ಜನರೂ ಸಹಕರಿಸಿದರೆ ಸೋಂಕು ನಿಯಂತ್ರಣ ಕಷ್ಟದ ಕೆಲಸವಲ್ಲ. ಸ್ಥಳೀಯ ಸಂಸ್ಥೆಗಳಿಂದ ಆರಂಭಿಸಿ ಶೈಕ್ಷಣಿಕ ಸಂಸ್ಥೆಗಳವರೆಗೂ ಸಹಕಾರ ಸಂಘಗಳಿಂದ ಹಿಡಿದು ಸಮುದಾಯ ಸಂಘಟನೆಗಳ ವರೆಗೆ ಎಲ್ಲರೂ ಈ ಅಭಿಯಾನದಲ್ಲಿ
ಪಾಲ್ಗೊಳ್ಳಬೇಕಿದೆ.
Advertisement
ಇವಿಷ್ಟು ನಾವು ಮಾಡೋಣ– ಸೋಂಕಿನ ಲಕ್ಷಣ ಕಂಡುಬಂದ ದಿನವೇ ಪರೀಕ್ಷೆಗೆ ಒಳಪಟ್ಟು ಐಸೊಲೇಶನ್‌ಗೆ ಒಳಗಾಗಬೇಕು. ಮನೆ ಐಸೊಲೇಶನ್ ಕಷ್ಟವೆಂದಿದ್ದರೆ ಕೇರ್ ಸೆಂಟರ್‌ಗೆ ದಾಖಲಾಗಬೇಕು. ಪ್ರಾಥಮಿಕ ಸಂಪರ್ಕಿತರನ್ನು ತಪಾಸಣೆಗೆ ಒಳಪಡಲು ಸೂಚಿಸಬೇಕು.
Related Articles
Advertisement
– ಮೊದಲು ಮೆಡಿಕಲ್ ಶಾಪ್‌ಗ್ಳಿಂದ ಔಷಧ ತರಿಸಿ ಕೊನೇ ಹಂತ ದಲ್ಲಿ ಆಸ್ಪತ್ರೆಗೆ ಧಾವಿಸುವುದರಿಂದ ಪರಿಸ್ಥಿತಿ ಉಲ್ಬಣಿಸುತ್ತದೆ. ಇಷ್ಟರಲ್ಲಿ ಕನಿಷ್ಠ 40 ಜನರಿಗೆ ಸೋಂಕು ಪ್ರಸಾರವಾಗಿರುತ್ತದೆ. ಲಕ್ಷಣ ಗೊತ್ತಾದ ಕೂಡಲೇ ಪರೀಕ್ಷೆಗೆ ಮುಂದಾಗೋಣ.**
ಇವುಗಳನ್ನು ಜಿಲ್ಲಾಡಳಿತ ಮಾಡಬೇಕು
1. ಪರೀಕ್ಷೆ ಹೆಚ್ಚಿಸಿದರೆ ಮಾತ್ರ ಸೋಂಕಿನ ಸರಪಣಿ ಕಡಿಯಲು ಸಾಧ್ಯ. ಅದಕ್ಕೆ ಹೆಚ್ಚು ಒತ್ತು ನೀಡಬೇಕು.
2. ಲಸಿಕೆ ಅಭಿಯಾನಕ್ಕೆ ಮತ್ತಷ್ಟು ವೇಗ ನೀಡಬೇಕು. ನಿರ್ದೇಶಿತ ವಯಸ್ಸಿನವರಿಗೆ ಲಸಿಕೆಯನ್ನು ಆದ್ಯತೆಯಿಂದ ಒದಗಿಸಬೇಕು. ಪರಿಸ್ಥಿತಿಯನ್ನು ರಾಜ್ಯ, ಕೇಂದ್ರ ಸರಕಾರಕ್ಕೆ ಮನದಟ್ಟು ಮಾಡಿ ಹೆಚ್ಚು ಲಸಿಕೆ ತರಿಸಿಕೊಳ್ಳಬೇಕು.
3. ಮತ್ತಷ್ಟು ಕಡೆಗಳಲ್ಲಿ ಕೋವಿಡ್ ಕೇರ್ ಸೆಂಟರ್ ತೆರೆಯುವುದು.
4. ಹಿರಿಯ ನಾಗರಿಕರ ಆರೋಗ್ಯದ ಬಗ್ಗೆ ವಿಶೇಷ ನಿಗಾ ಇರಿಸುವುದು.
5. ಗ್ರಾ.ಪಂ. ಮಟ್ಟದಲ್ಲೇ ಕೊರೊನಾ ನಿಯಂತ್ರಣಕ್ಕೆ ಪ್ರತ್ಯೇಕ ತಂಡ, ಕಾರ್ಯಪಡೆ ಸಬಲಗೊಳಿಸುವುದು. ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರ ಪಡೆಯುವುದು.