ಚಿಂಚೋಳಿ: ಟಿಪ್ಪು ಅಪ್ರತಿಮ ದೇಶಭಕ್ತ, ಉತ್ತಮ ಆಡಳಿತಗಾರ. ಆದರೆ ಕೆಲವು ಕೋಮುವಾದಿ ಶಕ್ತಿಗಳು ಅಪಪ್ರಚಾರ ಮಾಡುತ್ತಿವೆ ಎಂದು ಶಾಸಕ ಡಾ| ಉಮೇಶ ಜಾಧವ್ ಹೇಳಿದರು. ತಹಶೀಲ್ದಾರ್ ಕಚೇರಿ ಆವರಣದಲ್ಲಿ ತಾಲೂಕಾಡಳಿತ ಆಯೋಜಿಸಿದ್ದ ದ ಟಿಪ್ಪು ಸುಲ್ತಾನ್ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಟಿಪ್ಪು ಸುಲ್ತಾನ್ ಜಯಂತಿ ವಿರೋಧಿಸುವವರು ದೇಶದ್ರೋಹಿಗಳು ಎಂದು ಹೇಳಿದರು.
ನ ಜಯಂತ್ಯೋತ್ಸವ ವಿರೋದಿಸುವವರು ದೇಶ ದ್ರೋಹಿಗಳಾಗಿದ್ದಾರೆ. ಜಾತ್ಯತೀತವಾಗಿ ಮೈಸೂರು ಪ್ರಾಂತದಲ್ಲಿ ತನ್ನ ಕರ್ತವ್ಯ ನಿರ್ವಹಿಸಿದ ಧೀಮಂತ ರಾಜ ಆತನಾಗಿದ್ದ. ಆದ್ದರಿಂದ ಮುಂದಿನ ದಿನಗಳಲ್ಲಿ ಬಹಿರಂಗವಾಗಿ ಟಿಪ್ಪು ಜಯಂತಿ ಆಚರಿಸಲಾಗುವುದು ಎಂದರು. ಟಿಪ್ಪು ಸುಲ್ತಾನ್ ಯುವಕ ಸಂಘದ ತಾಲೂಕು ಅಧ್ಯಕ್ಷ ಮಹ್ಮದ ಖಾಜಾ ಮೈನೋದ್ದೀನ್ ಮಾತನಾಡಿ, ಜಯಂತಿಯನ್ನು ಸರಕಾರದಿಂದಲೇ ಆಚರಿಸುತ್ತಿರುವುದಕ್ಕೆ ಹರ್ಷ ವ್ಯಕ್ತಪಡಿಸಿದರು.
ಮಹ್ಮದ ರಫೀಕ ಕಲಬುರಗಿ, ಚಿಮ್ಮನಚೋಡ ಸರಕಾರಿ ಪ್ರೌಢ ಶಾಲೆ ಸಹ ಶಿಕ್ಷಕ ಖುರ್ಷಿದ ಅಲಿ, ಜಿಪಂ ಸದಸ್ಯ ಗೌತಮ ಪಾಟೀಲ, ತಾಪಂ ಅಧ್ಯಕ್ಷೆ ರೇಣುಕಾ ಚವ್ಹಾಣ, ಪುರಸಭೆ ಅಧ್ಯಕ್ಷೆ ಇಂದುಮತಿ ದೇಗಲಮಡಿ,ಉಪಾಧ್ಯಕ್ಷ ರುದ್ರಶೆಟ್ಟಿ ಪಡಶೆಟ್ಟಿ. ತಾಪಂ ಅಧಿಕಾರಿ ಶಿವಾಜಿರಾವ್ ಡೋಣಿ, ಪುರಸಭೆ ಸದಸ್ಯ ಅಬ್ದುಲ್ ಬಾಸೀತ, ಕಾಡಾ ನಿರ್ದೇಶಕ ಕೆ.ಎಂ.ಬಾರಿ, ತಾಪಂ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಮಹ್ಮದ ಹುಸೇನ ನಾಯಕೋಡಿ, ಕಲಬುರಗಿ
ಟಿಪ್ಪು ಸುಲ್ತಾನ್ ಆಸ್ಪತ್ರೆ ಮುಖ್ಯಸ್ಥ ಡಾ| ಮುನೀರ , ಮಸೂದ ಸೌದಾಗರ, ಅಯ್ಯೂಬ್ ಖಾನ್ ಹಾಜರಿದ್ದರು. ತಹಶೀಲ್ದಾರ್ ಅರುಣಕುಮಾರ ಕುಲಕರ್ಣಿ ಸ್ವಾಗತಿಸಿದರು. ಜಯಪ್ಪ ಚಾಪೆಲ್ ನಿರೂಪಿಸಿದರು. ಬಿಇಒ ರಾಚಪ್ಪ ಭದ್ರಶೆಟ್ಟಿ ವಂದಿಸಿದರು.