ, ಸಹೋದ್ಯೋಗಿಗಳಿಗೆ ಇದರ ಬಗ್ಗೆ ತಿಳಿಸಿ ಅವರ ಸಹಾಯ ಪಡೆಯುವುದು.
– ನಿಲ್ಲಿಸಿದ ಮೊದಲ ಕೆಲವು ವಾರಗಳಲ್ಲಿ ಉಂಟಾಗಬಹುದಾದ ತೊಡಕುಗಳನ್ನು ನಿರೀಕ್ಷಿಸಿ ಅವುಗಳನ್ನು ಎದುರಿಸಲು ಪೂರ್ವಸಿದ್ಧತೆ ಮಾಡಿಕೊಳ್ಳುವುದು.
– ಸುತ್ತ-ಮುತ್ತಲಿನ ತಂಬಾಕು ಉತ್ಪನ್ನಗಳನ್ನು ತೆಗೆಯುವುದು.
– ತಂಬಾಕು ಉಪಯೋಗಿಸುತ್ತಿದ್ದ ಸ್ಥಳಗಳಿಂದ ದೂರವಿರುವುದು ಉದಾ: ಪಾನ್‌, ಬೀಡಾ ಅಂಗಡಿಗಳು, ಹೋಟೆಲ…, ಇತ್ಯಾದಿ.
– ಒಂದು ರೀತಿಯ ತಂಬಾಕು ನಿಲ್ಲಿಸಿ ಇನ್ನೊಂದನ್ನು ಪ್ರಾರಂಭಿಸುವುದು. ಉದಾ: ಸಿಗರೇಟ… ಬಿಟ್ಟು ಗುಟಾV ಪ್ರಾರಂಭಿಸುವುದು.

ಪ್ರಾಯೋಗಿಕ ಸಲಹೆಗಳನ್ನು (ಸಮಸ್ಯೆ ಬಗೆಹರಿಸಲು) ನೀಡಲಾಗುವುದು
– ಮುಂಚಿನ ಅನುಭವಗಳು: ಮುಂಚೆ ತಂಬಾಕು ಬಿಡಲು ಸಹಾಯಕವಾದ ಮತ್ತು ವಿಫ‌ಲವಾದ ಯೋಜನೆಗಳನ್ನು ಗುರುತಿಸುವುದು.
– ತಂಬಾಕು ಪುನಃ ಪ್ರಾರಂಭಿಸಲು ಪ್ರಚೋದಕಗಳನ್ನು ಗುರುತಿಸುವುದು ಮತ್ತು ಅವುಗಳನ್ನು ಎದುರಿಸುವ/ನಿವಾರಿಸುವ ಬಗ್ಗೆ ತರಬೇತಿ/ಸಲಹೆ ನೀಡಲಾಗುವುದು.
– ಮದ್ಯಪಾನ: ತಂಬಾಕು ನಿಲ್ಲಿಸಲು ನಿರ್ಧರಿಸಿದವರು ಮದ್ಯಪಾನ ಸಂಪೂರ್ಣವಾಗಿ ನಿಲ್ಲಿಸಬೇಕು ಅಥವಾ ಕಡಿಮೆ ಮಾಡಬೇಕು. ಇಲ್ಲವಾದರೆ, ಮದ್ಯಪಾನ ಮಾಡುವಾಗ ಮತ್ತೆ ತಂಬಾಕು ಉಪಯೋಗಿಸುವ ತವಕ ಶುರುವಾಗುತ್ತದೆ.
– ಇತರ ತಂಬಾಕು ಬಳಕೆದಾರರು: ಮನೆಯಲ್ಲಿ, ಸ್ನೇಹಿತರಲ್ಲಿ, ಸಹೋದ್ಯೋಗಿಗಳಲ್ಲಿ ತಂಬಾಕು ಬಳಕೆದಾರರಿ¨ªಾಗ ತಂಬಾಕು ಸೇವನೆ ನಿಲ್ಲಿಸುವುದು ಕಷ್ಟಕರವಾಗುತ್ತದೆ. ಹೀಗಾಗಿ ಅವರನ್ನು ಕೂಡ ನಿಲ್ಲಿಸಲು ಹೇಳಬಹುದು ಅಥವಾ ವ್ಯಕ್ತಿಯ ಎದುರು ಉಪಯೋಗಿಸಬಾರದು ಮತ್ತು ವ್ಯಕ್ತಿಗೆ ತಂಬಾಕು ಉಪಯೋಗಿಸುವಂತೆ ಆಹ್ವಾನ ನೀಡುವುದಾಗಲಿ/ಪ್ರಚೋದಿಸುವುದಾಗಲಿ ಮಾಡಬಾರದು. ಈ ಬಗ್ಗೆ ವ್ಯಕ್ತಿಯೇ ಆ ಎಲ್ಲ ಜನರಿಗೆ ಮುಂಚೆಯೇ ಹೇಳಿಟ್ಟಿರಬೇಕು.

– ಮುಂದಿನ ವಾರಕ್ಕೆ  

Advertisement

Udayavani is now on Telegram. Click here to join our channel and stay updated with the latest news.

Next