ಉಡುಪಿ: ಬೈಕ್‌ಗೆ ಹಿಂಬದಿಯಿಂದ ಟಿಪ್ಪರ್ ಢಿಕ್ಕಿ ಹೊಡೆದು ಸವಾರ ಸಾವನ್ನಪ್ಪಿದ ಘಟನೆ ನಿಟ್ಟೂರು ಬಳಿ ಗುರುವಾರ ರಾತ್ರಿ ನಡೆದಿದೆ.
Advertisement
ಅಂಬಾಗಿಲು ನಿವಾಸಿ ಅಬ್ದುಲ್ ರಶೀದ್ (60) ಮೃತಪಟ್ಟವರು. ಸಮೋಸಾ ವ್ಯಾಪಾರಿಯಾಗಿದ್ದ ಇವರು ಕೆಲಸ ಮುಗಿಸಿಕೊಂಡು ಕರಾವಳಿ ಬೈಪಾಸ್ ಮಾರ್ಗವಾಗಿ ಅಂಬಾಗಿಲಿನ ತನ್ನ ಮನೆಗೆ ತೆರಳುತ್ತಿದ್ದರು. ಮಣಿಪಾಲ ಇನ್ ಹೊಟೇಲ್ ಬಳಿ ತಲುಪುತ್ತಿದ್ದಂತೆ ಹಿಂಬದಿಯಿಂದ ಅತೀ ವೇಗದಲ್ಲಿ ಆಗಮಿಸಿದ ಟಿಪ್ಪರ್ ಚಾಲಕ ಬೈಕ್‌ಗೆ ಹಿಂದಿನಿಂದ ಢಿಕ್ಕಿ ಹೊಡೆದಿದ್ದ. ಢಿಕ್ಕಿಯ ರಭಸಕ್ಕೆ ಅವರು ಹಾಕಿದ್ದ ಹೆಲ್ಮೆಟ್ ಕೂಡ ನಜ್ಜುಗುಜ್ಜಾಗಿದೆ. ಉಡುಪಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.