Advertisement

Tirthahalli: ಶಂಕಿತ ಉಗ್ರ ಅಬ್ದುಲ್ ಮತೀನ್ ತಂದೆ ಮನ್ಸೂರ್ ಅಹಮದ್ ಸಾವು

04:02 PM Aug 14, 2023 | Vishnudas Patil |

ತೀರ್ಥಹಳ್ಳಿ : ಶಂಕಿತ ಉಗ್ರ ಅಬ್ದುಲ್ ಮತೀನ್ ತಂದೆ ಮನ್ಸೂರ್ ಅಹಮದ್ (57) ಹೈ ಬಿಪಿಯಿಂದ ಪಟ್ಟಣದ ಸೊಪ್ಪುಗುಡ್ಡೆಯಲ್ಲಿನ ತಮ್ಮ ಮನೆಯಲ್ಲಿ ಕೊನೆ ಉಸಿರೆಳೆದಿದ್ದಾರೆ.

Advertisement

ಮೃತದೇಹವನ್ನು ಸೊಪ್ಪುಗುಡ್ಡೆ ಬಳಿಯ ಪ್ರಾರ್ಥನಾ ಮಂದಿರದಲ್ಲಿ ಇಟ್ಟು ಪ್ರಾರ್ಥನೆ ನೆಡೆಸಲಾಗುತ್ತಿದೆ. ಮಾಜಿ ಸೈನಿಕನಾಗಿದ್ದ ಮನ್ಸೂರ್ ಅಹಮದ್ ಗೆ ಮೂವರು ಮಕ್ಕಳಿದ್ದು ಅದರಲ್ಲಿ ಮತೀನ್ ಮೊದಲ ಪುತ್ರ.

ಶಂಕಿತ ಉಗ್ರ ಅಬ್ದುಲ್ ಮತೀನ್ ಮೇಲೆ ಬೆಂಗಳೂರಿನ ಸದ್ಗುಂಟೆಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳಿದ್ದು  2020ರಿಂದ ತಲೆ ಮೆರೆಸಿಕೊಂಡಿದ್ದಾನೆ. ಅಬ್ದುಲ್ ಮತೀನ್ ಸುಳಿವು ನೀಡಿದವರಿಗೆ 2ಲಕ್ಷ‌ ರೂಪಾಯಿ ಬಹುಮಾನ ಎನ್ ಐಎ ಘೋಷಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next