ತೀರ್ಥಹಳ್ಳಿ: ಅಫ್ಘಾನಿಸ್ತಾನ ತಾಲಿಬಾನಿಗಳ ಕೈ ವಶವಾಗುತ್ತಿದ್ದಂತೆ, ಅಲ್ಲಿ ಅರಾಜಕತೆ ಸೃಷ್ಟಿಯಾಗಿದ್ದು, ಅಲ್ಲಿ ನೆಲೆಸಿದ್ದ ವಿದೇಶಿಗರು ದೇಶ ತೊರೆಯಲು ಹರಸಾಹಸ ಪಡುತ್ತಿದ್ದಾರೆ. ಈ ನಡುವೆ ಕರ್ನಾಟಕದ ಅನೇಕರು ಕೂಡ ಅಲ್ಲಿ ಸಿಲುಕಿಕೊಂಡಿದ್ದಾರೆ. ಈ ನಡುವೆ ತೀರ್ಥಹಳ್ಳಿ ಮೂಲದ ಪಾದ್ರಿ ಒಬ್ಬರು ಅಫ್ಘಾನಿಸ್ತಾನದಲ್ಲಿ ಸಿಲುಕಿಕೊಂಡಿದ್ದು, ಇದೀಗ ಅವರಿಗೆ ಭಾರತ ಸರಕಾರದ ನೆರವು ಬೇಕಿದೆ. ರಾಜ್ಯದ ಗೃಹ ಮಂತ್ರಿಗಳಾಗಿ ತೀರ್ಥಹಳ್ಳಿ ಶಾಸಕ ಆರಗ ಅವರು ಈ ಬಗ್ಗೆ ಯಾವ ಕ್ರಮ ತೆಗೆದುಕೊಳ್ಳುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.
ಪಟ್ಟಣದ ದೊಡ್ಡಮನೆ ಕೇರಿಯ ವಾಸಿಯಾಗಿರುವ ಫಾದರ್ ರಾಬರ್ಟ್ ತೀರ್ಥಹಳ್ಳಿ ತುಂಗಾ ಕಾಲೇಜಿನಲ್ಲಿ ಪದವಿ ಪೂರೈಸಿ ಬಳಿಕ ಕ್ರೈಸ್ತ ಗುರುವಾಗಿ ಕೆಲಸ ಮಾಡಿದ್ದರು. ಮಂಗಳೂರು, ಬೆಂಗಳೂರು ಬಳಿಕ ಸಮಾಜ ಸೇವೆಯ ಕನಸು ಹೊತ್ತು ಅಫ್ಘಾನಿಸ್ತಾನಕ್ಕೆ ಹೋಗಿದ್ದರು. ಮಧ್ಯ ಅಫ್ಘಾನಿಸ್ತಾನದ ಬಾಮಿಯಾನ್ ಪ್ರಾಂತ್ಯದ ರಾಜಧಾನಿಯಾದ ಬಾಮಿಯಾನ್ನಲ್ಲಿ ಸೇವೆ ಸಲ್ಲಿಸುತ್ತಿದ್ದರು.
ಇದನ್ನೂ ಓದಿ:ಕೋವಿಡ್ : ರಾಜ್ಯದಲ್ಲಿಂದು 1432 ಪಾಸಿಟಿವ್ ಪ್ರಕರಣ| 1538 ಸೋಂಕಿತರು ಗುಣಮುಖ
ಇವರು ಜೆಸ್ಯೂಟ್ ಸಮುದಾಯದ ಪಾದ್ರಿಯಾಗಿ ನಾಲ್ಕು ವರ್ಷಗಳ ದೀಕ್ಷೆ ಪಡೆದಿದ್ದರು. ನಂತರ ಬೆಂಗಳೂರಿನ ಶಾಲೆಯೊಂದರಲ್ಲಿ ಸೇವೆ ಸಲ್ಲಿಸಿದರು. ಇದಾದ ನಂತರ ಅಫ್ಘಾನಿಸ್ತಾನದಲ್ಲಿ ಕ್ರೈಸ್ತಗುರುವಾಗಿ ಸೇವೆ ಸಲ್ಲಿಸಲು ತೆರಳಿದ್ದರು. ಬದಲಾದ ಅಫ್ಘಾನಿಸ್ಥಾನ ಆಡಳಿತ ವ್ಯವಸ್ಥೆ ತಾಲೀಬಾನಿಗಳ ಕೈಗೆ ಹೋಗುತ್ತಿದ್ದಂತೆ ಅಲ್ಲಿಂದ ಭಾರತ ಮೂಲದವರು ಭಾರತಕ್ಕೆ ಬರಲು ಹರ ಸಾಹಸಪಡುತ್ತಿದ್ದಾರೆ. ಅಲ್ಲಿಂದ
ಕುಟುಂಬ ಸ್ನೇಹಿತ ರೋಬ್ಬರಿಗೆ ಸಂದೇಶ ಮೂಲಕ ಪ್ರತಿಕ್ರಿಯಿಸಿದ ರೋಡ್ರಿಗಸ್ ನಾನು ಇಲ್ಲಿ ಕಷ್ಟದಲ್ಲಿದ್ದೇನೆ. ಕಾಬುಲ್ ಏರ್ಪೋರ್ಟ್ ತಲುಪಲು ಸಾಧ್ಯ ಆಗುತ್ತಿಲ್ಲ. ನಮಗೆ ದೇವರೇ ಕಾಪಾಡಬೇಕು ಎಂದು ಹೇಳಿದ್ದಾರೆ.