Advertisement

ವಿಧಾನಸೌಧದಲ್ಲೇ ಟಿಪ್ಪು ಜಯಂತಿ

06:00 AM Nov 08, 2018 | Team Udayavani |

ಬೆಂಗಳೂರು: ಟಿಪ್ಪು ಜಯಂತಿ ಆಚರಣೆ ವಿಚಾರದಲ್ಲಿ  ಸ್ಥಳದ ಬಗ್ಗೆ ಎದ್ದಿದ್ದ ಗೊಂದಲ ಬಗೆಹರಿದಿದ್ದು, ವಿಧಾನಸೌಧದ ಬ್ಯಾಂಕ್ವೆಂಟ್‌ ಹಾಲ್‌ನಲ್ಲೇ ನಡೆಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಈ ಸಂಬಂಧ ಸ್ವತಃ ಗೃಹ ಸಚಿವ ಪರಮೇಶ್ವರ್‌ ಅವರೇ ಈ ಬಗ್ಗೆ ದೃಢ ಪಡಿಸಿದ್ದಾರೆ. 

Advertisement

ಭದ್ರತೆ ಮತ್ತು ಹೆಚ್ಚು ಜನ ಸೇರಲು ಸಾಧ್ಯವಾಗಲ್ಲ ಎಂಬ ದೃಷ್ಟಿಯಿಂದ ಟಿಪ್ಪು ಜಯಂತಿಯನ್ನು ರವೀಂದ್ರ ಕಲಾಕ್ಷೇತ್ರಕ್ಕೆ ವರ್ಗಾಯಿಸಿರುವುದಾಗಿ ಉಪಮುಖ್ಯಮಂತ್ರಿ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಹೇಳಿದ್ದರು. ಈ ಬೆನ್ನಲ್ಲೇ ಪರಮೇಶ್ವರ್‌ ಅವರನ್ನು ಸಮನ್ವಯ ಸಮಿತಿ ಅಧ್ಯಕ್ಷ ಹಾಗೂ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಬಳಿ ಕರೆದುಕೊಂಡು ಹೋಗಿದ್ದ ವಕ್ಫ್ ಸಚಿವ ಜಮೀರ್‌ ಅಹ್ಮದ್‌ ಅವರು ವಿಧಾನಸೌಧದಲ್ಲೇ ಆಚರಣೆ ಮಾಡಿಸಲು ಒಪ್ಪಿಸಿದ್ದಾರೆ. 

ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ಜಯಂತಿ ಆಚರಣೆ ಸ್ಥಳದ ವಿಚಾರದಲ್ಲಿ ಗೊಂದಲ ಇದೆ. ಕಳೆದ ಮೂರು ವರ್ಷದಿಂದ ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿಯೇ ಆಚರಿಸಲಾಗುತ್ತಿದೆ. ಸಿದ್ದರಾಮಯ್ಯ ಅವರ ಬಳಿ ಇದೆ ವಿಚಾರ ಮಾತನಾಡಿದ್ದೇನೆ. ಅವರು ವಿಧಾನಸೌಧದದ‌ಲ್ಲಿಯೇ ಮಾಡುವಂತೆ ಹೇಳಿದ್ದಾರೆ ಎಂದು ತಿಳಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಜಯಮಾಲಾರೊಂದಿಗೆ ಸೇರಿ ಮುಖ್ಯಮಂತ್ರಿ ಕುಮಾರಸ್ವಾಮಿಯನ್ನೂ ಭೇಟಿ ಮಾಡಿ  ಮನವಿ ಮಾಡಿದ್ದೇವೆ. ಟಿಪ್ಪು ಜಯಂತಿ ಆಚರಿಸಲು ವಿಧಾನಸೌಧವೇ ಸುರಕ್ಷಿತ ಪ್ರದೇಶವಾಗಿದೆ. ಬಿಜೆಪಿಯವರು ರಾಜಕೀಯಕ್ಕಾಗಿ ಪ್ರತಿಭಟನೆ ಮಾಡುತ್ತಾರೆ. ಇದರಲ್ಲಿ ರಾಜಕೀಯ ಮಾಡುವುದು ಬೇಡ. ಟಿಪ್ಪು ಜಯಂತಿ ಆಚರಣೆಗೆ ಬಿಜೆಪಿಯವರೂ ಸರ್ಕಾರದ ಜೊತೆ ಕೈ ಜೋಡಿಸಲಿ. ಯಡಿಯೂರಪ್ಪ, ಅಶೋಕ್‌, ಶೋಭಾ ಕರಂದ್ಲಾಜೆ ಟಿಪ್ಪು ಜಯಂತಿ ಮಾಡಿರಲಿಲ್ಲವೇ ? ಬಿಜೆಪಿಯವರು ಮಾಡಿದ್ದು ರಾಜಕೀಯ ಅಲ್ವಾ ಎಂದು ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next