Advertisement

ತಿರುಷ್ಕಾಮಿನಿ ಅಜೇಯ ಶತಕ ವನಿತೆಯರಿಗೆ ಹ್ಯಾಟ್ರಿಕ್‌ ಜಯ

03:45 AM Feb 11, 2017 | Team Udayavani |

ಕೊಲಂಬೊ: ವನಿತಾ ವಿಶ್ವಕಪ್‌ ಅರ್ಹತಾ ಪಂದ್ಯಾವಳಿಯಲ್ಲಿ ಭಾರತ ಗೆಲುವಿನ ಹ್ಯಾಟ್ರಿಕ್‌ ಸಾಧಿಸಿದೆ. ಶುಕ್ರವಾರ ಪಂದ್ಯದಲ್ಲಿ ಅಯರ್‌ಲ್ಯಾಂಡನ್ನು 125 ರನ್ನುಗಳಿಂದ ಮಣಿಸಿ ಅಜೇಯ ಅಭಿಯಾನ ಮುಂದುವರಿಸಿದೆ.

Advertisement

ಎಡಗೈ ಆರಂಭಿಕ ಆಟಗಾರ್ತಿ ತಿರುಷ್ಕಾಮಿನಿ ಬಾರಿಸಿದ ಅಜೇಯ ಶತಕ, ಮತ್ತೋರ್ವ ಓಪನರ್‌ ದೀಪ್ತಿ ಶರ್ಮ ಅವರ 89 ರನ್‌ ಪರಾಕ್ರಮ, ಇವರಿಬ್ಬರು ಮೊದಲ ವಿಕೆಟಿಗೆ ಪೇರಿಸಿದ 174 ರನ್‌ ನೆರವಿನಿಂದ ಭಾರತ 50 ಓವರ್‌ಗಳಲ್ಲಿ ಎರಡೇ ವಿಕೆಟಿಗೆ 250 ರನ್‌ ಪೇರಿಸಿತು. ಜವಾಬಿತ್ತ ಅಯರ್‌ಲ್ಯಾಂಡ್‌ 49.1 ಓವರ್‌ಗಳಲ್ಲಿ ಇದರರ್ಧದಷ್ಟು ಮೊತ್ತಕ್ಕೆ (125) ಆಲೌಟ್‌ ಆಯಿತು.

ತಿರುಷ್ಕಾಮಿನಿ 146 ಎಸೆತಗಳ ನೆರವಿನಿಂದ 113 ರನ್‌ ಬಾರಿಸಿದ್ದು ಭಾರತದ ಸರದಿಯ ಆಕರ್ಷಣೆಯಾಗಿತ್ತು. ಸಿಡಿಸಿದ್ದು 11 ಬೌಂಡರಿ, 4 ಸಿಕ್ಸರ್‌. ಇದು ಅವರ 3ನೇ ಶತಕ. ಜೀವನಶ್ರೇಷ್ಠ ಗಳಿಕೆಯನ್ನು ಸರಿದೂಗಿಸಿದ ಸಾಧನೆಯೂ ಆಗಿದೆ. ದೀಪ್ತಿ ಶರ್ಮ ಅವರ 89 ರನ್‌ 128 ಎಸೆತಗಳಿಂದ ಬಂತು (10 ಬೌಂಡರಿ, 1 ಸಿಕ್ಸರ್‌).

ಭಾರತದ ಬೌಲಿಂಗ್‌ ಸರದಿಯಲ್ಲಿ ಮಿಂಚಿದ ಪೂನಂ ಯಾದವ್‌ 30 ರನ್ನಿಗೆ 3 ವಿಕೆಟ್‌ ಕಿತ್ತರು. ಶಿಖಾ ಪಾಂಡೆ, ಏಕ್ತಾ ಬಿಷ್ಟ್, ದೇವಿಕಾ ವೈದ್ಯ ತಲಾ 2 ವಿಕೆಟ್‌ ಉರುಳಿಸಿದರು.ಹಿಂದಿನ ಪಂದ್ಯಗಳಲ್ಲಿ ಶ್ರೀಲಂಕಾ ಹಾಗೂ ಥಾಯ್ಲೆಂಡ್‌ ವಿರುದ್ಧ ಜಯಿಸಿದ ಭಾರತ, ಫೆ. 13ರಂದು ಜಿಂಬಾಬ್ವೆಯನ್ನು ಎದುರಿಸಲಿದೆ.

Advertisement

Udayavani is now on Telegram. Click here to join our channel and stay updated with the latest news.

Next