Advertisement

ಟಿಪ್ಪು ಜಯಂತಿ ಆಚರಣೆ: ಮೂಲ್ಕಿಯಲ್ಲಿ ಬಂದೋಬಸ್ತ್

11:55 AM Nov 11, 2017 | |

ಹಳೆಯಂಗಡಿ: ಜಿಲ್ಲೆಯಲ್ಲಿ ನಡೆದ ಟಿಪ್ಪು ಜಯಂತಿ ಆಚರಣೆಗೆ ಬಿಜೆಪಿ ಸಹಿತ ಹಲವು ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಶುಕ್ರವಾರ ಮೂಲ್ಕಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಬಿಗಿ ಬಂದೋ ಬಸ್ತ್ ಮಾಡಲಾಗಿತ್ತು.

Advertisement

ದ.ಕ., ಉಡುಪಿ ಜಿಲ್ಲೆಯಲ್ಲಿ ಶಾಂತಿಯುತವಾಗಿ ಆಚರಣೆ ನಡೆಸಲು ಜಿಲ್ಲಾಡಳಿತ ಸೂಚನೆ ನೀಡಿದ್ದರಿಂದ ಎರಡೂ ಜಿಲ್ಲೆಯ ಗಡಿ ಪ್ರದೇಶವಾದ ಮೂಲ್ಕಿಯಲ್ಲಿ ಪೊಲೀಸ್‌ ಸಿಬಂದಿ ಹೋಬಳಿಯ ಎಲ್ಲ ಆಯಾ ಕಟ್ಟಿನಲ್ಲಿ ಕಟ್ಟೆಚ್ಚರ ವಹಿಸಿದ್ದರು.

ಕಿನ್ನಿಗೋಳಿಯ ಮೂರು ಕಾವೇರಿ, ಮೂಲ್ಕಿ ಬಳಿಯ ಕಾರ್ನಾಡು, ಹಳೆಯಂಗಡಿಯ ಪಕ್ಷಿಕೆರೆ ರಸ್ತೆಯಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಿ ಮುಂಜಾನೆಯಿಂದಲೇ ಸಂಶಯಿತ ವಾಹನಗಳನ್ನು ತಪಾಸಣೆ ನಡೆಸಿದರು. ಮಧ್ಯಾಹ್ನದವರೆಗೆ ಬಿಗಿ ಬಂದೋ ಬಸ್ತ್  ನ್ನು  ನೀಡಲಾಗಿತ್ತು. ಅನಂತರ ಸ್ವಲ್ಪ ಸಡಿಲಗೊಳಿಸಲಾಯಿತು.

ಮೂಲ್ಕಿ ಹೋಬಳಿಯ ಕೆ.ಎಸ್‌.ರಾವ್‌ನಗರ, ಕಾರ್ನಾಡು, ಕಿನ್ನಿಗೋಳಿ, ಪಕ್ಷಿಕೆರೆ, ಇಂದಿರಾನಗರ, ಎಸ್‌.ಕೋಡಿಯಂತಹ
ಸೂಕ್ಷ್ಮಪ್ರದೇಶಗಳಲ್ಲಿ ಪೊಲೀಸರನ್ನು ನಿಯುಕ್ತಿಗೊಳಿಸಲಾಗಿತ್ತು. ಹೋಬಳಿಯ ಎಲ್ಲಾ ಗ್ರಾಮೀಣ ಪ್ರದೇಶದಲ್ಲೂ ಸಹ ವಿಶೇಷ ಬೀಟ್‌ಗಳನ್ನು ನಡೆಸಲಾಯಿತು.

ಅಹಿತಕರ ಘಟನೆ ನಡೆದಿಲ್ಲ
ಮಂಗಳೂರು ಕಮಿಷನರೇಟ್‌ ವ್ಯಾಪ್ತಿಯ ಮೂಲ್ಕಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಮೇಲಾಧಿಕಾರಿಗಳ ಆದೇಶದಂತೆ ಪ್ರಮುಖ ಮೂರು ಕಡೆಗಳಲ್ಲಿ ನಾಕಾಬಂದಿ ಹಾಗೂ ಎಲ್ಲ ಪ್ರದೇಶಗಳಲ್ಲಿ ಬೀಟ್‌ ಮಾಡಿದ್ದೇವೆ. ಹೆದ್ದಾರಿಯಲ್ಲಿ ಸಂಚಾರಕ್ಕೆ ಯಾವುದೇ ಅಡತಡೆ ಮಾಡಿಲ್ಲ, ಒಳ ಪ್ರದೇಶದಲ್ಲಿ ಮಾತ್ರ ವಾಹನಗಳ ತಪಾಸಣೆ ನಡೆದಿದೆ. ಯಾವುದೇ ಅಹಿತಕರ ಘಟನೆ ಸಂಭವಿಸಿಲ್ಲ. 

Advertisement

ಅನಂತ ಪದ್ಮನಾಭ ,
 ಇನ್‌ಸ್ಪೆಕ್ಟರ್‌,ಮೂಲ್ಕಿ ಠಾಣೆ 

Advertisement

Udayavani is now on Telegram. Click here to join our channel and stay updated with the latest news.

Next