Advertisement

200 ಹೊಟೇಲ್‌ಗ‌ಳಿಗೆ ವಂಚನೆ ; ಆರೋಪಿಯನ್ನು ಬಂಧಿಸಿದ ಕೊಲ್ಲಂ ಪೊಲೀಸರು

12:54 AM Dec 26, 2022 | Team Udayavani |

ತಿರುವನಂತಪುರ: ಪಂಚತಾರಾ ಹೋಟೆಲ್‌ಗ‌ಳಲ್ಲಿ ಕೊಠಡಿ ಬಿಲ್‌ ಮತ್ತು ಆಹಾರ ಸೇವಿಸಿದ ಬಿಲ್‌ಗ‌ಳನ್ನು ಪಾವತಿಸದೆ ಪರಾರಿ ಯಾಗುತ್ತಿದ್ದ ವಂಚಕನನ್ನು ಕೇರಳದ ಕೊಲ್ಲಂ ಪೊಲೀಸರು ರವಿವಾರ ಬಂಧಿಸಿದ್ದಾರೆ.

Advertisement

ತಮಿಳುನಾಡಿನ ತಿರುವನ್ನೇಲಿ ಮೂಲದ ವಿನ್ಸೆಂಟ್‌ ಜಾನ್‌(63) ಬಂಧಿತ ಆರೋಪಿಯಾಗಿದ್ದು, ಈತ ದೇಶಾದ್ಯಂತ 200ಕ್ಕೂ ಹೆಚ್ಚು ಪಂಚತಾರಾ ಹೊಟೇಲ್‌ಗ‌ಳಿಗೆ ಪಂಗ ನಾಮ ಹಾಕಿದ್ದಾನೆ. ಅಲ್ಲದೇ ಒಂದು ಹೊಟೇಲ್‌ನಲ್ಲಿ ಲ್ಯಾಪ್‌ಟಾಪ್‌ ಪಡೆದು ಹಿಂದಿರುಗಿಸದೇ ಪರಾರಿ ಯಾಗಿದ್ದ ಈತನ ವಿರುದ್ಧ 200ಕ್ಕೂ ಹೆಚ್ಚು ದೂರುಗಳು ದಾಖಲಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next