Advertisement

14 ವರ್ಷಗಳಿಂದ ವಿಮಾನ ನಿಲ್ದಾಣದಲ್ಲೇ ಈತನ ವಾಸ!

09:46 PM Mar 31, 2022 | Team Udayavani |

ನವದೆಹಲಿ: ಚೀನಾದ ಬೀಜಿಂಗ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 14 ವರ್ಷಗಳಿಂದ ವಾಸ ಮಾಡುತ್ತಿರುವ ವ್ಯಕ್ತಿಯೊಬ್ಬರಿಗೆ ಈಗ ಮನೆಗೆ ಹೋಗಲು ಮನಸ್ಸೇ ಇಲ್ಲ! ವೀ ಜಿಯಾಂಗುವೊ ಎಂಬ ವ್ಯಕ್ತಿ 2008ರಲ್ಲಿ ವಿಮಾನ ನಿಲ್ದಾಣದ 2ನೇ ಟರ್ಮಿನಲ್‌ನಲ್ಲಿ ವಾಸ ಆರಂಭಿಸಿದ್ದರು. ಅಲ್ಲಿಂದ ಇಲ್ಲಿಯವರೆಗೆ ಭದ್ರತಾ ಸಿಬ್ಬಂದಿಯಾಗಲೀ, ಸ್ವಚ್ಛತಾ ಸಿಬ್ಬಂದಿಯಾಗಲೀ ಅವರನ್ನು ಹೊರಗೆ ಹಾಕಿಲ್ಲ (ಒಂದು ಬಾರಿ ಹೊರತುಪಡಿಸಿ)!

Advertisement

ವಸ್ತುಸ್ಥಿತಿಯಲ್ಲಿ ಅವರ ಮನೆ ವಿಮಾನ ನಿಲ್ದಾಣದಿಂದ 20 ಕಿ.ಮೀ. ದೂರದಲ್ಲಿದೆ. ಕುಡಿಯಬಾರದು, ಸಿಗರೇಟು ಸೇದಬಾರದು, ಹಾಗಿದ್ದರೆ ಮಾತ್ರ ಜೊತೆಯಲ್ಲಿರಬೇಕು. ಇಲ್ಲವೇ ಸರ್ಕಾರ ತಿಂಗಳಿಗೆ ನೀಡುವ ಅಷ್ಟೂ ಆರ್ಥಿಕ ನೆರವನ್ನು ಮನೆಗೇ ನೀಡಬೇಕು ಎಂದು ಕುಟುಂಬಸ್ಥರು ಹೇಳಿದ್ದಾರಂತೆ. ಕುಡಿಯುವುದಕ್ಕೆ ಅವಕಾಶವಿಲ್ಲದಿದ್ದ ಮೇಲೆ ಮನೆಯಲ್ಲಿದ್ದು ಏನು ಮಾಡಬೇಕೆಂದು ವಿಮಾನ ನಿಲ್ದಾಣದಲ್ಲೇ ವಾಸವಾಗಿದ್ದಾರೆ. ಇವರದ್ದು ಅನಧಿಕೃತ ವಾಸ. ಇವರಂತೆಯೇ ಇನ್ನೂ ಐದಾರು ಮಂದಿ ಅಲ್ಲೇ ಇದ್ದಾರೆ!

ಪ್ರಖ್ಯಾತ ಹಾಲಿವುಡ್‌ ನಿರ್ದೇಶಕ ಸ್ಟೀವನ್‌ ಸ್ಪಿಲ್‌ಬರ್ಗ್‌ ಅವರು ದಿ ಟರ್ಮಿನಲ್‌ ಸಿನಿಮಾದಲ್ಲಿ ವಿಮಾನ ನಿಲ್ದಾಣದಲ್ಲೇ ಅನಿವಾರ್ಯವಾಗಿ ಉಳಿದುಕೊಂಡಿದ್ದ ವ್ಯಕ್ತಿಯೊಬ್ಬನನ್ನು ಕುರಿತು ಸಿನಿಮಾ ಮಾಡಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

Advertisement

Udayavani is now on Telegram. Click here to join our channel and stay updated with the latest news.

Next