Advertisement

ಕಲೆಯ ಕಿರಿಕಿರಿಯಿಂದ ಪಾರಾಗಲು

05:54 PM Oct 29, 2019 | Team Udayavani |

ಕಲೆ ಒಳ್ಳೆಯದು ಅಂತ ಜಾಹೀರಾತಿನಲ್ಲಿ ಹೇಳಿದರೂ, ಯಾರೂ ಅದನ್ನು ಇಷ್ಟಪಡುವುದಿಲ್ಲ. ತಿಕ್ಕಿ ತಿಕ್ಕಿ ತೊಳೆದು, ಕೈ ಸೋತರೂ ಕೆಲವೊಮ್ಮೆ ಕಲೆ ಮಾಯವಾಗುವುದಿಲ್ಲ. ಅದರಲ್ಲೂ, ಲಿಪ್‌ಸ್ಟಿಕ್‌ ಕಲೆ ಇದೆಯಲ್ಲ; ಅದು ಮಹಾನ್‌ ಹಠಮಾರಿ. ಟವೆಲ್‌, ಕರ್ಚಿಫ್, ಟಾಪ್‌ ಮೇಲೆ ಅಚ್ಚೊತ್ತಿದಂತೆ ಉಳಿದುಬಿಡುವ ಕಲೆಯನ್ನು ಹೋಗಲಾಡಿಸುವುದು ಬಲು ಕಷ್ಟ. ಆಗ ಏನು ಮಾಡ್ಬೇಕು ಗೊತ್ತಾ?

Advertisement

-ನೀರಿಗೆ ಎರಡು ಚಮಚ ಲಿಕ್ವಿಡ್‌ ಡಿಟರ್ಜೆಂಟ್‌ ಹಾಕಿ, ಅದರಲ್ಲಿ ಬಟ್ಟೆಯನ್ನು ನೆನೆಸಿ. ಇಪ್ಪತ್ತು ನಿಮಿಷದ ನಂತರ, ಉಗುರು ಬೆಚ್ಚಗಿನ ನೀರಿನಲ್ಲಿ ಬಟ್ಟೆ ತೊಳೆಯಿರಿ.
– ಒಂದು ಶುದ್ಧ ಬಟ್ಟೆಯ ತುಣುಕನ್ನು ಆಲ್ಕೋಹಾಲ್‌ನಲ್ಲಿ ಅದ್ದಿ, ಕಲೆ ಇರುವ ಜಾಗದ ಮೇಲೆ ಹರಡಿ, ಮೃದುವಾಗಿ ಒತ್ತಿ. ಕಲೆ ಮಾಯವಾದ ನಂತರ, ಬಟ್ಟೆಯನ್ನು ತಣ್ಣೀರಿನಲ್ಲಿ ತೊಳೆೆಯಿರಿ.
– ಬಟ್ಟೆಯ ಮೇಲೆ ಕಲೆ ಇರುವ ಜಾಗಕ್ಕೆ ಹೇರ್‌ಸ್ಪ್ರೆ ಮಾಡಿ, 10 ನಿಮಿಷದ ನಂತರ ಒದ್ದೆ ಬಟ್ಟೆಯಿಂದ ಆ ಜಾಗವನ್ನು ಒರೆಸಿ, ತಣ್ಣೀರಿನಲ್ಲಿ ತೊಳೆಯಿರಿ.
– ಕಲೆ ಇರುವ ಜಾಗಕ್ಕೆ ಟೂತ್‌ಪೇಸ್ಟ್‌ ಅನ್ನು ಹಚ್ಚಿ ಮೃದುವಾಗಿ ಉಜ್ಜಿ. ಕಲೆ ತೊಲಗಿದ ನಂತರ, ಬಟ್ಟೆಯನ್ನು ತಣ್ಣೀರಿನಲ್ಲಿ ತೊಳೆದು, ಡ್ರೈಯರ್‌ನಿಂದ ಒಣಗಿಸಿ.
– ಜಿಡ್ಡು ಜಿಡ್ಡಾಗಿರುವ ಲಿಪ್‌ಸ್ಟಿಕ್‌ನಿಂದ ಬಟ್ಟೆ ಮೇಲೆ ಕಲೆಯಾದರೆ, ಗ್ರೀಸ್‌ ರಿಮೂವ್‌ ಮಾಡುವ ವಸ್ತುಗಳನ್ನು ಬಳಸಿಯೂ ಕಲೆ ತೆಗೆಯಬಹುದು. ಪೆಟ್ರೋಲಿಯಂ ಜೆಲ್ಲಿ, ಶೇವಿಂಗ್‌ ಕ್ರೀಂ, ಅಮೋನಿಯವನ್ನು ಕೂಡಾ ಬಳಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next