Advertisement

ತಿರುಮಲ ಸ್ವಾಮಿ ಬ್ರಹ್ಮ ರಥೋತ್ಸವ

01:13 PM Feb 03, 2018 | |

ದೊಮ್ಮಸಂದ್ರ: ಸಮೀಪದ ತಿಗಳ ಚೌಡದೇನಹಳ್ಳಿಯಲ್ಲಿ ಗ್ರಾಮ ದೇವತೆ ಮಾರಮ್ಮ ದೇವಿಯ ಜಾತ್ರಾ ಮಹೋತ್ಸವ ಹಾಗೂ ಶ್ರೀದೇವಿ ಭೂದೇವಿ ಸಮೇತ ತಿರುಮಲ ಸ್ವಾಮಿ ಬ್ರಹ್ಮರಥೋತ್ಸವ ಸಂಭ್ರಮದಿಂದ ನೆರವೇರಿತು.

Advertisement

ಮುಂಜಾನೆ ಧ್ವಜಾರೋಹಣ ನೆರವೇರಿಸಿ ದೊಮ್ಮಸಂದ್ರದ ಮುತ್ಯಾಲಮ್ಮ ದೇವಿ ದೇವಾಲಯದಲ್ಲಿ ಗಂಗಾ ಪೂಜೆ ನೆರವೇರಿಸಿದ ಬಳಿಕ ಧಾರ್ಮಿಕ ಕಾರ್ಯಗಳಿಗೆ ಚಾಲನೆ ನೀಡಲಾಗಿತು. ಮಹೋತ್ಸವದ ಪ್ರಯುಕ್ತ ದೇವಾಲಯವನ್ನು ತಳಿರು ತೋರಣ, ವಿದ್ಯುತ್‌ ದೀಪಗಳಿಂದ ಅಲಂಕರಿಸಲಾಗಿತ್ತು. ಇದೇ ವೇಳೆ ಗ್ರಾಮದ ಬೀದಿಗಳಲ್ಲಿ ದ್ರೌಪತಮ್ಮ ದೇವಿಯ ಹಸಿ ಕರಗ ಮಹೋತ್ಸವ, ಮಾರಮ್ಮ ದೇವಿ ಹಾಗೂ ಗ್ರಾಮ ದೇವತೆಗಳಿಗೆ ದೀಪೋತ್ಸವ ನೆರವೇರಿತು.

ಗುರುವಾರ ಬೆಳಗ್ಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಭೂದೇವಿ, ಶ್ರೀದೇವಿ ಸಮೇತ ತಿರುಮಲ ಸ್ವಾಮಿಯ ಬ್ರಹ್ಮರಥೋತ್ಸವ ನಡೆಯಿತು. ವೀರಗಾಸೆ, ಡೊಳ್ಳು ಕುಣಿತ, ನಂದಿಕೋಲು, ಪೂಜಾ ಕುಣಿತ, ಪಟದ ಕುಣಿತ ಸೇರಿ ಹಲವು ಕಲಾ ತಂಡಗಳ ಕಲಾವಿದರು ರಥೋತ್ಸವಕ್ಕೆ ಮೆರುಗು ತಂದರು.

ಶುಕ್ರವಾರ ಅಗ್ನಿಕುಂಡ ಪ್ರವೇಶ, ವಸಂತೋತ್ಸವ, ಏಳು ಕಲಶಗಳ ನೃತ್ಯ, 22 ಗ್ರಾಮ ದೇವತೆಗಳ ಪಲ್ಲಕ್ಕಿ ಉತ್ಸವ ನಡೆಯಿತು ಎಂದು ನಾಗದೇವತಾ ಪಡವಟಮ್ಮ ಸೇವಾ ಸಮಿತಿಯ ಮುಖ್ಯಸ್ಥೆ ಸುಶೀಲಮ್ಮ ತಿಳಿಸಿದರು. ಜಾತ್ರೆಯ ಅಂಗವಾಗಿ ಸಮಿತಿಯಿಂದ ಮೂರು ದಿನವೂ ಅನ್ನ ದಾಸೋಹ ಏರ್ಪಡಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next