Advertisement

ತೀರ್ಥಹಳ್ಳಿ: 618 ಕೋಟಿ ರೂ. ಕಾಮಗಾರಿಗಳ ಲೋಕಾರ್ಪಣೆ ಮಾಡಿದ ಸಿಎಂ

05:54 PM Nov 27, 2022 | Team Udayavani |

ತೀರ್ಥಹಳ್ಳಿ : ಅಭಿವೃದ್ಧಿಗೆ ಜನ ಮನ್ನಣೆ ನೀಡುತ್ತಾರೆ ಎಂಬುದಕ್ಕೆ ತೀರ್ಥಹಳ್ಳಿ‌ ಜನರೇ ಸಾಕ್ಷಿ.ಆರಗ ಜ್ಞಾನೇಂದ್ರ ಅವರು ತೀರ್ಥಹಳ್ಳಿಯ ಅಭಿವೃದ್ಧಿ ಮರೆತಿಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.

Advertisement

ಭಾನುವಾರ 618 ಕೋಟಿ ರೂಪಾಯಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳ ಲೋಕಾರ್ಪಣೆ ಹಾಗೂ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ, ನಮ್ಮ ಸರ್ಕಾರ 618 ಕೋಟಿ ರೂ. ಕಾಮಗಾರಿಗೆ ಆಡಳಿತಾತ್ಮಕ‌ ಅನುಮೋದನೆ ನೀಡಿ ಕ್ರಮ ಕೈಗೊಳ್ಳಲಾಗಿದೆ.ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಹಾಗೂ ಜಲಜೀವನ್ ಮಿಷನ್ ಯೋಜನೆ ಪೂರ್ಣಗೊಂಡಿದೆ. ಈ ಮೂಲಕ ಪ್ರತಿ ಮನೆಗೆ ಶುದ್ಧ ಕುಡಿಯುವ ನೀರು ಒದಗಿಸಲಾಗುತ್ತಿದೆ ಎಂದರು.

ಮಲೆನಾಡಿನ ಸಮಸ್ಯೆ ಬಗೆಹರಿಸಲು ಯಡಿಯೂರಪ್ಪ ಅವರ ನೇತೃತ್ವದಲ್ಲಿ ಕ್ರಮ ಕೈಗೊಳ್ಳುತ್ತೇವೆ. ಯಡಿಯೂರಪ್ಪ ಮಾರ್ಗದರ್ಶನದಲ್ಲಿ ಜ್ವಲಂತ ಸಮಸ್ಯೆ ಪರಿಹರಿಸುತ್ತೇವೆ. ಶರಾವತಿ ಸಂತ್ರಸ್ಥರ ಸಮಸ್ಯೆಯನ್ನು ಕೇಂದ್ರ ಸರ್ಕಾರದ ಅನುಮತಿ ಪಡೆದು ಪರಿಹರಿಸುವಂತೆ ಸೂಚಿಸಿದ್ದಾರೆ.ಹೀಗಾಗಿ ಸರ್ಕಾರ ಸಂಪೂರ್ಣ ಸರ್ವೇ ನಡೆಸಿ ಕೇಂದ್ರದ ಅನುಮತಿ ಪಡೆದು ಡಿಸೆಂಬರ್ ಸಂತ್ರಸ್ತರ ಸಮಸ್ಯೆ ಪರಿಹರಿಸುತ್ತೇವೆ ಎಂದರು.

ಕನ್ಸರ್ವೇಟರ್ ಫಾರೆಸ್ಟ್ ಆ್ಯಕ್ಟ್ ಜಾರಿಗೆ ಬರುವ ಮೊದಲು ಸಂತ್ರಸ್ತರ ಸಮಸ್ಯೆ ಪರಿಹರಿಸಬಹುದಿತ್ತು.ಆದರೆ ಅಂದಿನ ಸರ್ಕಾರ ಸಮಸ್ಯೆ ಪರಿಹರಿಸಿಲ್ಲ. ಆದರೆ ಇದೀಗ ಅವರೇ ಈ ಸಮಸ್ಯೆ ಮುಂದಿಟ್ಟುಕೊಂಡು ರಾಜಕೀಯ ಮಾಡುತಿದ್ದಾರೆ. ಇದು ಅಕ್ಷಮ್ಯ.ಒಂದು ಸಮಸ್ಯೆಯಿಟ್ಟುಕೊಂಡು ಎಷ್ಟು ಬಾರಿ ರಾಜಕೀಯ ಮಾಡುತಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕೆಲವರು ತಮ್ಮ ಮುಳುಗಡೆ ಉಳಿಸಿಕೊಳ್ಳಲು ಶರಾವತಿ ಸಂತ್ರಸ್ಥರ ಸಮಸ್ಯೆ ಬಗ್ಗೆ ಮೊಸಳೆ‌ ಕಣ್ಣೀರು ಸುರಿಸುತಿದ್ದಾರೆ. ಅಡಿಕೆಗೆ ಬಂದಿರುವ ಎಲೆಚುಕ್ಕೆ ರೋಗಕ್ಕೂ ಸೂಕ್ತ ಪರಿಹಾರ ನೀಡುತ್ತೇವೆ. ವಿಜ್ಞಾನಿಗಳಿಗೂ ಸಮಗ್ರ ತನಿಖೆ ನಡೆಸಿ ಪರಿಹಾರ ಕಂಡುಹಿಡಿಯಲು ಹೇಳಿದ್ದೇವೆ. 42 ಸಾವಿರ ಹೆಕ್ಟೇರ್ ಅಡಕೆ ಬೆಳೆಯಿದ್ದು ಈ ಬೆಳೆ ಉಳಿಸಲು ಎಲ್ಲ ರೀತಿಯ ಕ್ರಮ ಕೈಗೊಳ್ಳುತ್ತೇವೆ.ಮಲೆನಾಡಿನ ಭೂಮಿ ಹಾಗೂ ಈ ಭೂಮಿಯ ಮಕ್ಕಳನ್ನು ಉಳಿಸುವ ಕೆಲಸವನ್ನು ನಮ್ಮ‌ಸರ್ಕಾರ ಮಾಡುತ್ತದೆ ಎಂದರು.

Advertisement

ಎಲೆಚುಕ್ಕೆ ರೋಗ ಪರಿಶೀಲನೆ

ಕಳೆದ ಎರಡು ವರ್ಷದಿಂದ ನಿರಂತರವಾಗಿ ಮಳೆ ಬರುತ್ತಿದೆ. ಬೇಸಿಗೆ ಕಾಲದಲ್ಲು ಮಳೆ, ಈ ವರ್ಷ ಮಳೆ ಬಂದಿದ್ದರಿಂದ ಅಡಿಕೆಗೆ ಎಲೆಚುಕ್ಕೆ ರೋಗ ಬಂದಿದೆ. ಮಲೆನಾಡು ಭಾಗದಲ್ಲಿ ವ್ಯಾಪಕವಾಗಿ ಹರಡಿದೆ. ತೋಟಗಾರಿಕಾ ತಜ್ಞರು ಪರಿಶೀಲನೆ ನಡೆಸಿದ್ದಾರೆ. ಒಂದು ತೋಟದಿಂದ ಇನ್ನೊಂದು ತೋಟಕ್ಕೆ ಗಾಳಿಯಲ್ಲಿ ಹರಡುತ್ತಿದೆ. 42 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಇದೆ. ರೋಗ ಹರಡದಂತೆ ತಡೆಯಲು 10 ಕೋಟಿ ರೂ.ಹಣ ಬಿಡುಗಡೆ ಮಾಡಿದೆ. ತಜ್ಞರ ತಂಡ ಅಧ್ಯಯನದ ಬಳಿಕ ಪರಿಹಾರದ ಬಗ್ಗೆ ಮಾಹಿತಿ ನೀಡಲಿದೆ. ಎಷ್ಟೇ ಖರ್ಚು ಆದರೂ ಆ ಹಣವನ್ನು ಸರಕಾರ ಭರಿಸಲಿದೆ.ಸರಕಾರ ರೈತರ ಜೊತೆ ಇದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next