Advertisement

ಟಿಪ್ಪು ಜಾತ್ಯತೀತ ನಾಯಕ: ಸತೀಶ ಜಾರಕಿಹೊಳಿ

05:46 PM Nov 12, 2021 | Team Udayavani |

ಬೆಳಗಾವಿ: ಟಿಪ್ಪು ಜಾತ್ಯತೀತವಾಗಿದ್ದರು. ಅವರ ಸೇನೆಯಲ್ಲಿ ಎಲ್ಲ ಜಾತಿ, ಧರ್ಮದವರು ಇದ್ದರು. ಕನ್ನಡ ಭಾಷೆಯ ಬಗ್ಗೆಯೂ ಅವರಿಗೆ ಅಪಾರ ಅಭಿಮಾನವಿತ್ತು. ಅವರು ಒಂದೇ ಜಾತಿ, ಸಮುದಾಯಕ್ಕೆ ಸೀಮಿತವಲ್ಲ. ಇದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.

Advertisement

ಇಲ್ಲಿನ ಜಿಲ್ಲಾ ಕಾಂಗ್ರೆಸ್‌ ಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಟಿಪ್ಪು ಸುಲ್ತಾನ್‌ ಜಯಂತಿ ಕಾರ್ಯಕ್ರಮದಲ್ಲಿ ಟಿಪ್ಪು ಭಾವಚಿತ್ರಕ್ಕೆ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ಟಿಪ್ಪು ಸುಲ್ತಾನ್‌ ಅಪ್ರತಿಮ ಹೋರಾಟಗಾರ. ತನ್ನ ಕೊನೆ ಉಸಿರಿರುವವರೆಗೂ ನಾಡು ಮತ್ತು ದೇಶಕ್ಕಾಗಿ ಹೋರಾಟ ಮಾಡಿದರು. ಅವರ ಹೋರಾಟ ಇಂದಿನ ಪೀಳಿಗೆಯವರಿಗೆ ಮಾದರಿಯಾಗಬೇಕು. ಮಡಿಕೇರಿ ದಂಗೆಯಲ್ಲಿ 70 ಸಾವಿರ ಸೈನಿಕರನ್ನು ಟಿಪ್ಪು ಕೊಂದ ಎಂದು ಬಿಜೆಪಿಗರು ಇತಿಹಾಸ ತಿರುಚುತ್ತಿದ್ದಾರೆ. ಏಕೆಂದರೆ ಆ ಸಮಯದಲ್ಲಿ 70 ಸಾವಿರ ಸೈನಿಕರೇ ಇರಲಿಲ್ಲ. ಬಿಜೆಪಿ ಹಾಗೂ ಆರೆಸ್ಸೆಸ್ಸೆನವರು ಇತಿಹಾಸ ತಿಳಿದು ಮಾತನಾಡಬೇಕು ಎಂದು ಹೇಳಿದರು.

ಬಿಜೆಪಿ ನಾಯಕರಾದ ಯಡಿಯೂರಪ್ಪ, ಜಗದೀಶ ಶೆಟ್ಟರ, ಆರ್‌. ಅಶೋಕ ಸೇರಿದಂತೆ ಬಿಜೆಪಿ ನಾಯಕರು ಹಿಂದೆ ಟಿಪ್ಪು ಜಯಂತಿಯಲ್ಲಿ ಭಾಗವಹಿಸಿ, ಟಿಪ್ಪುವಿನ ಗುಣಗಾನ ಮಾಡಿದ್ದರು. ಆದರೆ ಇಂದು ರಾಜಕೀಯಕ್ಕಾಗಿ ಟಿಪ್ಪುವಿನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಇದು ಸರಿಯಲ್ಲ ಎಂದರು.

ಮುಖಂಡರಾದ ಮೂಸಾ ಗೋರಿಖಾನ, ಅಕºರ್‌ ಸಡೇಕರ್‌, ತಬಸುಮ್‌ ಮುಲ್ಲಾ, ದಿಲ್‌ದಾರ ಬೋಜಗಾರ್‌, ಇರ್ಫಾನ್‌ ನದಾಫ, ಮುಬಸೀರ ಸಾಕಲೆನ್‌, ರೋಹಿಣಿ ಬಾಬಸೇಠ ಸೇರಿದಂತೆ ಇತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.