Advertisement

ಟಿಟಿಡಿ ಸೇವಾ ಶುಲ್ಕ ಹೆಚ್ಚಳಕ್ಕೆ ನಿರ್ಧಾರ; ಶೀಘ್ರದಲ್ಲಿಯೇ ಪರಿಷ್ಕೃತ ದರ ಜಾರಿ ಸಾಧ್ಯತೆ

07:08 PM Feb 20, 2022 | Team Udayavani |

ತಿರುಪತಿ: ತಿರುಮಲದಲ್ಲಿರುವ ವೆಂಕಟೇಶ್ವರ ದೇಗುಲದಲ್ಲಿನ ಆರ್ಜಿತ ಸೇವೆಗಳ ಶುಲ್ಕಗಳಲ್ಲಿ ಗಣನೀಯವಾಗಿ ಪರಿಷ್ಕರಣೆ ಮಾಡಲು ತಿರುಮಲ ತಿರುಪತಿ ದೇವಸ್ಥಾನಮ್ಸ್‌ (ಟಿಟಿಡಿ) ಮುಂದಾಗಿದೆ.

Advertisement

ವಿವೇಚನಾ ಕೋಟಾಕ್ಕೆ ಸಂಬಂಧಿಸಿದ ಸೇವೆಗಳ ದರದಲ್ಲಿ ಬದಲಾವಣೆಯಾಗಿದೆ. ಶೀಘ್ರದಲ್ಲಿಯೇ ಅದು ಜಾರಿಯಾಗಲಿದೆ. ಫೆ.17ರಂದು ನಡೆದಿದ್ದ ಟಿಟಿಡಿ ಟ್ರಸ್ಟ್‌ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ.

ಸಭೆಯ ನಿರ್ಧಾರದ ಪ್ರಕಾರ ವಸ್ತಾಲಂಕಾರ ಸೇವೆಗೆ ವಿಧಿಸಲಾಗುತ್ತಿದ್ದ ಶುಲ್ಕವನ್ನು ಹಾಲಿ 50 ಸಾವಿರ ರೂ.ಗಳಿಂದ 1 ಲಕ್ಷ ರೂ.ಗಳಿಗೆ ಏರಿಕೆ ಮಾಡಲು ನಿರ್ಧರಿಸಲಾಗಿದೆ.

ಸುಪ್ರಭಾತ ಸೇವಾ ಶುಲ್ಕವನ್ನು 240 ರೂ.ಗಳಿಂದ 2 ಸಾವಿರ ರೂ.ಗಳಿಗೆ ಏರಿಕೆ ಮಾಡಲಾಗಿದೆ. ತೋಮಲ ಸೇವಾ ಶುಲ್ಕವನ್ನು 440 ರೂ.ಗಳಿಂದ 5 ಸಾವಿರ ರೂ.ಗಳ ವರೆಗೆ ಏರಿಕೆ, ಕಲ್ಯಾಣೋತ್ಯವ ಸೇವಾ ಶುಲ್ಕ ಹಾಲಿ 1 ಸಾವಿರ ರೂ.ಗಳಿಂದ 2,500 ರೂ.ಗಳಿಗೆ, ವೇದಾಶೀರ್ವಾದಕ್ಕೆ ಹಾಲಿ 3 ಸಾವಿರ ರೂ.ಗಳಿಂದ 10 ಸಾವಿರ ರೂ.ಗಳಿಗೆ ಪರಿಷ್ಕರಿಸಲು ನಿರ್ಧರಿಸಲಾಗಿದೆ. ಈ ನಿರ್ಧಾರವನ್ನು ಸಮರ್ಥಿಸಿಕೊಂಡಿರುವ ಟ್ರಸ್ಟ್‌, ಇದರಿಂದ ಸಾಮಾನ್ಯ ಭಕ್ತರಿಗೆ ತೊಂದರೆಯಾಗದು ಎಂದಿದೆ.

ಇದನ್ನೂ ಓದಿ:ಗೂಗಲ್ ಮ್ಯಾಪ್‌ನಲ್ಲಿ ತಮಿಳು ಭಾಷೆಯಲ್ಲಿ ಆನೆಗೊಂದಿ ಹೆಸರು : ನೆಟ್ಟಿಗರ ಆಕ್ರೋಶ

Advertisement

ವಿವೇಚನಾ ಕೋಟಾದ ಮೇಲೆ ಇರುವ ಒತ್ತಡ ತಗ್ಗಿಸಲು ಪ್ರಯತ್ನ ಮಾಡಲಾಗುತ್ತಿದೆ ಎಂದಿದೆ.
2020ರ ಮಾರ್ಚ್‌ ಬಳಿಕ ಆರ್ಜಿತ ಸೇವೆಗಳ ಸಹಿತ ಎಲ್ಲಾ ಸೇವೆಗಳೂ ಭಕ್ತರ ಉಪಸ್ಥಿತಿ ಇಲ್ಲದೆ, ಏಕಾಂತದಲ್ಲಿ ನಡೆಯುತ್ತಿತ್ತು.

ಆಂಧ್ರಪ್ರದೇಶದಲ್ಲಿ ಕೊರೊನಾ ಕೇಸುಗಳ ಸಂಖ್ಯೆ ತಗ್ಗುತ್ತಿರುವುದರಿಂದ ಶ್ರೀಕ್ಷೇತ್ರದಲ್ಲಿ ಎಲ್ಲಾ ರೀತಿಯ ಸೇವೆಗಳನ್ನು ಪುನಾರಂಭಿಸಲು ಟಿಟಿಡಿ ನಿರ್ಧರಿಸಿದೆ.

ಸೇವೆ                        ಹಾಲಿ ದರ (ರೂ.ಗಳಲ್ಲಿ)  ಉದ್ದೇಶಿತ ದರ (ರೂ.ಗಳಲ್ಲಿ)
ವಸ್ತ್ರಾಲಂಕಾರ               50,000                                   1 ಲಕ್ಷ
ಕಲ್ಯಾಣೋತ್ಸವ            1,000                                       2,500
ತೋಮಲ ಸೇವೆ
ಮತ್ತು ಅರ್ಚನೆ               440                                          5,000
ಸುಪ್ರಭಾತ ಸೇವೆ              240                                         2,000
ವೇದಾಶೀರ್ವಾದ            3,000                                      10,000

 

Advertisement

Udayavani is now on Telegram. Click here to join our channel and stay updated with the latest news.

Next