ಕುಂಬಳೆ: ಮಂಜೇಶ್ವರ ಹೊಸಂಗಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಟಿಪ್ಪರ್ ಲಾರಿ ಮತ್ತು ಬೈಕ್ ಢಿಕ್ಕಿ ಹೊಡೆದು ಕಾಲೇಜು ವಿದ್ಯಾರ್ಥಿಯೋರ್ವ ಸ್ಥಳದಲ್ಲಿಯೇ ಮೃತಪಟ್ಟಿದ್ದು ಇನ್ನೋರ್ವ ವಿದ್ಯಾರ್ಥಿ ಗಂಭೀರವಾಗಿ ಗಾಯಗೊಂಡು ಮಂಗಳೂರು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕುಂಬಳೆ ಮಹಾತ್ಮಾ ಕಾಲೇಜು ವಿದ್ಯಾರ್ಥಿ ಹಾಗೂ ಕುಂಜತ್ತೂರು ಫಾರೂಕ್ ಎಂಬವರ ಪುತ್ರ ಹಾದಿಲ್ ಪರೀಕ್ಷೆ ಬರೆದು ಮಿತ್ರನೊಂದಿಗೆ ಮರಳುತ್ತಿದ್ದಾಗ ಹೊಸಂಗಡಿಯಲ್ಲಿ ಹೆದ್ದಾರಿ ಕಾಮಗಾರಿಯ ಟಿಪ್ಪರ್ ಲಾರಿ ಬೈಕ್ಗೆ ಢಿಕ್ಕಿ ಹೊಡೆದಿತ್ತು. ಹಾದಿಲ್ ಸ್ಥಳದಲ್ಲಿಯೇ ಮೃತಪಟ್ಟಿದ್ದರೆ ಇನ್ನೋರ್ವ ವಿದ್ಯಾರ್ಥಿ ಕುಂಜತ್ತೂರು ಉಬೈದ್ ಅವರ ಪುತ್ರ ಹರ್ಷಾದ್ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದರು. ಢಿಕ್ಕಿಯಿಂದಾಗಿ ಬೈಕ್ ನಜ್ಜು ಗುಜ್ಜಾಗಿದೆ.ಮಂಜೇಶ್ವರ ಪೊಲಿಸರು ಪ್ರಕರಣ ದಾಖಲಿಸಿದ್ದಾರೆ.