Advertisement
27 ಜಿಲ್ಲೆಗಳನ್ನು ಹೊರತಾಗಿ ಉಳಿದ ಇತರೆ 11 ಜಿಲ್ಲೆಗಳಲ್ಲಿ ಕೋವಿಡ್ ಸೋಂಕಿನ ಹೊಸ ಪ್ರಕರಣಗಳಲ್ಲಿ ಇಳಿಮುಖ ಕಂಡುಬಂದಿಲ್ಲವಾದ್ದರಿಂದ ಕಠಿಣ ಲಾಕ್ ಡೌನ್ ಮುಂದುವರಿಯಲಿದೆ ಎಂದು ಸ್ಟ್ಯಾಲಿನ್ ನೇತೃತ್ವದ ಸರ್ಕಾರ ಮಾಹಿತಿ ನೀಡಿದೆ.
Related Articles
Advertisement
ಮೊದಲ ಹಂತದ ಅನ್ ಲಾಕ್ ಘೋಷಣೆ ಮಾಡಿರುವ ತಮಿಳು ನಾಡು ಸರ್ಕಾರ, ಸಿಹಿ ಮತ್ತು ಖಾರದ ತಿನಿಸು ಮಾರುವ ಅಂಗಡಿಗಳಿಗೆ ಬೆಳಿಗ್ಗೆ 8 ರಿಂದ ಮಧ್ಯಾಹ್ನ 2ರವರೆಗೆ ತೆರೆಯಲು ಅನುಮತಿ ನೀಡಿದ್ದು, ಕೇವಲ ಪಾರ್ಸಲ್ ಒಯ್ಯಬಹುದು ಎಂದು ತಿಳಿಸಲಾಗಿದೆ.
ತಮಿಳುನಾಡಿನಲ್ಲಿ ಟೀ ಶಾಪ್‌ಗಳು ಅಧಿಕ ಸಂಖ್ಯೆಯಲ್ಲಿದ್ದು, ಲಾಕ್ ಡೌನ್ ಕಾರಣ ಮೇ 10ರಿಂದ ಬಂದ್ ಆಗಿವೆ. ಉಳಿದಂತೆ, ರೆಸ್ಟೋರಂಟ್ ಗಳು ಮತ್ತು ಬೇಕರಿಗಳು ಈಗಾಗಲೇ ವಹಿವಾಟು ನಡೆಸುತ್ತಿವೆ. ಸರ್ಕಾರಿ ಸೇವೆ ನಿರೀಕ್ಷಿಸುತ್ತಿರುವ ಜನರಿಗೆ ನೆರವಾಗಲು, ಇ–ಸರ್ವೀಸ್ ಸೆಂಟರ್ ತೆರೆಯಲು ಅನುಮತಿಸಲಾಗಿದೆ.
ಇದನ್ನೂ ಓದಿ : ಬೆಳಕು, ಕತ್ತಲೆಗಳ ಘರ್ಷಣೆಯಿಂದ ಹೊರಬಂದ ಹಾಡು ‘ಮರಳಿ ಬಾ ಮನ್ವಂತರವೇ ಕಂಬನಿಗಳ ಬಳಿಗೆ..