Advertisement

ಟಿಎಂಸಿ ಸಂಸದೆ ನುಸ್ರತ್‌ ಪ್ರಮಾಣ ಸ್ವೀಕರಿಸಿಲ್ಲವೇಕೆ?

09:12 AM Jun 22, 2019 | Team Udayavani |

ಹೊಸದಿಲ್ಲಿ: ತೃಣಮೂಲ ಕಾಂಗ್ರೆಸ್‌ನಿಂದ ಮೊದಲ ಬಾರಿಗೆ ಸಂಸದೆಯಾಗಿ ಆಯ್ಕೆಯಾಗಿರುವ ಬಂಗಾಳಿ ಚಿತ್ರನಟಿ ನುಸ್ರತ್‌ ಜಹಾನ್‌ ಅವರು ಇನ್ನೂ ಲೋಕಸಭೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿಲ್ಲವೇಕೆ ಎಂಬ ಪ್ರಶ್ನೆಗ ಈಗ ಉತ್ತರ ದೊರೆತಿದೆ. ಸಂಸದೆ ನುಸ್ರತ್‌ ಅವರು ಬುಧವಾರ ಟರ್ಕಿಯಲ್ಲಿ ಉದ್ಯಮಿ ನಿಖೀಲ್‌ ಜೈನ್‌ರನ್ನು ವಿವಾಹವಾಗಿದ್ದಾರೆ. ಗುರುವಾರ ಈ ಕುರಿತು ಅವರು ಟ್ವೀಟ್‌ನಲ್ಲಿ ಮಾಹಿತಿ ನೀಡಿದಾಗಲೇ, ಕಲಾಪಕ್ಕೆ ಅವರು ಗೈರಾಗಲು ಏನು ಕಾರಣ ಎಂಬುದು ಗೊತ್ತಾಗಿದೆ. ನುಸ್ರತ್‌ರ ಸ್ನೇಹಿತೆ, ಮತ್ತೂಬ್ಬ ಸಂಸದೆ ಮಿಮಿ ಚಕ್ರವರ್ತಿ ಕೂಡ ಟರ್ಕಿಯ ವಿವಾಹದಲ್ಲಿ ಭಾಗಿಯಾಗಿದ್ದು, ಅವರು ಕೂಡ ಇನ್ನೂ ಪ್ರಮಾಣ ಸ್ವೀಕರಿಸಿಲ್ಲ.

Advertisement
Advertisement

Udayavani is now on Telegram. Click here to join our channel and stay updated with the latest news.

Next