ಚಿಕ್ಕಮಗಳೂರು: ನೂರಡಿಯಲ್ಲ, ಒಂದಿಂಚಿನ ಟಿಪ್ಪು ಮೂರ್ತಿಯನ್ನೂ ಮೈಸೂರು ಸಹಿತ ರಾಜ್ಯದ ಯಾವ ಭಾಗದಲ್ಲೂ ಪ್ರತಿಷ್ಠಾಪಿಸಲು ಬಿಡುವುದಿಲ್ಲ ಎಂದು ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದರು.
ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಮೈಸೂರು ನಮ್ಮ ಸ್ವಾಭಿಮಾನದ ಸಾಂಸ್ಕೃತಿಕ ಕೇಂದ್ರ. ಮೈಸೂರು ಮಹಾರಾಣಿಯನ್ನು ಟಿಪ್ಪು ಸುಲ್ತಾನ್ ಮೋಸದಿಂದ ಬಂಧಿ ಸಿ ರಾಜ್ಯಭಾರ ಮಾಡಿದ ವ್ಯಕ್ತಿ. ಅಂತಹ ವ್ಯಕ್ತಿಯ ಮೂರ್ತಿಯನ್ನು ಪ್ರತಿಷ್ಠಾಪಿಸಲು ಬಿಡುವುದಿಲ್ಲ ಎಂದರು.
ಮುಸ್ಲಿಂ ಸಮುದಾಯದಲ್ಲಿ ಮೂರ್ತಿ ಪೂಜೆ ಇಲ್ಲ. ಟಿಪ್ಪು ಸುಲ್ತಾನ್ ಮೂರ್ತಿ ನಿರ್ಮಿಸುತ್ತೇವೆ ಎಂದರೆ ಮೂರ್ತಿ ಪೂಜೆಯನ್ನು ಒಪ್ಪಿಕೊಂಡಂತೆ. ಇಸ್ಲಾಂನಲ್ಲಿ ಮೂರ್ತಿ ಪೂಜೆ ಇಲ್ಲ ಅಂತಾದರೆ ತನ್ವೀರ್ ಸೇಠ್ ವಿರುದ್ಧ ಫತ್ವಾ ಹೊರಡಿಸಬೇಕು. ಬಹಿಷ್ಕಾರ ಹಾಕಬೇಕು ಎಂದು ಆಗ್ರಹಿಸಿದರು.