Advertisement
ರೇಣಿಗುಂಟಾ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಕೂಡಲೇ ಸಚಿವರೊಂದಿಗೆ ಎರಡು ಪ್ರತ್ಯೇಕ ಕಾಲ್ತುಳಿತದ ಘಟನೆಗಳು ನಡೆದ ವಿಷ್ಣು ನಿವಾಸ ಮತ್ತು ಪದ್ಮಾವತಿ ಪಾರ್ಕ್ ಗೆ ತೆರಳಿ ಸಿಎಂ ನಾಯ್ಡು ಪರಿಶೀಲನೆ ನಡೆಸಿದರು.
Related Articles
Advertisement
ಕಾಲ್ತುಳಿತದಲ್ಲಿ ಒಟ್ಟು 48 ಮಂದಿ ಗಾಯಗೊಂಡಿದ್ದು, ಅವರಲ್ಲಿ ಕೆಲವರನ್ನು ಎಸ್ವಿಆರ್ ರುಯಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಉಳಿದವರನ್ನು SVIMS ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಪದ್ಮಾವತಿ ಪಾರ್ಕ್ ಮತ್ತು ವಿಷ್ಣು ನಿವಾಸದಲ್ಲಿ ಕಾಲ್ತುಳಿತಕ್ಕೆ ಸಂಬಂಧಿಸಿದಂತೆ ಪೊಲೀಸರು ಎರಡು ಪ್ರತ್ಯೇಕ ಅಸಹಜ ಸಾ*ವುಗಳ ಪ್ರಕರಣಗಳನ್ನು ದಾಖಲಿಸಿದ್ದಾರೆ.
ತಿರುಪತಿ ಜಿಲ್ಲಾ ಉಸ್ತುವಾರಿ, ಕಂದಾಯ ಸಚಿವ ಅನಗಣಿ ಸತ್ಯ ಪ್ರಸಾದ್ ಅವರು ಸಂಪುಟ ಸಹೋದ್ಯೋಗಿಗಳೊಂದಿಗೆ SVIMS ಆಸ್ಪತ್ರೆಗೆ ಭೇಟಿ ನೀಡಿ ಮೃ*ತರ ಕುಟುಂಬಗಳಿಗೆ ತಲಾ 25 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.
ರಾಜ್ಯ ಗೃಹ ಸಚಿವೆ ವಂಗಲಪುಡಿ ಅನಿತಾ, ಧಾರ್ಮಿಕ ದತ್ತಿ ಸಚಿವ ಆನಂ ರಾಮನಾರಾಯಣ ರೆಡ್ಡಿ, ನೀರಾವರಿ ಸಚಿವ ನಿಮ್ಮಾ ರಾಮ ನಾಯ್ಡು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಸಚಿವ ಕೆ.ಪಾರ್ಥ ಸಾರಥಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮೃತರ ವಿವರಮರಣೋತ್ತರ ಪರೀಕ್ಷೆಯ ನಂತರ ಮೃತದೇಹಗಳನ್ನು ಅವರವರ ಊರುಗಳಿಗೆ ಕಳುಹಿಸಲಾಗುತ್ತಿದೆ. ಮೃ*ತ ದುರ್ದೈವಿಗಳು ಎಸ್. ಲಾವಣ್ಯ (38), ಕಂಡಿಪಲ್ಲಿ ಸಂತಿ (33), ಜಿ.ರಜಿನಿ (47) (ಮೂವರೂ ವಿಶಾಖಪಟ್ಟಣದವರು), ನರಸೀಪಟ್ಟಣದ ಬುಡ್ಡೆತಿ ನಾಯ್ಡು ಬಾಬು (55), ತಮಿಳುನಾಡಿನ ಮಲ್ಲಿಗಾ (50) ಮತ್ತು ಕೇರಳದ ವಿ. ನಿರ್ಮಲಾ (55) ಎಂದು ಗುರುತಿಸಲಾಗಿದೆ.