2021ರಲ್ಲಿ ಬಾಹ್ಯಾಕಾಶ ಕ್ಷೇತ್ರದಲ್ಲಿ ರಾಷ್ಟ್ರಗಳು ಹಲವು ಸಾಧನೆ ಮಾಡಿದ್ದವು. ಅದೇ ಮಾದರಿ ಪ್ರಸಕ್ತ ವರ್ಷವೂ ಮುಂದುವರಿಯುವ ಸಾಧ್ಯತೆಗಳು ಇವೆ. ಈ ಪೈಕಿ ಪ್ರಸಕ್ತ ವರ್ಷದ ಮೂರನೇ ತ್ತೈಮಾಸಿಕದಲ್ಲಿ ಕೈಗೆತ್ತಿಕೊಳ್ಳಲಿರುವ ಇಸ್ರೋದ ಚಂದ್ರಯಾನ-3 ಕೂಡ ಒಂದು. ಖಾಸಗಿ ಕಂಪೆನಿಗಳೂ ವ್ಯೋಮ ಯಾತ್ರೆ ಮುಂದುವರಿಸುವುದು ನಿಶ್ಚಿತ.
ಭಾರತ
-ಪ್ರಸಕ್ತ ವರ್ಷದ ಮೊದಲ ಅವಧಿಯಲ್ಲಿ ಮಾನವ ಸಹಿತ ಗಗನಯಾತ್ರಿಗಳನ್ನು ಕಳುಹಿಸುವ ಯೋಜನೆ
-ಚಂದ್ರಯಾನ-3ರ ಭಾಗವಾಗಿ ಲ್ಯಾಂಡರ್ ಮತ್ತು ರೋವರ್ ಅನ್ನು ಚಂದ್ರನಲ್ಲಿ ಕಳುಹಿಸುವ ಯೋಜನೆ
-ಸೂರ್ಯನ ಅಧ್ಯಯನದ ಬಗೆಗಿನ ಮೊದಲ ಅಧ್ಯಯನ ನೌಕೆ ಆದಿತ್ಯ ಎಲ್-1 ನಭಕ್ಕೆ
ಅಮೆರಿಕ
-ಚಂದ್ರನ ಅಧ್ಯಯನಕ್ಕಾಗಿ ನಾಸಾದ ಆರ್ಟೆಮೆಸ್ ಯೋಜನೆಯ ಅನ್ವಯ ಮಾರ್ಚ್ ಒಳಗಾಗಿ ಗಗನ ನೌಕೆ ಕಳುಹಿಸುವ ಯೋಜನೆ
-ಪ್ರಯೋಗಕ್ಕಾಗಿ ಗಗನ ನೌಕೆಯನ್ನು ಚಂದ್ರನಲ್ಲಿ ಕಳುಹಿಸಿ ಅದನ್ನು ಮತ್ತೆ -ಕರೆಯಿಸಿಕೊಳ್ಳಲಾಗುತ್ತದೆ
-ಮೂರು ರೋಬೋಟಿಕ್ ಲ್ಯಾಂಡರ್‌ಗಳನ್ನು ಚಂದ್ರನಲ್ಲಿ ಕಳುಹಿಸುವ ಸಾಧ್ಯತೆ.
ಇದನ್ನೂ ಓದಿ:ಪ್ಯಾಂಗಾಂಗ್ ಸರೋವರಕ್ಕೆ ಸೇತುವೆ ನಿರ್ಮಿಸುತ್ತಿದೆ ಚೀನಾ! ಉಪಗ್ರಹ ಚಿತ್ರದಿಂದ ಸ್ಪಷ್ಟ
Related Articles
ದಕ್ಷಿಣ ಕೊರಿಯಾ
ಪೆಟ್ಟಿಗೆ ಆಕಾರದ ಉಪಗ್ರಹ “ಕೊರಿಯಾ ಪಾಥ್‌ಫೈಂಡರ್’ ಅನ್ನು ಆಗಸ್ಟ್‌ನಲ್ಲಿ ಉಡಾಯಿಸಲಾಗುತ್ತದೆ. ಒಂದು ವರ್ಷಗಳ ಕಾಲ ಅದು ಚಂದ್ರನ ಮೇಲ್ಮೆ„ ಅಧ್ಯಯನ, ರಾಸಾಯನಿಕ ಸಂಯೋಜನೆಯ ಬಗ್ಗೆ ಅಧ್ಯಯನ ನಡೆಸಲಿದೆ.
ರಷ್ಯಾ
ಈ ವರ್ಷದ ಮಧ್ಯಭಾಗದಲ್ಲಿ ಲೂನಾ-25 ಎಂಬ ಗಗನ ನೌಕೆಯನ್ನು ಕಳುಹಿಸಲಾಗುತ್ತದೆ. ಅದು ಚಂದ್ರನಲ್ಲಿರುವ ಮಣ್ಣಿನ ಬಗ್ಗೆ ಅಧ್ಯಯನ ನಡೆಸಲಿದೆ. ಈ ಯೋಜನೆ ಚಂದ್ರನಲ್ಲಿಗೆ ರಷ್ಯಾ ಮುಂದಿನ ವರ್ಷಗಳಲ್ಲಿ ನಡೆಸಲಿರುವ ಸಂಶೋಧನೆಗೂ ನೆರವಾಗಲಿದೆ.