ಸೌಂದರ್ಯ ಎಂದು ಬಂದರೆ ತುಟಿಗಳ ಬಣ್ಣವೂ ಮುಖ್ಯವಾಗುತ್ತದೆ. ತುಟಿಗಳ ಬಣ್ಣ ಕಪ್ಪಾದರೆ ನಮ್ಮ ಸೌಂದರ್ಯ ಹಾಳುಮಾಡುವುದರಲ್ಲಿ ಸಂದೇಹವಿಲ್ಲ. ಗುಲಾಬಿ ಬಣ್ಣದಂತಹ ತುಟಿ ಚೆನ್ನಾಗಿ ಕಾಣುವುದಲ್ಲದೆ ಮುಖದ ಸೌಂದರ್ಯ ಹೆಚ್ಚಿಸುತ್ತದೆ.
ಕೆಲವರ ತುಟಿಗಳು ಕಾಲಕ್ರಮೇಣ ಕಪ್ಪಾಗುತ್ತವೆ. ತುಟಿ ಕಪ್ಪಾಗಲು ಹಲವಾರು ಕಾರಣಗಳಿವೆ. ಕಪ್ಪು ಬಣ್ಣದ ತುಟಿ ಆರೈಕೆಗೆ ಕೆಲ ಸಲಹೆಗಳನ್ನು ಪಾಲಿಸಬೇಕು.
ಮಹಿಳೆಯರು ತಮ್ಮ ಕಪ್ಪು ತುಟಿಗಳನ್ನು ಮರೆಮಾಡಲು ಲಿಪ್ಸ್ಟಿಕ್ ಬಳಸುವುದು ಸಾಮಾನ್ಯ. ನಿಮಗೆ ಕಪ್ಪು ತುಟಿಗಳಿಂದ ಬೇಸರವಾಗಿದ್ದರೆ ಕೆಲ ಸಲಹೆ ಹಾಗೂ ಮನೆಮದ್ದುಗಳನ್ನು ಪಾಲಿಸುವುದರ ಮೂಲಕ ಕಪ್ಪು ಬಣ್ಣದ ತುಟಿಗಳನ್ನು ಗುಲಾಬಿ ಬಣ್ಣದ ತುಟಿಗಳಾಗಿ ಪರಿವರ್ತಿಸಬಹುದು.
ಕೆಲವೊಮ್ಮೆ ಪರಿಸರದ ಪರಿಣಾಮ ತುಟಿಗಳ ಮೇಲೂ ಪರಿಣಾಮ ಬೀರುತ್ತದೆ. ಬಲವಾದ ಸೂರ್ಯನ ಕಿರಣಗಳಿಂದ ಚರ್ಮದಲ್ಲಿನ ಮೆಲನಿನ್ ಕೋಶಗಳು ಹೆಚ್ಚಾಗುತ್ತವೆ. ಇದು ಚರ್ಮ, ತುಟಿ ಕಪ್ಪಗಾಗಲು ಕಾರಣವಾಗುತ್ತದೆ.
Related Articles
ಇಲ್ಲಿವೆ ಕೆಲ ಸಲಹೆಗಳು:
ಜೇನುತುಪ್ಪ:
ತುಟಿಗಳ ಕಪ್ಪು ಬಣ್ಣ ತೆಗೆದುಹಾಕಲು ಜೇನುತುಪ್ಪ ತುಂಬಾ ಸಹಕಾರಿ. ಪ್ರತಿ ರಾತ್ರಿ ತುಟಿಗಳಿಗೆ ಸ್ವಲ್ಪ ಜೇನುತುಪ್ಪವನ್ನು ಹಚ್ಚಿ ಮತ್ತು ಬೆಳಿಗ್ಗೆ ತೊಳೆಯಿರಿ. ನಿಮ್ಮ ತುಟಿಗಳು ಗುಲಾಬಿ ಬಣ್ಣಕ್ಕೆ ತಿರುಗುತ್ತವೆ.
ನಿಂಬೆ ರಸ:
ನಿಂಬೆ ರಸ ಮುಖದ ಕಲೆಗಳನ್ನು ಹೋಗಲಾಡಿಸುವುದರೊಂದಿಗೆ ತುಟಿಗಳ ಕಪ್ಪು ಬಣ್ಣವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ವಾರಕ್ಕೆ 3-4 ಬಾರಿ ನಿಂಬೆ ರಸವನ್ನು ನಿಮ್ಮ ತುಟಿಗಳಿಗೆ ಹಚ್ಚಿ 5 ನಿಮಿಷಗಳ ನಂತರ ತುಟಿಗಳನ್ನು ತೊಳೆಯಿರಿ.
1 ಚಮಚ ಜೇನುತುಪ್ಪ ಮತ್ತು 1 ಚಮಚ ಕಂದು ಸಕ್ಕರೆ ಮಿಶ್ರಣ ಮಾಡಿ. ಆ ಮಿಶ್ರಣವನ್ನು ತುಟಿಗಳಿಗೆ ವೃತ್ತಾಕಾರದಲ್ಲಿ ಮಸಾಜ್ ಮಾಡಿ. ಸುಮಾರು 15 ನಿಮಿಷಗಳ ಕಾಲ ಹಾಗೆಯೇ ಬಿಟ್ಟು ನಂತರ ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ.
ತುಟಿಗಳ ಮೇಲೆ ದಾಲ್ಚಿನ್ನಿ ಸ್ವಲ್ಪ ಉಜ್ಜಿಕೊಳ್ಳಿ, ಕೆಲವು ನಿಮಿಷ ನಂತರ ನಿಮ್ಮ ತುಟಿಗಳನ್ನು ಬಿಸಿ ನೀರಿನಲ್ಲಿ ತೊಳೆಯಿರಿ. ಇದು ಕೂಡಾ ತುಟಿಯ ಕಪ್ಪು ಬಣ್ಣ ಹೋಗಲಾಡಿಸಲು ಸಹಾಯ ಮಾಡುತ್ತದೆ.
ಹಾಲು:
ತಂಪಾದ ಹಾಲನ್ನು ತುಟಿಗೆ ಹಚ್ಚುವುದರಿಂದಲೂ ಗುಲಾಬಿ ಬಣ್ಣದ ತುಟಿ ಪಡೆಯಬಹುದು. ಪ್ರತಿದಿನ ರಾತ್ರಿ ಮಲಗುವ ಮುನ್ನ ತುಟಿಗಳಿಗೆ ಹತ್ತಿ ಸಹಾಯದಿಂದ ತಂಪಾದ ಹಾಲಿನಿಂದ ಮಸಾಜ್ ಮಾಡಬೇಕು.
ಆಲಿವ್ ಎಣ್ಣೆ:
ತುಟಿಯ ಅನವಶ್ಯಕ ಡೆಡ್ ಸೆಲ್ ಗಳನ್ನು ತೆಗೆಯಲು ಸಕ್ಕರೆ ಪುಡಿಗೆ ಆಲಿವ್ ಎಣ್ಣೆ ಅಥವಾ ಜೇನು ಬೆರೆಸಿ ಹಚ್ಚುತ್ತಿರಿ. ಇದು ತುಟಿಯ ಬಣ್ಣಕ್ಕೆ ಸಹಾಯವಾಗುತ್ತದೆ.
ವಿಟಮಿನ್ ಬಿ ಕೊರತೆ ನಿವಾರಿಸಿ:
ವಿಟಮಿನ್ ಬಿ ಇರುವ ಪದಾರ್ಥಗಳನ್ನು ಕಡಿಮೆ ಸೇವಿಸುವುದರಿಂದ ಹೊಟ್ಟೆಯ ಪಚನ ಕ್ರಿಯೆ ಮೇಲೆ ಪರಿಣಾಮ ಬೀರುವುದಲ್ಲದೆ ತುಟಿಯ ಆರೋಗ್ಯದ ಮೇಲೆಯೂ ಪರಿಣಾಮ ಬೀರುತ್ತದೆ. ತುಟಿ ಮತ್ತು ಬಾಯಿಯ ಮೂಲೆಗಳು ಕೆಲವೊಮ್ಮೆ ಒಡೆದು ಹೋಗುತ್ತವೆ. ಇದಕ್ಕೆ ಮೂಲ ಕಾರಣ ವಿಟಮಿನ್ ಬಿ ಕೊರತೆ. ಹೆಚ್ಚೆಚ್ಚು ವಿಟಮಿನ್ ಬಿ ಅಂಶವಿರುವ ಪದಾರ್ಥಗಳನ್ನು ತೆಗೆದುಕೊಳ್ಳುವುದರಿಂದ ತುಟಿಯ ರಕ್ಷಣೆ ಮಾಡಿಕೊಳ್ಳಬಹುದು.
*ಕಾವ್ಯಶ್ರೀ