ನವದೆಹಲಿ : ಶನಿವಾರ (ಜ. 23,) ಕೋಲ್ಕತ್ತಾದ ವಿಕ್ಟೋರಿಯಾ ಮೆಮೋರಿಯಲ್ ಹಾಲ್ ನಲ್ಲಿ ನಡೆದ ನೇತಾಜಿ ಸುಭಾಸ್ ಚಂದ್ರ ಬೋಸ್ ಅವರ 125 ನೇ ಜನ್ಮದಿನದ ಅಂಗವಾಗಿ ನಡೆದ ‘ಪರಾಕ್ರಮ್ ದಿವಸ್’ ಕಾರ್ಯಕ್ರಮವನ್ನು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಿರಾಕರಿಸಿದ ಕೆಲವೇ ಗಂಟೆಗಳ ನಂತರ ಪ್ರೇಕ್ಷಕರು ‘ಜೈ ಶ್ರೀ ರಾಮ್’ ಘೋಷಣೆ ಕೂಗಿರುವುದನ್ನು ತೃಣಮೂಲ ಕಾಂಗ್ರೆಸ್ ನ ಲೋಕಸಭಾ ಸಂಸದೆ ನುಸ್ರತ್ ಜಹಾನ್ ತೀವ್ರವಾಗಿ ಖಂಡಿಸಿದ್ದಾರೆ.
ಇದನ್ನೂ ಓದಿ : ಜ.27 ಕ್ಕೆ ಶ್ರೀಲಂಕಾ ತಲುಪಲಿದೆ ಭಾರತದ ಕೋವಿಡ್ ಲಸಿಕೆ
“ರಾಮ್ ಕಾ ನಾಮ್ ಗಲೆ ಲಗಾ ಕೆ ಬೊಲೊ ನಾ ಕೆ ಗೇಲ್ ದಬಕೆ… ಸರ್ಕಾರಿ ಕಾರ್ಯಕ್ರಮವಾಗಿರುವ ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಸ್ ಚಂದ್ರ ಬೋಸ್ ಅವರ 125 ನೇ ಜನ್ಮದಿನಾಚರಣೆಯಂದು ರಾಜಕೀಯ ಮತ್ತು ಧಾರ್ಮಿಕ ಘೋಷಣೆಗಳನ್ನು ಕೂಗಿರುವುದನ್ನು ನಾನು ಬಲವಾಗಿ ಖಂಡಿಸುತ್ತೇನೆ” ಎಂದು ಬಸಿರ್ಹಾಟ್ ನ ಸಂಸದೆ ನುಸ್ರತ್ ತಮ್ಮ ಟ್ವೀಟರ್ ನಲ್ಲಿ ಬರೆದುಕೊಂಡಿದ್ದಾರೆ.
‘ಪರಾಕ್ರಮ್ ದಿವಸ್’ ಕಾರ್ಯಕ್ರಮದಲ್ಲಿ, ಪ್ರಧಾನಿ ಮೋದಿ ಭಾಷಣಕ್ಕೆ ಮುಂದಾದಾಗ, ಅಲ್ಲಿದ್ದ ಪ್ರೇಕ್ಷಕರು ‘ಜೈ ಶ್ರೀ ರಾಮ್’ ಘೋಷಣೆಯನ್ನು ಕೂಗಿರುವುದು, ವೇದಿಕೆಯಲ್ಲಿದ್ದ ಮಮತಾ ಬ್ಯಾನರ್ಜಿಯವರನ್ನು ಅಸಮಾಧಾನಗೊಳಿಸಿತು. ಸರ್ಕಾರಿ ಸಮಾರಂಭಗಳಲ್ಲಿ ರಾಜಕೀಯ ಮತ್ತು ಧಾರ್ಮಿಕ ಘೋಷಣೆಗಳನ್ನು ಕೂಗಿರಿವುದನ್ನು ಅವರು ಆಕ್ಷೇಪಿಸಿದ್ದರು.
ಇದನ್ನೂ ಓದಿ : ಟ್ರೇಲರ್‌ನಲ್ಲಿ ‘ರಾಮಾರ್ಜುನ’ ಝಲಕ್: ಜ.29ಕ್ಕೆ ಥಿಯೇಟರ್‌ನಲ್ಲಿ ದರ್ಶನ