Advertisement

ತಿರುಚ್ಚಿ –ಹುಬ್ಬಳ್ಳಿ ಏರ್‌ಪೋರ್ಟ್‌ ವಿಲೀನ?

08:02 PM Oct 26, 2021 | Team Udayavani |

ನವದೆಹಲಿ: ವಿಮಾನ ನಿಲ್ದಾಣಗಳ ಖಾಸಗೀಕರಣ ಪ್ರಕ್ರಿಯೆಯ ನಡುವೆಯೇ ಹುಬ್ಬಳ್ಳಿ ವಿಮಾನ ನಿಲ್ದಾಣ ಸೇರಿದಂತೆ ದೇಶದ 7 ಸಣ್ಣ ಏರ್‌ಪೋರ್ಟ್‌ಗಳನ್ನು 6 ದೊಡ್ಡ ವಿಮಾನನಿಲ್ದಾಣಗಳೊಂದಿಗೆ ವಿಲೀನಗೊಳಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.

Advertisement

ಅದರಂತೆ, ವಾರಾಣಸಿ ವಿಮಾನನಿಲ್ದಾಣದೊಂದಿಗೆ ಖುಶಿ ನಗರ ಮತ್ತು ಗಯಾ ಏರ್‌ಪೋರ್ಟ್‌, ಅಮೃತಸರದೊಂದಿಗೆ ಕಾಂಗ್ರಾ, ಭುವನೇಶ್ವರದೊಂದಿಗೆ ತಿರುಪತಿ, ರಾಯ್ಪುರದೊಂದಿಗೆ ಔರಂಗಾಬಾದ್‌, ಇಂದೋರ್‌ನೊಂದಿಗೆ ಜಬಲ್ಪುರ ಮತ್ತು ತಿರುಚ್ಚಿಯೊಂದಿಗೆ ಹುಬ್ಬಳ್ಳಿ ವಿಮಾನ ನಿಲ್ದಾಣ ವಿಲೀನಗೊಳಿಸಲಾಗುತ್ತದೆ.

ಇದಲ್ಲದೇ, ರಾಷ್ಟ್ರೀಯ ಆಸ್ತಿ ನಗದೀಕರಣ ಯೋಜನೆಯನ್ವಯ ಮುಂದಿನ 4 ವರ್ಷಗಳಲ್ಲಿ 25 ಏರ್‌ಪೋರ್ಟ್‌ಗಳನ್ನು ಖಾಸಗಿಗೆ ವಹಿಸುವ ಗುರಿಯನ್ನೂ ಭಾರತೀಯ ವಿಮಾನನಿಲ್ದಾಣಗಳ ಪ್ರಾಧಿಕಾರ(ಎಎಐ) ಹಾಕಿಕೊಂಡಿದೆ.

ಮಾರ್ಚ್‌ನೊಳಗೆ ಪ್ರಕ್ರಿಯೆ ಪೂರ್ಣ:
ಇದೇ ವೇಳೆ, ಮುಂದಿನ ವರ್ಷದ ಮಾರ್ಚ್‌ ವೇಳೆಗೆ ದೇಶದ 13 ವಿಮಾನನಿಲ್ದಾಣಗಳ ಖಾಸಗೀಕರಣವನ್ನು ಪೂರ್ಣಗೊಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಸರ್ಕಾರಿ – ಖಾಸಗಿ ಸಹಭಾಗಿತ್ವದಲ್ಲಿ(ಪಿಪಿಪಿ) ಬಿಡ್ಡಿಂಗ್‌ ಮಾಡಲು 13 ಏರ್‌ಪೋರ್ಟ್‌ಗಳ ಪಟ್ಟಿಯನ್ನು ಈಗಾಗಲೇ ವಿಮಾನಯಾನ ಸಚಿವಾಲಯಕ್ಕೆ ಸಲ್ಲಿಸಲಾಗಿದ್ದು, ಪ್ರಸಕ್ತ ಹಣಕಾಸು ವರ್ಷದ ಅಂತ್ಯದಲ್ಲೇ ಬಿಡ್ಡಿಂಗ್‌ ಪೂರ್ಣಗೊಳ್ಳಲಿದೆ ಎಂದು ಪ್ರಾಧಿಕಾರದ ಮುಖ್ಯಸ್ಥ ಸಂಜೀವ್‌ ಕುಮಾರ್‌ ತಿಳಿಸಿದ್ದಾರೆ ಎಂದು “ದ ಇಕನಾಮಿಕ್‌ ಟೈಮ್ಸ್‌’ವರದಿ ಮಾಡಿದೆ.

ಇದನ್ನೂ ಓದಿ:1994ರಲ್ಲಿ ಜನತಾದಳ ಅಧಿಕಾರಕ್ಕೆ ಬರಲು ನನ್ನ ಪಾತ್ರವೇ ದೊಡ್ಡದು: ಹಳೆಯ ಇತಿಹಾಸ ಕೆದಕಿದ HDK

Advertisement

ಪ್ರಯಾಣಿಕನಿಂದ ಬರುವ ತಲಾ ಆದಾಯದ ಮಾದರಿಯನ್ನು ಬಿಡ್ಡಿಂಗ್‌ಗೆ ಅನುಸರಿಸಲಾಗುತ್ತದೆ. ಈ ಮಾದರಿಯನ್ನು ಈ ಹಿಂದೆಯೂ ಯಶಸ್ವಿಯಾಗಿ ಅಳವಡಿಸಲಾಗಿದ್ದು, ಜೇವಾರ್‌ ಏರ್‌ಪೋರ್ಟ್‌(ಗ್ರೇಟರ್‌ ನೋಯ್ಡಾ)ನ ಬಿಡ್ಡಿಂಗ್‌ ಪ್ರಕ್ರಿಯೆಯೂ ಇದೇ ಮಾದರಿಯಲ್ಲಿ ನಡೆದಿತ್ತು.

ಯಾವ ಏರ್‌ಪೋರ್ಟ್‌ನಲ್ಲಿ ಯಾವುದು ವಿಲೀನ?
1. ತಿರುಚ್ಚಿ ವಿಮಾನ ನಿಲ್ದಾಣದೊಂದಿಗೆ ಹುಬ್ಬಳ್ಳಿ
2. ವಾರಾಣಸಿಯೊಂದಿಗೆ ಕುಶಿನಗರ ಮತ್ತು ಗಯಾ
3. ಭುವನೇಶ್ವರದೊಂದಿಗೆ ತಿರುಪತಿ
4. ರಾಯ್ಪುರದೊಂದಿಗೆ ಔರಂಗಾಬಾದ್‌
5. ಇಂದೋರ್‌ನೊಂದಿಗೆ ಜಬಲ್ಪುರ
6. ಅಮೃತಸರದೊಂದಿಗೆ ಕಾಂಗ್ರಾ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next