Advertisement

ತೀರ್ಥಹಳ್ಳಿ ದಸರಾ ಉತ್ಸವಕ್ಕೆ ಚಾಲನೆ ನೀಡಿದ ಗೃಹಸಚಿವ ಆರಗ ಜ್ಞಾನೇಂದ್ರ

11:05 AM Sep 26, 2022 | Suhan S |

ತೀರ್ಥಹಳ್ಳಿ : ದುಷ್ಟ ನಿಗ್ರಹ ಶಿಷ್ಟ ರಕ್ಷಣೆಯ ಹಿನ್ನಲೆ ಇರುವ ನವರಾತ್ರಿಯ ಒಂಬತ್ತು ದಿನಗಳಲ್ಲಿ ವಿವಿಧ ಅರ್ಥ ಪೂರ್ಣ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ತೀರ್ಥಹಳ್ಳಿಯಲ್ಲಿ ಸಂಭ್ರಮದ ಕಳೆಗಟ್ಟಲಿದೆ.

Advertisement

ಸೋಮವಾರ ಇಂದಿನಿಂದ   ನವರಾತ್ರಿ ಉತ್ಸವ ಆರಂಭವಾಗಿದ್ದು ವಿವಿಧ ದೇವಸ್ಥಾನಗಳಲ್ಲಿ ಪೂರ್ವಭಾವಿ ಸಿದ್ಧತೆಗಳು ನೆಡೆಯುತ್ತಿವೆ. ಎರಡನೇ ದಸರಾ ಎಂದೇ ಖ್ಯಾತಿ ಪಡೆದ ತೀರ್ಥಹಳ್ಳಿಯಲ್ಲಿ ಸೋಮವಾರ ಬೆಳಗ್ಗೆ ಪಟ್ಟಣದ ರಾಮೇಶ್ವರ ದೇವಸ್ಥಾನದಲ್ಲಿ ಗೃಹಸಚಿವ ಆರಗ ಜ್ಞಾನೇಂದ್ರ ದಸರಾ ಉತ್ಸವಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ತಹಸೀಲ್ದಾರ್ ಅಮೃತ್ ಅತ್ರೇಶ್ ದಸರಾ ಉತ್ಸವದ ಸಂಚಾಲಕರಾದ ಸಂದೇಶ್ ಜವಳಿ, ಸೊಪ್ಪುಗುಡ್ಡೆ ರಾಘವೇಂದ್ರ, ಪ. ಪಂ ಮುಖ್ಯಾಧಿಕಾರಿ ಕುರಿಯಕೋಸ್,ತಾಲೂಕು ಪಂಚಾಯಿತಿ ಇ ಒ ಶೈಲಜಾ, ಡಾನ್ ರಾಮಣ್ಣ ಶೆಟ್ಟಿ, ವೆಂಕಟೇಶ್ ಪಟವರ್ಧನ್, ಗುರುದತ್ ಕುರುವಳ್ಳಿ, ನವೀನ್ ಯತಿರಾಜ್, ಗೀತಾ ರಮೇಶ್, ಶ್ರೀನಿವಾಸ್, ಸಂತೋಷ್ ದೆವಾಡಿಗ, ಪ್ರಮೋದ್ ಪೂಜಾರಿ, ಪೂರ್ಣೇಶ್ ಪೂಜಾರಿ, ಕಂದಾಯ ಅಧಿಕಾರಿ

ಕಟ್ಟೆ ಮಂಜುನಾಥ್, ಸುಕೇಶ್ ಸೇರಿ ಹಲವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next