Advertisement

ಹಜ್‌ ಭವನಕ್ಕೆ ಟಿಪ್ಪು ಹೆಸರು ತಪ್ಪಿಲ್ಲ : ಸಂತೋಷ್‌ ಹೆಗ್ಡೆ

06:35 AM Jun 25, 2018 | Team Udayavani |

ಬೆಂಗಳೂರು: “ಹಜ್‌ ಭವನಕ್ಕೆ’ ಟಿಪ್ಪು ಸುಲ್ತಾನ್‌ ಹೆಸರಿಡುವುದರಲ್ಲಿ ಯಾವುದೇ ತಪ್ಪಿಲ್ಲ. ಇದನ್ನು ವಿರೋಧಿಸುವುದು ಅಥವಾ ಈ ಕುರಿತು ಅನಗತ್ಯ ವಿವಾದ ಹುಟ್ಟು ಹಾಕುವುದು ಸರಿಯಲ್ಲ ಎಂದು ನಿವೃತ್ತ ಲೋಕಾಯುಕ್ತ ನ್ಯಾ. ಎನ್‌. ಸಂತೋಷ್‌ ಹೆಗ್ಡೆ ಅಭಿಪ್ರಾಯಪಟ್ಟಿದ್ದಾರೆ.

Advertisement

ಕೃಷಿ ತಂತ್ರಜ್ಞರ ಸಂಸ್ಥೆಯಲ್ಲಿ ಭಾನುವಾರ ಎಸ್‌ಐಒ-ಕರ್ನಾಟಕ ಹಮ್ಮಿಕೊಂಡಿದ್ದ “ಈದ್‌ ಸೌಹಾರ್ದ ಕೂಟ’ದಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಯಾವುದೇ ಇತಿಹಾಸ ಪುರುಷನನ್ನು ಆತನ ಸಮುದಾಯದ ಹಿನ್ನಲೆ ಇಟ್ಟುಕೊಂಡು ವಿರೋಧಿಸುವುದು ಸಮಂಜಸವಲ್ಲ ಎಂದರು.

ಟಿಪ್ಪು ಒಬ್ಬ ಇತಿಹಾಸ ಪುರುಷ. ಆತನನ್ನು ಗೌರಿಸುವುದು ಪ್ರತಿಯೊಬ್ಬರು ಕರ್ತವ್ಯ. ಆತ ಪ್ರತಿನಿಧಿಸುತ್ತಿದ್ದ ಸಮುದಾಯದವರು ಅಥವಾ ಆತನ ಅಭಿಮಾನಿಗಳು, ಅದೇ ಸಮುದಾಯದ ಸಂಸ್ಥೆಗಳಿಗೆ ಅಥವಾ ಕಟ್ಟಡಗಳಿಗೆ ಆತನ ಹೆಸರು ಇಟ್ಟರೆ ಅದರಲ್ಲಿ ತಪ್ಪೇನಿಲ್ಲ. ಈ ಬಗ್ಗೆ ಅನಗತ್ಯ ವಿವಾದ ಹುಟ್ಟು ಹಾಕುವುದು ಸರಿಯಲ್ಲ. ಅದೇ ರೀತಿ ಬೇರೆ ಸಮುದಾಯದವರು ಅವರ ಇತಿಹಾಸ ಪುರುಷರ ಹೆಸರನ್ನು ತಮ್ಮ ಸಂಸ್ಥೆಗಳಿಗೆ ಅಥವಾ ಕಟ್ಟಡಗಳಿಗೆ ಇಟ್ಟರೆ ತಪ್ಪು ಎಂದು ಹೇಳಲಿಕ್ಕಾಗುವುದಿಲ್ಲ ಎಂದರು.

ಕಾರ್ಯಕ್ರದಲ್ಲಿ ಮಂಗಳೂರು ಯನಪೋಯ ವಿವಿಯ ಪ್ರಾಧ್ಯಾಪಕ ಡಾ. ಜಾವೇದ್‌ ಜಮೀಲ್‌, ಕರ್ನಾಟಕ ಸದ್ಭಾವನಾ ವೇದಿಕೆಯ ಕಾರ್ಯದರ್ಶಿ ಅಕºರ್‌ ಅಲಿ ಉಡುಪಿ, ಎಸ್‌ಐಒ ಕರ್ನಾಟಕದ ಅಧ್ಯಕ್ಷ ಮಹ್ಮದ್‌ ರಫೀಕ್‌ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next