Advertisement

ಟಿಪ್ಪು ಜಯಂತಿ ಮುಸ್ಲಿಂ ಉಗ್ರವಾದಕ್ಕೆ ಪ್ರೇರಣೆ

08:32 AM Oct 24, 2017 | |

ಬೆಂಗಳೂರು: ರಾಜ್ಯ ಸರ್ಕಾರ ಟಿಪ್ಪು ಜಯಂತಿ ಆಚರಣೆ ಮಾಡುವುದರಿಂದಾಗಿ ಮುಸ್ಲಿಂ ಯುವಕರು ಉಗ್ರವಾದ ಕಡೆಗೆ
ಆಕರ್ಷಿತರಾಗುತ್ತಿದ್ದಾರೆ ಎಂದು ವಿಶ್ವಹಿಂದು ಪರಿಷತ್‌ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಗೋಪಾಲ್‌ ಆತಂಕ ವ್ಯಕ್ತಪಡಿಸಿದರು. ಟಿಪ್ಪು ಜಯಂತಿ ವಿರೋಧಿ ಹೋರಾಟ ಸಮಿತಿಯು ಸೋಮವಾರ ನಗರದ ಶಿವಾನಂದ ವೃತ್ತದ ಗುರುರಾಜ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಸಮಾವೇಶದಲ್ಲಿ ಮಾತನಾಡಿದ ಅವರು, ಟಿಪ್ಪು ಜಯಂತಿಯ ಆಚರಣೆ ಸಂವಿಧಾನ ತತ್ವಕ್ಕೆ ವಿರುದ್ಧವಾಗಿದೆ. ಇದರಿಂದ ಮುಸ್ಲಿಂ ಯುವಕರು ಉಗ್ರವಾದದ ಕಡೆಗೆ ಆಕರ್ಷಿತರಾಗಿ ಐಸಿಸ್‌ ಸೇರುತ್ತಿದ್ದಾರೆ. ರಾಜ್ಯದಲ್ಲಿ ಹಿಂದು ಸಂಘಟನೆಯ 13 ಮಂದಿ ಕಾರ್ಯಕರ್ತರ ಹತ್ಯೆಯಾಗಿದೆ. ಇದರೊಂದಿಗೆ ಸಮಾಜವು ಅಸುರಕ್ಷತೆ ಹಾಗೂ ಮತಾಂಧತೆಯ ಕಡೆಗೆ ಹೊರಳುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

Advertisement

ಟಿಪ್ಪು ಸ್ವಾತಂತ್ರ್ಯ ಹೋರಾಟಗಾರನಲ್ಲ. ಒಬ್ಬ ಸ್ವಾರ್ಥಿ ಹಾಗೂ ತನ್ನ ಸಾಮ್ರಾಜ್ಯ ವಿಸ್ತರಣೆಗಾಗಿ ಹೋರಾಟ ಮಾಡಿದ್ದಾನೆ. ತನ್ನ ನಿಲುವನ್ನು ಒಪ್ಪದವರನ್ನು, ವಿರೋಧಿಸಿದವರನ್ನು ಟಿಪ್ಪು ಡ್ರಾಪ್‌ನಲ್ಲಿ ತಳ್ಳಿ ಕೊಲೆ ಮಾಡುತ್ತಿದ್ದ ಎನ್ನುವುದನ್ನು ಇತಿಹಾಸ ಹೇಳುತ್ತದೆ.  ವೀರ ಮದಕರಿ ನಾಯಕರನ್ನು ವಿಷಹಾಕಿ ಕೊಂದಿರುವ ಬಗ್ಗೆ ಮುರುಘಾ ಮಠ ಪ್ರಕಟಿಸಿರುವ ಪುಸ್ತಕದಲ್ಲಿ
ಇದೆ ಎಂದು ಉಲ್ಲೇಖೀಸಿದರು.

ಉಂಡಮನೆಗೆ ಸಿಎಂ ದ್ರೋಹ: ಸಂಸದ ಪ್ರತಾಪ್‌ ಸಿಂಹ ಮಾತನಾಡಿ, ತಾರಾ ಸುಬ್ಬರಾವ್‌ ಪುಸ್ತಕ, ಮುರುಘಾ ಮಠದ ಪುಸ್ತಕ, ಮೈಸೂರು ವಿಶ್ವವಿದ್ಯಾಲಯದ ಪ್ರವಾಸಿ ಕಂಡ ಇಂಡಿಯಾ ಮೊದಲಾದ ಪುಸ್ತಕದಲ್ಲಿ ಟಿಪ್ಪು ಕ್ರೌರ್ಯದ ಬಗ್ಗೆ ಉಲ್ಲೇಖೀಸಲಾಗಿದೆ. ಈ ಪುಸ್ತಕಗಳನ್ನು ಸಂಘ ಪರಿವಾರದವರು ಬರೆದಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತರು ಬರೆದಿದ್ದಾರೆ. ಇದನ್ನೆಲ್ಲ ಇನ್ನೊಮ್ಮೆ ಅವರು ಓದಬೇಕು. ನಾಲ್ವಡಿ ಕೃಷ್ಣರಾಜ ಒಡೆಯರ ಬಗ್ಗೆ ಇಲ್ಲ ಸಲ್ಲದ ಮಾತನಾಡುತ್ತಾರೆ. ಯದುವಂಶ ನಾಶ ಮಾಡಿದ ಟಿಪ್ಪುವಿಗೆ ಬೆಂಬಲ ನೀಡುವ ಮೂಲಕ ಸಿಎಂ ಉಂಡಮನೆಗೆ ದ್ರೋಹ ಬಗೆಯುತ್ತಿದ್ದಾರೆ ಎಂದು ಆರೋಪಿಸಿದರು.

ಸಮಿತಿಯ ಅಧ್ಯಕ್ಷ ಅಡ್ಡಂಡ ಕಾರ್ಯಪ್ಪ, ಲೇಖಕ ರಾಬರ್ಟ್‌ ರೋಜಾರಿಯೋ, ಮೇಲ್ಮನೆ ಸದಸ್ಯ ಡಿ.ಎಸ್‌.ವೀರಯ್ಯ, ಎಸ್ಸಿ,ಎಸ್‌ಟಿ ಮೀಸಲಾತಿ ಹಿತರಕ್ಷಣ ವೇದಿಕೆ ಸಂಚಾಲಕ ಫ‌ಟಾಫ‌ಟ್‌ ಶ್ರೀನಿವಾಸ್‌ ಮೊದಲಾದವರು ಉಪಸ್ಥಿತರಿದ್ದರು. 

ಬಿಜೆಪಿ ಧೋರಣೆಗೆ ಸಚಿವ ಖಾದರ್‌ಆಕ್ರೋಶ 
ಬೆಂಗಳೂರು: ರಾಜ್ಯ ಸರ್ಕಾರ ಟಿಪ್ಪು ಜಯಂತಿ ಆಚರಿಸಲು ಮುಂದಾಗಿರುವುದನ್ನು ವಿರೋಧಿಸುತ್ತಿರುವ ಬಿಜೆಪಿಯ ಧೋರಣೆಗೆ ಪಶುಸಂಗೋಪನಾ ಸಚಿವ ಎ. ಮಂಜು ಹಾಗೂ ಆಹಾರ ಮತ್ತು ನಾಗರಿಕ ಸಚಿವ ಯು.ಟಿ. ಖಾದರ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಪಿಸಿಸಿ ಕಚೇರಿ ಯಲ್ಲಿ ಮಾತನಾಡಿದ ಅವರು, ಟಿಪ್ಪು ಜಯಂತಿಯನ್ನು ವಿರೋಧಿಸುವ ಮೂಲಕ ಬಿಜೆಪಿಯವರು ಸಮಾಜದಲ್ಲಿ ಅನಗತ್ಯ ಗೊಂದಲ ಸೃಷ್ಠಿಸಿ ಮುಂದಿನ ಚುನಾವಣೆಯಲ್ಲಿ ರಾಜಕೀಯ ಲಾಭ ಮಾಡಿಕೊಳ್ಳಲು ಯತ್ನಿಸುತ್ತಿ ದ್ದಾರೆ. ಪ್ರತಿಪಕ್ಷ ಬಿಜೆಪಿಯ ನಾಯಕರ ಕುತಂತ್ರಕ್ಕೆ ರಾಜ್ಯದ ಜನತೆ ಬಲಿಯಾಗಬಾರದು. ಟಿಪ್ಪು ಜಯಂತಿಯನ್ನು ಆಚರಿಸುವ ಮೂಲಕ ಬಿಜೆಪಿಗೆ ತಕ್ಕ ಉತ್ತರ ನೀಡುತ್ತೇವೆ ಎಂದು ಹೇಳಿದರು. 

Advertisement

ಟಿಪ್ಪು ಮೊದಲ ಭಯೋತ್ಪಾದಕ. ಸ್ವಾತಂತ್ರ್ಯ ಹೋರಾಟಗಾರನಲ್ಲ. ಟಿಪ್ಪು ಜಯಂತಿ ಟೆರರಿಸಂ ಡೇ ಆಗುತ್ತದೆ. ಕ್ರೈಸ್ತರ ಪವಿತ್ರ ದಿನದಂದು ಮಂಗಳೂರಿನ 23 ಚಚ್‌ ìಗಳನ್ನು ಟಿಪ್ಪು ನಾಶ ಮಾಡಿದ್ದಾನೆ. ಕ್ರೈಸ್ತ ಧರ್ಮದ ಮುಖಂಡರಿಗೆ ಈ ಬಗ್ಗೆ ಗೊತ್ತಿದ್ದರೂ ವಿರೋಧಿಸುತ್ತಿಲ್ಲ. ಜನಪ್ರತಿನಿಧಿಗಳಾದ ಆಸ್ಕರ್‌ ಫ‌ರ್ನಾಂಡಿಸ್‌, ಐವನ್‌ ಡಿಸೋಜಾ, ಲೋಬೋ ಮೊದಲಾದವರು ಈ ಬಗ್ಗೆ ಧ್ವನಿ ಎತ್ತುತ್ತಿಲ್ಲ. ಕ್ರೈಸ್ತ ಧರ್ಮದ ಮುಖಂಡರು ಈ ಬಗ್ಗೆ ಬಹಿರಂಗ ಪ್ರತಿಕ್ರಿಯೆ ನೀಡಬೇಕು.
 ●ರಾಬರ್ಟ್‌ ರೋಜಾರಿಯೋ, ಲೇಖಕ

ಸಮಾಜ ಸುಧಾರಣೆ, ಅಸ್ಪೃಶ್ಯತೆ ನಿವಾರಣೆ ಸೇರಿದಂತೆ ಯಾವುದೇ ಸಾಮಾಜಿಕ ಕಾರ್ಯವನ್ನು ಟಿಪ್ಪು ಸುಲ್ತಾನ್‌ ಮಾಡಿಲ್ಲ. ತಲೆಯ ಮೇಲೆ ಮಲಹೊರುವ ಪದ್ಧತಿಯನ್ನು ಮುಸ್ಲಿಂ ರಾಜರೇ ಮೊದಲು ಆರಂಭಿಸಿದ್ದು. ಇದನ್ನು ನಿಷೇಧ ಮಾಡಿಲ್ಲ. ಟಿಪ್ಪು ಆಸ್ಪತ್ರೆ ಅಥವಾ ಕಾಲೇಜನ್ನು ನಿರ್ಮಾಣ ಮಾಡಿಲ್ಲ. ಇಂಥ ಮತಾಂಧನ ಜಯಂತಿ ಮಾಡುವುದು ಸರಿಯಲ್ಲ.
 ●ಡಿ.ಎಸ್‌.ವೀರಯ್ಯ, ಮೇಲ್ಮನೆ ಸದಸ್ಯ

Advertisement

Udayavani is now on Telegram. Click here to join our channel and stay updated with the latest news.

Next